ನ್ನಡ ಧ್ವಜ ತೆರವುಗೊಳಿಸದಿದ್ದರೆ ನಾವು ಭಗವಾಧ್ವಜ ಹಾರಿಸುತ್ತೇವೆ | ಡೀಸಿಗೆ ನೀಡಿದ ಮನವಿಯಲ್ಲಿ ಎಂಇಎಸ್ ಎಚ್ಚರಿಕೆ
ಬೆಳಗಾವಿ(ಜ.03): ಸರ್ಕಾರಿ ಕಚೇರಿಯ ಆವರಣದ ಮುಂಭಾಗದಲ್ಲಿ ಯಾವುದೇ ಅನಧಿಕೃತ ಧ್ವಜ ಇರಬಾರದು ಎಂದು ಹೈಕೋರ್ಟ್ ಆದೇಶವಿದ್ದರೂ, ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕೆಂಪು, ಹಳದಿ ಬಾವುಟ ಹಾರಿಸಲಾಗಿದೆ.
ಇದು ಕಾನೂನುಬಾಹಿರ. ಅದನ್ನು ಜಿಲ್ಲಾಡಳಿತ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ಎಂಇಎಸ್ ಕಾರ್ಯಕರ್ತರು ಮತ್ತೆ ಕ್ಯಾತೆ ತೆಗೆದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
400 ಮಂದಿಗೆ ಕೋವಿಡ್ ಲಸಿಕೆ ವಿತರಣೆ ತಾಲೀಮು
ಸ್ಥಳೀಯ ರಾಜಕೀಯ ಪ್ರಭಾವದಿಂದ ಬೆರಳೆಣಿಕೆಯಷ್ಟುಕನ್ನಡ ಸಂಘಟನೆಯವರು ಪ್ರಚಾರ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಆವರಣದ ರಾಷ್ಟ್ರ ಧ್ವಜದ ಎದುರು ಅನಧಿಕೃತವಾಗಿ ಕೆಂಪು, ಹಳದಿ ಬಾವುಟ ನೆಟ್ಟು ಉದ್ಧಟತನ ಮೆರೆದಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಅದರ ಪಕ್ಕದಲ್ಲಿಯೇ ಭಾಗವಾ ಧ್ವಜ ಹಾಕುವುದಾಗಿ ಹೇಳಿತ್ತು. ಆದರೆ ಜಿಲ್ಲಾಡಳಿತ ಸೂಚನೆ ಮೇರೆಗೆ ನಾವು ಸುಮ್ಮನಿದ್ದೇವೆ. ಕೆಲ ಕನ್ನಡ ಸಂಘಟನೆಯವರು ಪುಂಡಾಟಿಕೆ ಮಾಡುವುದರ ಮೂಲಕ ಪಾಲಿಕೆ ಎದುರು ಕೆಂಪು, ಹಳದಿ ಧ್ವಜ ಹಾಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಲ್ಲದೆ ಪೊಲೀಸರಿಗೆ ತೊಂದರೆ ಮಾಡಿದ್ದಾರೆ. ಕೂಡಲೇ ಆ ಧ್ವಜ ತೆರವುಗೊಳಿಸದಿದ್ದರೆ ಭಾಗವಾ ಧ್ವಜ ಹಾರಿಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 3, 2021, 8:26 AM IST