Asianet Suvarna News Asianet Suvarna News

ಈ ಕ್ಷೇತ್ರದ ಚುನಾವಣೆಯಲ್ಲಿ ಇದುವರೆಗೂ ಸ್ಪರ್ಧೆಗೆ ಧೈರ್ಯ ತೋರಿಸಿಲ್ಲ ಮಹಿಳೆಯರು

ಈ ಕ್ಷೇತ್ರದ ಚುನಾವಣೆಯಲ್ಲಿ ಇದುವರೆಗೂ ಮಹಿಳೆಯರು ಸ್ಪರ್ಧೆ ಮಾಡುವ ಧೈರ್ಯ ತೋರಿಲ್ಲ

Maximum number Of Ladies Votes in Bengaluru Teachers Constituency snr
Author
Bengaluru, First Published Oct 20, 2020, 2:33 PM IST

ವರದಿ : ಎಂ.ಅ​ಫ್ರೋಜ್ ಖಾನ್‌

 ರಾಮ​ನ​ಗರ (ಅ.20):  ತೀವ್ರ ಕುತೂ​ಹಲ ಕೆರ​ಳಿ​ಸು​ತ್ತಿ​ರುವ ವಿಧಾನ ಪರಿ​ಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯಲ್ಲಿ ಮಹಿಳಾ ಮತ​ದಾ​ರರು ನಿರ್ಣಾಯಕ ಪಾತ್ರ ವಹಿಸಲಿ​ದ್ದಾರೆ. ಒಂದ​ರ್ಥ​ದಲ್ಲಿ ಅಭ್ಯ​ರ್ಥಿ​ಗಳ ಜುಟ್ಟು ಮಹಿಳಾ ಮತ​ದಾ​ರರ ಕೈಯ​ಲ್ಲಿದೆ.

ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರದಲ್ಲಿ ಪುರು​ಷ​ರಿ​ಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆ​ಯಲ್ಲಿ ಮತ​ದಾ​ರರ ನೋಂದ​ಣಿ​ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಚುನಾ​ವ​ಣೆ​ಯಲ್ಲಿ ಮಹಿಳಾ ಮತ​ದಾ​ರ​ರನ್ನು ಓಲೈ​ಸಿ​ಕೊಂಡವರ ಗೆಲುವು ಸುಲ​ಭ​ವಾ​ಗ​ಲಿದೆ.

ಈ ಚುನಾ​ವ​ಣೆ​ಯಲ್ಲಿ ಒಟ್ಟು 22,089 ಮತ​ದಾ​ರರಿದ್ದಾರೆ. ಈ ಪೈಕಿ 7,946 ಪುರು​ಷರಿದ್ದರೆ, 14,140 ಮಂದಿ ಮಹಿಳೆಯರು ಹಾಗೂ 3ಇತರೆ ಮತ​ದಾ​ರರು ಸೇರಿದ್ದಾರೆ. (ಇದಕ್ಕೂ ಮೊದಲು 17,610 ಮತ​ದಾ​ರರ ಪೈಕಿ 5,876 ಪುರು​ಷರು, 11,733 ಮಹಿ​ಳೆ​ಯರು, 01 ಇತರೆ ಮತ​ದಾ​ರರಿ​ದ್ದರು.) ಪುರು​ಷ​ರಿ​ಗಿಂತ 6,194 ಮಹಿ​ಳೆ​ಯರು ಹೆಚ್ಚಿದ್ದು, ಅಭ್ಯ​ರ್ಥಿ​ಗಳ ಹಣೆ​ಬ​ರ​ಹ​ವನ್ನು ಮಹಿಳಾ ಮತ​ದಾ​ರರು ನಿರ್ಧ​ರಿ​ಸ​ಲಿ​ದ್ದಾರೆ.

ಉಪ ಚುನಾವಣೆ : ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಅಭ್ಯರ್ಥಿ ಮುನಿರತ್ನ

ಶಿಕ್ಷಕ ಸಮು​ದಾ​ಯ​ದಲ್ಲಿ ಪುರು​ಷ​ರಷ್ಟೇ ಮಹಿಳಾ ಮತ​ದಾ​ರರು ರಾಜ​ಕೀಯ ಪ್ರಜ್ಞೆ ಹೊಂದಿ​ದ್ದಾರೆ. ಚುನಾ​ವ​ಣೆ​ಯಲ್ಲಿ ಮಹಿಳಾ ಮತ​ದಾ​ರ​ರೇ ಮಹ​ತ್ತರ ಪಾತ್ರ ವಹಿ​ಸ​ಲಿ​ರುವ ಕಾರಣ ಅವ​ರನ್ನು ಸೆಳೆ​ಯಲು ಅಭ್ಯ​ರ್ಥಿ​ಗಳು ನಾನಾ ಕಸ​ರ​ತ್ತು​ಗ​ಳಲ್ಲಿ ತೊಡ​ಗಿ​ದ್ದಾ​ರೆ. ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ಕಾಂಗ್ರೆಸ್‌ನ ಪ್ರವೀಣ್‌ ಕುಮಾರ್‌, ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ರಂಗ​ನಾಥ್‌ ಹಾಗೂ ಪಕ್ಷೇತರ ಅಭ್ಯ​ರ್ಥಿ​ಗಳ ಪೈಕಿ ಕೆಲವರು ತಮ್ಮ ಕುಟುಂಬದ ಮಹಿಳಾ ಸದ​ಸ್ಯರ ಮೂಲಕ ಮಹಿಳಾ ಮತ​ದಾ​ರರ ಮತ ಸೆಳೆ​ಯುವ ಪ್ರಯತ್ನ ನಡೆ​ಸು​ತ್ತಿ​​ದ್ದ​ರೆ, ಉಳಿ​ದ​ವರು ಪಕ್ಷದ ಮಹಿಳಾ ನಾಯ​ಕ​ರ ಮೂಲಕ ಮನ ಗೆಲ್ಲುವ ಕಸ​ರತ್ತು ಮುಂದು​ವ​ರೆ​ಸಿ​ದ್ದಾ​ರೆ.

ಸಂಪ​ರ್ಕಕ್ಕೆ ಸಿಗದ ಶಿಕ್ಷ​ಕರು:  ಕೋವಿಡ್‌ -19 ಕಾರ​ಣ​ದಿಂದಾಗಿ ವಿದ್ಯಾ​ಗಮ ಯೋಜನೆ ಸ್ಥಗಿತದ ಜೊತೆಗೆ ದಸರಾ ರಜೆ ಕಾರಣ ಶಿಕ್ಷಕರು ಊರು ಸೇರಿ​ದ್ದಾರೆ. ಅವ​ರನ್ನು ವೈಯ​ಕ್ತಿ​ಕ​ವಾಗಿ ಸಂಪ​ರ್ಕಿಸಿ ಮತ​ಯಾ​ಚಿ​ಸಲು ಸಹ ಅಭ್ಯ​ರ್ಥಿ​ಗ​ಳಿಂದ ಸಾಧ್ಯ​ವಾ​ಗು​ತ್ತಿಲ್ಲ.

ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ 36 ವಿಧಾ​ನ​ಸಭಾ ಕ್ಷೇತ್ರ​ಗಳ ವ್ಯಾಪ್ತಿ​ಯನ್ನು ಹೊಂದಿದೆ. ಕೋವಿಡ್‌ ಪ್ರಕ​ರ​ಣಗಳು ಹೆಚ್ಚು​ತ್ತಿ​ರುವುದ​ರಿಂದ ಅಭ್ಯ​ರ್ಥಿ​ಗಳು ಶಿಕ್ಷಣ ಸಂಸ್ಥೆ​ಗ​ಳಿಗೆ ಭೇಟಿ ನೀಡಿ ಶಿಕ್ಷ​ಕ​ರಿಂದ ಮತ​ದಾನ ಮಾಡಿ​ಸು​ವಂತೆ ಮನವಿ ಮಾಡು​ತ್ತಿ​ದ್ದಾರೆ. ಇಲ್ಲವೆ, 50 ರಿಂದ 60 ಶಿಕ್ಷ​ಕ​ರನ್ನು ಒಳ​ಗೊಂಡಂತೆ ಸಭೆ​ಗ​ಳ​ನ್ನು ಆಯೋ​ಜಿ​ಸು​ತ್ತಿ​ದ್ದಾರೆ.

ಅಭ್ಯ​ರ್ಥಿ​ಗಳ ಬೆಂಬ​ಲಿ​ಗರು ಹಾಗೂ ರಾಜ​ಕೀಯ ಪಕ್ಷ​ಗಳ ಕಾರ್ಯ​ಕ​ರ್ತರು ಮನೆ ಮನೆ ಪ್ರಚಾರ ಮಾಡು​ತ್ತಿ​ದ್ದಾರೆ. ಮತ​ದಾರ ಶಿಕ್ಷ​ಕರನ್ನು ದೂರ​ವಾಣಿ ಮೂಲ​ಕವೂ ಸಂಪ​ರ್ಕಿಸುತ್ತಿದ್ದಾರೆ. ಅಲ್ಲದೆ, ವಾಟ್ಸಪ್‌, ಫೇಸ್‌ಬುಕ್‌, ಟ್ವಿಟರ್‌ನಂತ​ಹ ಸಾಮಾ​ಜಿಕ ಜಾಲ​ತಾ​ಣ​ಗ​ಳನ್ನು ಪ್ರಚಾರ ಕಾರ್ಯಕ್ಕೆ ಸಮ​ಪ​ರ್ಕ​ವಾಗಿ ಬಳಕೆ ಮಾಡಿ​ಕೊ​ಳ್ಳು​ತ್ತಿ​ದ್ದಾರೆ. ​ಮಹಿಳಾ ಮತ​ದಾ​ರರು ಯಾವ ಅಭ್ಯರ್ಥಿ ಪರ ಒಲವು ತೋರು​ತ್ತಾ​ರೆ ಎಂಬುದು ಕುತೂ​ಹಲ ಮೂಡಿ​ಸಿ​ದೆ.

ಸ್ಪರ್ಧೆಗೆ ಧೈರ್ಯ ತೋರದ ಮಹಿಳೆಯರು!

ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ​ದಿಂದ ವಿಧಾನ ಪರಿ​ಷತ್‌ಗೆ ನಡೆ​ಯುವ ಚುನಾ​ವ​ಣೆ​ಯಲ್ಲಿ ಈವ​ರೆ​ಗೆ ಮಹಿ​ಳೆ​ಯರು ಸ್ಪರ್ಧೆ ಮಾಡುವ ಧೈರ್ಯ​ವನ್ನೇ ತೋರಿಲ್ಲ. ಈಗ ಸ್ಪರ್ಧೆ ಮಾಡಿ​ರುವ 9 ಮಂದಿ ಅಭ್ಯ​ರ್ಥಿ​ಗಳು ಪುರು​ಷರೇ ಆಗಿ​ದ್ದಾ​ರೆ. ಈ ಕ್ಷೇತ್ರ​ದಲ್ಲಿ ಪುರು​ಷ​ರಿಗೆ ಹೋಲಿಕೆ ಮಾಡಿ​ದರೆ ಮಹಿಳಾ ಮತ​ದಾ​ರರ ಸಂಖ್ಯೆಯೇ ಹೆಚ್ಚಾ​ಗಿದೆ. ಆದರೂ ಯಾವ ರಾಜ​ಕೀಯ ಪಕ್ಷ​ಗಳು ಮಹಿ​ಳೆಯನ್ನು ಕಣ​ಕ್ಕಿ​ಳಿ​ಸುವ ಚಿಂತನೆ ಹೊಂದ​ಲಿಲ್ಲ. ಮಹಿಳಾ ನಾಯ​ಕರು ಟಿಕೆಟ್‌ ಕೇಳುವ ಮನಸ್ಸು ಮಾಡ​ಲಿ​ಲ್ಲ. ಬದ​ಲಾದ ಕಾಲ​ಘ​ಟ್ಟ​ದಲ್ಲಿ ಮಹಿ​ಳೆ​ಯರು ಕೂಡ ಪುರು​ಷ​ರಿಗೆ ಸರಿ​ಸ​ಮ​ನಾಗಿದ್ದಾಳೆ. ವಿವಿಧ ಕ್ಷೇತ್ರ​ಗಳ ಉನ್ನತ ಹುದ್ದೆ​ಗ​ಳನ್ನು ಅಲಂಕ​ರಿ​ಸು​ತ್ತಿ​ದ್ದಾರೆ. ಶಿಕ್ಷಿ​ತ​ರಾ​ಗಿ​ರುವ ಮಹಿ​ಳೆ​ಯರು ಮತ​ದಾ​ರ​ರಲ್ಲಿ ತಮ್ಮ​ವರೇ ಅಧಿ​ಕ​ವಾ​ಗಿ​ದ್ದ​ರೂ ಸ್ಪರ್ಧೆಗೆ ಆಸಕ್ತಿ ತೋರಿಲ್ಲ.

Follow Us:
Download App:
  • android
  • ios