Asianet Suvarna News Asianet Suvarna News

ಮಾದರಿ ಕ್ಷೇತ್ರವಾಗಿ ಮೇಲುಕೋಟೆ ಅಭಿವೃದ್ಧಿ

ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಪಡಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರ ಸೇವೆಗಾಗಿ ನನ್ನ ಇಡೀ ಕುಟುಂಬವನ್ನು ಮುಡುಪಾಗಿಟ್ಟು ನಾವು ದುಡಿದ ಹಣದಲ್ಲಿ ಕ್ಷೇತ್ರದ ಜನರ ಸೇವೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

Melukota development as a model sector snr
Author
First Published Mar 11, 2023, 5:59 AM IST

 ಪಾಂಡವಪುರ :  ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಪಡಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರ ಸೇವೆಗಾಗಿ ನನ್ನ ಇಡೀ ಕುಟುಂಬವನ್ನು ಮುಡುಪಾಗಿಟ್ಟು ನಾವು ದುಡಿದ ಹಣದಲ್ಲಿ ಕ್ಷೇತ್ರದ ಜನರ ಸೇವೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಸರ್ಕಲ್‌ನಲ್ಲಿ ನಡೆದ ಚಿಕ್ಕಾಡೆ ಜಿಪಂ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಕಾರ‍್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದಲ್ಲಿ ಶಾಸಕ, ಸಂಸದನಾಗಿ ಕೆಲಸ ಮಾಡುವ ವೇಳೆ ಕ್ಷೇತ್ರದ ಜನರ ಮಧ್ಯೆ ಇದ್ದು ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಜನರಿಗಾಗಿ ಮಗನನ್ನು ಕರೆತಂದೆ:

ನನ್ನ ಮಗ ಸಿ.ಪಿ.ಶಿವರಾಜು ಅವರು ಅಮೇರಿಕದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮುಗಿಸಿದರು. ಆತನಿಗೆ ಅಮೇರಿಕದಲ್ಲಿಯೇ ಉದ್ಯೋಗ ಸೃಷ್ಠಿಸಿಕೊಂಡು ಸ್ವಂತ ಕಂಪನಿ ಸ್ಥಾಪಿಸುವ ಎಲ್ಲಾ ರೀತಿಯ ಅವಕಾಶಗಳು ಇತ್ತು. ಆದರೆ, ನಾನು ನಮಗೆ ಎಲ್ಲವನ್ನು ಕೊಟ್ಟಂತಹ ಕ್ಷೇತ್ರದ ಜನರಿಗಾಗಿ ನಾವು ಬದುಕಬೇಕು ನೀನು ಎಷ್ಟೇ ಓದಿದರು ಸಹ ನಿನ್ನ ಸೇವೆ ನನ್ನ ಜನರಿಗಾಗಿ ಮೀಸಲಿಡಬೇಕು ಎಂದು ನನ್ನ ಮಗನಿಗೆ ಸೂಚಿಸಿದ ಮೇರೆಗೆ ನಮ್ಮ ದೇಶಕ್ಕೆ ವಾಪಸ್ಸು ಆಗಮಿಸಿ ಕ್ಷೇತ್ರದ ಜನರ ಸೇವೆ ಮಾಡುವ ಕೆಲಸ ಮಾಡುತ್ತಿದ್ದಾನೆ. ನನ್ನ ಅಣ್ಣನ ಮಕ್ಕಳು ಸೇರಿದಂತೆ ಎಲ್ಲರನ್ನು ನನ್ನ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಒಂದೊಂದು ಹೋಬಳಿಗೆ ಒಬ್ಬರನ್ನು ನೇಮಿಸಿ ನಾವು ದುಡಿದ ಒಂದಿಷ್ಟುಹಣದಲ್ಲಿ ಜನಸೇವೆ ಮಾಡುವಂತೆ ಸೂಚಿಸಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರಾಣ ಲೆಕ್ಕಿಸದೆ ಕೆಲಸ ಮಾಡಿರುವೆ:

ಇಡೀ ಜಗತ್ತನ್ನೆ ಬೆಚ್ಚಿಬೀಳಿಸಿದ ಕೋವಿಡ್‌-19 ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನರಿಗಾಗಿ ನನ್ನ ಪ್ರಾಣವನ್ನು ಲೆಕ್ಕಿಸಲದೆ ಕೆಲಸ ಮಾಡಿದ್ದೇನೆ. ಕೋವಿಡ್‌ ಬಂದ ವ್ಯವಸ್ಥೆಯನ್ನು ಅವರ ಮನೆಯವರೆ ಮುಟ್ಟದೆ ದೂರ ನಿಂತುಕೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು ನನ್ನ ಪ್ರಾಣದ ಹಂಗುತೊರೆದು ಕೆಲಸ ಮಾಡಿದ್ದೇನೆ. ಕೋವಿಡ್‌ನಿಂದ ಮೃತಪಟ್ಟವರನ್ನು ಖದ್ದು ಭೇಟಿಕೊಟ್ಟು ಅವರನ್ನು ಅಂತ್ಯಕ್ತಿಯೆ ಮಾಡಿಸಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ಜನತೆಗೆ ಚಿಕಿತ್ಸೆ, ಔಷಧ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಿದ್ದೇನೆ ಎಂದರು.

ನೀರಾವರಿ ಸೌಲಭ್ಯ:

ಸಚಿವನಾದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಎಲ್ಲಾ ಭಾಗಕ್ಕೂ ನೀರಾವರಿ ಸೌಲಭ್ಯ ಒದಗಿಸಿಕೊಡುವ ಕೆಲಸ ಮಾಡಿದ್ದೇನೆ. ದುದ್ದ ಹೋಬಳಿಗೆ 188 ಕೋಟಿ ರು. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಆ ಭಾಗಕ್ಕೆ ನೀರಾವರಿ ಸೌಲಭ್ಯ, ಮೇಲುಕೋಟೆ, ಚಿನಕುರಳಿ ಭಾಗಕ್ಕೂ ಸಹ ಹಲವು ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.

ಚಿಕ್ಕಾಡೆ ಜಿಪಂ ಕ್ಷೇತ್ರದಲ್ಲಿ ನಡೆಯುತ್ತಿರುವ ಜೆಡಿಎಸ್‌ ಕಾರ‍್ಯಕರ್ತರ ಸಭೆಯಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಜನರು ಸೇರಿರುವುದನ್ನು ನೋಡಿದರೆ ಇದೊಂದು ವಿಜಯ ಸಂಕೇತವಾಗಿದ್ದು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಮತ್ತಷ್ಟುಸೇವೆ ಮಾಡಲು ಅವಕಾಶ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ಯಶ್ವಂತ್‌ಕುಮಾರ್‌ ಮಾತನಾಡಿ, ಸಿ.ಎಸ್‌.ಪುಟ್ಟರಾಜು ಅವರು ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಸರ್ವತೋಮುಖವಾದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕಾವೇರಿ ನದಿಯಿಂದ ನೀರು ತಂದುಕೊಡುವ ವಿಷಯ ಅಷ್ಟುಸುಲಭವಲ್ಲ. ಜನರ ಕಷ್ಟಕಾರ್ಪಣ್ಯಗಳಿಗೆ ತಕ್ಷಣವೇ ಸ್ಪಂಧಿಸಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾಗಿ ಇವರು ಮಾಡಿದ ಸೇವಾ ಕಾರ‍್ಯ ಜನಮೆಚ್ಚುವಂತಹದ್ದು, ಜನ್ನ ಪ್ರಾಣದ ಹಂಗುತೊರೆದು ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದರು.

ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಮಲ್ಲೇಶ್‌, ಸಿ.ಪಿ.ಶಿವರಾಜು, ಚಿಕ್ಕಾಡೆ ಚೇತನ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ಯಶ್ವಂತ್‌ಕುಮಾರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಡಿ.ಶ್ರೀನಿವಾಸ್‌, ನಿರ್ದೇಶಕ ಕಣಿವೆ ಯೋಗೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತ, ಉದ್ಯಮಿ ಹುಲ್ಕೆರೆಕೊಪ್ಪಲು ಮಧುಸೂದನ್‌, ವಿ.ಎಸ್‌.ನಿಂಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್‌.ಎಸ್‌.ವಿ.ಸ್ವಾಮೀಗೌಡ, ಮುಖಂಡರಾದ ಬೊಮ್ಮರಾಜು, ಆನಂದ್‌, ಚನ್ನೇಗೌಡ, ಸಿ.ಎನ್‌.ಚೇತನ್‌, ಪಾಂಡು, ಡೇರಿ ಮಾಜಿ ಅಧ್ಯಕ್ಷ ಸಿ.ಎನ್‌.ಚಂದನ್‌ ಸೇರಿದಂತೆ ಚಿಕ್ಕಾಡೆ ಜಿಪಂ ಕ್ಷೇತ್ರದ ಎಲ್ಲಾ ಜೆಡಿಎಸ್‌ ಮುಖಂಡರು ಕಾರ‍್ಯಕರ್ತರು ಹಾಜರಿದ್ದರು.

ಬೆಳ್ಳಿ ಗದೆ ನೀಡಿ ಅಭಿನಂದನೆ

ಇದೇ ವೇಳೆ ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೆ ಕಾರ‍್ಯಕರ್ತರು ಬೆಳ್ಳಿ ಗದೆ ಕೊಟ್ಟು ಅಭಿನಂದನೆ ಸಲ್ಲಿಸಿದರು. ಕಳೆದ ಗ್ರಾಪಂ, ಡೇರಿ, ವಿಎಸ್‌ಎಸ್‌ಎನ್‌ವಿ ಚುನಾವಣೆಯಲ್ಲಿ ಆಯ್ಕೆಯಾದ, ಸೋತ ಎಲ್ಲಾ ಅಭ್ಯರ್ಥಿಗಳಿಗಳನ್ನು ಅಭಿನಂದಿಸಲಾಯಿತು.

Follow Us:
Download App:
  • android
  • ios