ಮಂಗಳೂರು[ಮಾ.13]: ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಬಜರಂಗದಳದ ಕಾರ್ಯಕರ್ತನಿಗೆ ಮಾ. 4ರಂದು ರಾತ್ರಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ಡಿವೈಎಸ್‌ಪಿ ಮತ್ತು ಸಂಪ್ಯ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿ ಕರ್ನಾಟಕ ಕೇರಳ ಗಡಿ ಪ್ರದೇಶವಾದ ಪಾಣಾಜೆ ಸಮೀಪ ಬಂಧಿಸಿದೆ.

ಸವಣೂರು ನಿವಾಸಿ ಶಮೀರ್‌ ಯಾನೆ ಚಮ್ಮಿ(29)ಮತ್ತು ಮುಕ್ವೆ ನಿವಾಸಿ ಜೈನುಲ್‌ ಆಬಿದ್‌(27) ಬಂಧಿ​ತರು. ಆರೋ​ಪಿ​ಗ​ಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಘಟನೆ ನಡೆಸಿದ ಸ್ಥಳಕ್ಕೆ ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ.

ಯುವ JDS ಅಧ್ಯಕ್ಷನಿಗೆ ಜೀವ ಬೆದರಿಕೆ

ಆರೋಪಿಗಳ ಪೈಕಿ ನಾಸಿರ್‌ ಮತ್ತು ನಝೀರ್‌ ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.