ಬೆಳಗಾವಿಯಲ್ಲಿ ಮತ್ತೆ ಪುಂಡಾಟ ಮರೆದ ಎಂಇಎಸ್ ಬೆಂಬಲಿತ ಸದಸ್ಯರು| ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ನಾಲಿಗೆ ಹರಿಬಿಟ್ಟ ಎಂಇಎಸ್ ಸದಸ್ಯ ಸುನೀಲ್ ಅಷ್ಟೇಕರ್| ಮಹಾರಾಷ್ಟ್ರದ ಚಂದಗಡ NCP ಶಾಸಕ ರಾಜೇಶ್ ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ಲಕ್ಷ್ಮಣ ಸವದಿ|
ಬೆಳಗಾವಿ(ಜ.09): ಬೆಳಗಾವಿಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯರ ಮತ್ತೆ ಪುಂಡಾಟ ಮರೆದಿದ್ದಾರೆ. ಹೌದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ 'ಹರಾಮಕೋರ್' ಎಂದು ಹೇಳುವ ಮೂಲಕ ಎಂಇಎಸ್ ತಾ.ಪಂ.ಸದಸ್ಯ ಸುನೀಲ್ ಅಷ್ಟೇಕರ್ ನಾಲಿಗೆ ಹರಿಬಿಟ್ಟಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಬೆಳಗಾವಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮುತಗಾ ತಾ.ಪಂ. ಸದಸ್ಯ ಸುನೀಲ್ ಅಷ್ಟೇಕರ್ ಲಕ್ಷ್ಮಣ್ ಸವದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ನಗರ ಪ್ರವೇಶ ನಿಷೇಧಿಸುವಂತೆ ಎಂಇಎಸ್ ತಾ.ಪಂ.ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಚಂದಗಡ NCP ಶಾಸಕ ರಾಜೇಶ್ ಪಾಟೀಲ್ ನಾಡದ್ರೋಹಿ ಹೇಳಿಕೆ ನೀಡಿದ್ದರು. ರಾಜೇಶ್ ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ ಅವರು, 'ಬೊಗಳೋ ನಾಯಿಗೆ ನಾವು ಕಚ್ಚಲ್ಲ' ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕಾರವಾಗಿ ಎಂಇಎಸ್ ಸದಸ್ಯ ಸುನೀಲ್ ಅಷ್ಟೇಕರ್ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
