ಮಂಡ್ಯ(ಏ.21): ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಔಷಧ ನಿಯಂತ್ರಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಸೋಂಕು ಹರಡದಂತೆ ಲಾಕ್‌ಡೌನ್‌ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಇದರ ಜತೆಗೆ ಸೋಂಕಿನ ಲಕ್ಷಣಗಳಾಗಿರುವ ಜ್ವರ, ನೆಗಡಿ, ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುವವರಿಗೆ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ನೀಡಬಾರದೆಂದು ಮೆಡಿಕಲ್‌ ಸ್ಟೋರ್‌ ಮಾಲೀಕರಿಗೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕಿ ಡಿ.ಎಸ್‌. ಶೈಲಜಾ ಸೂಚನೆ ನೀಡಿದ್ದಾರೆ.

'ನಟ ಭಯಂಕರ' ಚಿತ್ರ ತಂಡದೊಂದಿಗೆ ಬಡವರಿಗೆ ನೆರವಾದ ಜಾರಕಿಹೊಳಿ ಕುಟುಂಬದ ಕುಡಿ!

ಜ್ವರ, ನೆಗಡಿ, ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕೊರೋನಾ ಸೋಂಕಿನ ಲಕ್ಷಣಗಳಾಗಿವೆ. ಇವು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದರಿಂದ ಜನರು ಮೆಡಿಕಲ… ಸ್ಟೋರ್‌ಗೆ ತೆರಳಿ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಸೋಂಕಿನ ಲಕ್ಷಣವೂ ಇದೇ ಆಗಿರುವುದರಿಂದ ಎಚ್ಚರಿಕೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕನ್ನು ಪತ್ತೆ ಹೆಚ್ಚಲು ಮತ್ತು ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

ಬಡ, ನಿರ್ಗತಿಕರಿಗೆ ನಟ 'ಭಯಂಕರ' ಸಹಾಯ ಮಾರ್ರೆ!

ಯಾವುದೇ ರೀತಿಯ ಜ್ವರ, ನೆಗಡಿ, ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುವವರಿಗೆ ಪ್ಯಾರಾಸಿಟಮಲ್ ಇರುವ ಔಷಧ ಪೂರೈಸಬಾರದು ಎಂದು ಮೆಡಿಕಲ್ ಸ್ಟೋರ್‌ ಮಾಲೀಕರಿಗೆ ಸೂಚನೆ ರವಾನಿಸಲಾಗಿದೆ. ಒಂದು ವೇಳೆ ವೈದ್ಯರ ಸಲಹಾ ಚೀಟಿ ಮೇರೆಗೆ ಔಷಧ ವಿತರಿಸಿದ್ದಲ್ಲಿ ಖರೀದಿಸಿದ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೈದ್ಯರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ಮಾರಾಟದ ರಶೀದಿಗಳಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.

ಇದಷ್ಟೇ ಅಲ್ಲದೆ, ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಖರೀದಿಗೆ ಬರುವ ವ್ಯಕ್ತಿಗಳು ಬಗ್ಗೆ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಸೂಚನೆ ಉಲ್ಲಂಘಿಸಿದ್ದಲ್ಲಿ ಔಷಧ ಮತ್ತು ಕಾಂತಿವರ್ಧಕಗಳ ಅಧಿನಿಯಮ 1940ರ ನಿಯಮದಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.