ಬೀದರ್, (ಏ.22): ಬಿಗ್ ಬಾಸ್ ಒಳ್ಳೆ ಹುಡುಗ ಪ್ರಥಮ್ ನಟನೆ, ನಿರ್ದೇಶನದ 'ನಟ ಭಯಂಕರ' ಸಿನಿಮಾ ತಂಡ ಬೀದರ್‌ನಲ್ಲಿ ಮನೆ ಮನೆಗೆ ತರಕಾರಿ, ರೇಷನ್ ಹಂಚುತ್ತಿದೆ. 

ಇದೀಗ ಈ ಕೆಲಸಕ್ಕೆ ಜಾರಕಿಹೊಳಿ ಕುಟುಂಬಸ್ಥರು ಸಾಥ್ ನೀಡಿದ್ದಾರೆ.  ನಟ ಭಯಂಕರ ಫ್ಯಾನ್ಸ್ ಹುಡುಗರು ಬೆಂಗಳೂರಿನಿಂದ ಬೈಕಿನಲ್ಲಿ ಹೋಗಿ ಬೀದರ್‌ನಲ್ಲಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. 

ಬಡ, ನಿರ್ಗತಿಕರಿಗೆ ನಟ 'ಭಯಂಕರ' ಸಹಾಯ ಮಾರ್ರೆ!

ಅದನ್ನು ಪ್ರಥಮ್ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಭೀಮಸೇನಾ ಜಾರಿಕಿಹೊಳಿ ಮಗ ಸರ್ವೋತ್ತಮ ಜಾರಕಿಹೊಳಿ ಹಣ ಸಹಾಯ ಮಾಡಿದ್ದಾರೆ.

ಇಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿರುವ ಸರ್ವೋತ್ತಮ ಜಾರಕಿಹೊಳಿ ತಮ್ಮ ಉಳಿತಾಯದ ಹಣವನ್ನು ಬೀದರ್‌ನಲ್ಲಿ ನಟ ಭಯಂಕರ ಫ್ಯಾನ್ಸ್  ಗ್ರೂಪ್‌ಗೆ ನೀಡಿ ಬಡ, ನಿರ್ಗತಿಕರ ಸಹಾಯ ಮಾಡಿದ್ದರೆ. ಇದಕ್ಕೆ ಒಳ್ಳೆ ಹುಡುಗ ಪ್ರಥಮ್ ತಮ್ಮ ಹುಡುಗರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ನಟ ಭಯಂಕರ ಫ್ಯಾನ್ಸ್ ಹುಡುಗರ ತಂಡವೊಂದು ಬೈಕ್‌ನಲ್ಲಿ ಬಡ ಮತ್ತು ನಿರ್ಗತಿಕರ ಮನೆ-ಮೆನೆಗೆ ತೆರಳಿ ಆಹಾರ ಪದಾರ್ಥಗಳನ್ನು ಹಂಚಿ ಒಳ್ಳೆ ಕಾರ್ಯದಲ್ಲಿ ತೊಡಗಿದ್ದಾರೆ.