ಮಡಿಕೇರಿ(ಮೇ 27): ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಖ್ಯಾತಿಯ ಮೆಬಿನಾ ಮೈಕಲ್ ಅಂತ್ಯಕ್ರಿಯೆ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ‌ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿದೆ.

ನಿನ್ನೆ ನಾಗಮಂಗಲದ NH-75 ದೇವಿಹಳ್ಳಿ ಬಳಿ ಅಪಘಾತ ನಡೆದಿತ್ತು. ಟ್ರ್ಯಾಕ್ಟರ್ ಕಾರು ನಡುವಿನ ಅಪಘಾತಲ್ಲಿ ಮೆಬಿನಾ ಮೈಕಲ್ ಮೃತಪಟ್ಟಿದ್ದರು. ಬೆಂಗಳೂರಿನಿಂದ ಕೊಡಗಿನ ಸೋಮವಾರಪೇಟೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿತ್ತು.

ಪ್ಯಾಟೆ ಹುಡುಗೀರ ಹಳ್ಳಿ ಲೈಫ್ ಖ್ಯಾತಿಯ ಮೇಬಿನಾ ನಿಧನ

ಸೋಮವಾರಪೇಟೆ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಮೆಬಿನಾ ಮೈಕಲ್ ಮೃತದೇಹ ಕಂಡು ಅಜ್ಜಿ, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಅನಾರೋಗ್ಯದ ಹಿನ್ನೆಲೆ ಮೂರು ವರ್ಷಗಳ ಹಿಂದೆ ತಂದೆ ಮೈಕಲ್ ಕಳೆದುಕೊಂಡಿದ್ದ ಮೆಬಿನಾ ತಾಯಿ ಬೆನ್ಸಿ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಜ್ಜಿ ಐರಿನ್ ವಾಸ್ ಅವರನ್ನು ನೋಡಲು ಬರುವ ವೇಳೆ ಅಪಘಾತ ನಡೆದಿದೆ.

ಅಪಘಾತಕ್ಕೀಡಾದ ಮಬೀನಾ ಕಾರು: