Asianet Suvarna News Asianet Suvarna News

ಪೊಲೀಸ್‌ ಹಲ್ಲೆಯಿಂದ ಮಾನಸಿಕ ಅಸ್ವಸ್ಥ ಸಾವು ಆರೋಪ : ಸಿಐಡಿ ತಂಡದಿಂದ ತನಿಖೆ

  • ಠಾಣೆಯಿಂದ ಮನೆಗೆ ಕರೆತರಲಾಗಿದ್ದ ಮಾನಸಿಕ ಅಸ್ವಸ್ಥ ಸಾವು
  • ಪೊಲೀಸ್ ಹಲ್ಲೆಯಿಂದ ಮಾನಸಿಕ ಅಸ್ವಸ್ಥ ಸಾವು ಆರೋಪ
  • ಪ್ರಕರಣ ಸಂಬಂಧ ಸಿಐಡಿ ತಂಡದಿಂದ ತನಿಖೆ
Mentally unstable man beaten to death in by Coorg police, CID Begins Probe snr
Author
Bengaluru, First Published Jun 13, 2021, 4:09 PM IST

ಮಡಿಕೇರಿ (ಜೂ.13): ವಿರಾಜಪೇಟೆ ಠಾಣೆಯಿಂದ ಮನೆಗೆ ಕರೆತರಲಾಗಿದ್ದ ಮಾನಸಿಕ ಅಸ್ವಸ್ಥ ರಾಯ್ ಡಿಸೋಜಾ ಮೃತಪಟ್ಟಿರುವ ಘಟನೆ ಸಂಬಂಧ ಸಿಐಡಿ ತಂಡದಿಂದ ತನಿಖೆ ನಡೆಯಲಿದೆ. 

ಹೆಚ್ಚಿನ ತನಿಖೆ ನಡೆಸಲು ಕೊಡಗು ಜಿಲ್ಲೆಯ ವಿರಾಜಪೇಟೆಗೆ ಸಿಐಡಿ ತಂಡ ಆಗಮಿಸಿದೆ. ಸಿಐಡಿಯ ತಂಡದ ನಾಲ್ವರು ಅಧಿಕಾರಿಗಳಿಂದ ಈ ಪ್ರಕರಣದ ತನಿಖೆ ನಡೆಯಲಿದೆ.  ಈ ವ್ಯಕ್ತಿಯ ಸಾವಿಗೆ ಪೊಲೀಸರ ಹಲ್ಲೆ ಕಾರಣ ಎಂದು ಕುಟುಂಬವು ದೂರಿತ್ತು. 

ಅತ್ತಿಗೆ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ನಾದಿನಿ ...

ಎಚ್‌ಡಿಕೆ ಸಾಂತ್ವನ : ಇನ್ನು ರಾಯ್ ಡಿಸೋಜಾ ಕುಟುಂಬಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಮುಂದಿನ ಅಧಿವೇಶನದ ಸಂದರ್ಭ ಪ್ರಸ್ತಾಪ ಮಾಡುವ ಭರವಸೆ ನೀಡಿದ್ದಾರೆ. 

ಎಎಸ್‌ಐ ಡೀಲಿಂಗೋ ಡಿಲಿಂಗ್...ಡಿಸಿಪಿ ಕಚೇರಿಯ ASI ಲಂಚಾವತಾರ ಬಟಾಬಯಲು ...

ಪ್ರಕರಣ ಹಿನ್ನೆಲೆ : ವಿರಾಜಪೇಟೆ ಚಿಕ್ಕಪೇಟೆ ನಿವಾಸಿ ರಾಯ್‌ ಡಿಸೋಜ(50) ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಜೂ.9ರಂದು ರಾತ್ರಿ 12ರ ಸುಮಾರಿಗೆ ಕತ್ತಿ ಹಿಡಿದು ಪಟ್ಟಣದಲ್ಲಿ ಓಡಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಎನ್ನಲಾಗಿದೆ. ಬಳಿಕ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಲಾಠಿ ಬೀಸಿದ್ದಾರೆ. ನಂತರ ಡಿಸೋಜನನ್ನು ತಾಯಿ ಮನೆಗೆ ಕರೆದೊಯ್ದಿದ್ದರು. 

ಆದರೆ, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಡಿಸೋಜ ಶನಿವಾರ ಬೆಳಗ್ಗೆ ಮೃತಪಟ್ಟಿದ್ದರು. 

Follow Us:
Download App:
  • android
  • ios