ಬೆಳಗಾವಿ(ಜ.17): ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಕ್ಯಾತೆ ತೆಗೆಯುವ ಎಂಇಎಸ್‌ ನಾಯಕರು ಇದೀಗ ಮತ್ತೊಂದು ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಗುರುವಾರ ನಗರದಲ್ಲಿ ನಡೆದ ಎಂಇಎಸ್ ಹುತಾತ್ಮ ದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಂಇಎಸ್ ಮುಖಂಡ ಕಿರಣ್ ಠಾಕೂರ್, ಕರ್ನಾಟಕ ಸರ್ಕಾರ ಮಹಾಜನ್‌ಗೆ ಲಂಚ ಕೊಟ್ಟು ವರದಿ ತಯಾರಿಸಿದೆ. ಮಹಾಜನ್‌ಗೆ ಬ್ಯಾಗ್, ಬಂಗಲೆಯನ್ನು ಕರ್ನಾಟಕ ಸರ್ಕಾರ ಕೊಟ್ಟಿದೆ ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ. 

ಮಹಾಜನ್ ಜಡ್ಡ್ ಇದ್ದನೋ, ಕರ್ನಾಟಕದ ವಕೀಲನಿದ್ದನೋ, ನ್ಯಾಯಮೂರ್ತಿ ಹಣ ಪಡೆದರೆ ಆಗೋ ಪರಿಣಾಮ ನಮ್ಮ ಮೇಲೆ ಆಗಿದೆ. ಮಹಾಜನ್‌ ವರದಿ ಪ್ರಕಾರ 264 ಗ್ರಾಮಗಳು ಮಹಾರಾಷ್ಟ್ರಕ್ಕೆ ಬರೇಬಕಿತ್ತು. ಕರ್ನಾಟಕಕ್ಕೆ ಮಹಾರಾಷ್ಟ್ರಕ್ಕಿಂತ 20 ಗ್ರಾಮಗಳು ಹೆಚ್ಚು ಬಂದಿದ್ದವು. ಮಹಾಜನ್‌ ವರದಿಯಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ ಎಂದು ಆರೋಪಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾಜನ್‌ ನ್ಯಾಯಾಧೀಶರಿದ್ದರೋ ಅಥವಾ ಕರ್ನಾಟಕ ಪರ ವಕೀಲರು ಇದ್ರಾ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ. ಮಹಾಜನ್‌ ಆಯೋಗದ ಬಗ್ಗೆ ಆಚಾರ್ಯ ಅತ್ರೆ ವಿರೋಧ ಮಾಡಿದ್ದರು. ನಾಥಪೈ ಈ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದರು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಗೆ ಈ ಬಗ್ಗೆ ದೂರು ಕೊಡಲು ಶಿವಸೇನೆಯವರು ಹೊಗಿದ್ದರು. ಈ ವೇಳೆಯಲ್ಲಿ ದೇಸಾಯಿ ಓಡಿ ಹೋದ್ರು ಹೀಗಾಗಿ ಗಲಭೆ ಆಗಿತ್ತು ಎಂದು ಹೇಳಿದ್ದಾರೆ. 

ಅಂದು ನಡೆದ ಗಲಭೆಯಲ್ಲಿ 67 ಜನ ಶಿವಸೇನೆ ಕಾರ್ಯಕರ್ತರು ಹುತಾತ್ಮರಾಗಿದ್ದರು. ಮಹಾರಾಷ್ಟ್ರಕ್ಕೆ ಹೋರಾಟ ಮಾಡದೇ ಯಾವುದು ಸಿಕ್ಕೇ ಇಲ್ಲ. 1956ರಿಂದ ಬೆಳಗಾವಿಗಾಗಿ ಮಹಾರಾಷ್ಟ್ರ ಹೋರಾಟ ನಡೆಸುತ್ತಾ ಬಂದಿದೆ. ಮಹಾರಾಷ್ಟ್ರದ ಕೆಲಭಾಗವನ್ನು ಗುಜರಾತ್, ಮಧ್ಯಪ್ರದೇಶದಕ್ಕೆ ನೀಡಲಾಗಿದೆ. ಭಾಷಾವಾರು ರಾಜ್ಯ ವಿಗಂಡೆಯಲ್ಲಿ ಮಹಾರಾಷ್ಟ್ರಕ್ಕೆ ಸಾಕಷ್ಟು ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ.