Asianet Suvarna News Asianet Suvarna News

ತುಮಕೂರು : ಮಟ್ಕಾ ದೊರೆ ಅಶ್ವತ್ಥನಾರಾಯಣ ಬಂಧನ?

ಕಾನೂನು ಬಾಹಿರ ಚಟವಟಿಕೆಗಳಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಪ್ರಮುಖ ಮಟ್ಕಾ ಬುಕ್ಕಿ, ಕಿಂಗ್‌ಪಿನ್‌ ಪಾವಗಡ ಪಿ.ಎನ್‌.ಅಶ್ವತ್ಥನಾರಾಯಣ್‌ ಎಂಬಾತನನ್ನು ಗೂಂಡಾಕಾಯ್ದೆಯಡಿ ಬಂಧಿಸಲಾಗಿದೆ. 

Matka kingpin tumakuru Ashwath narayan Arrested snr
Author
Bengaluru, First Published Apr 17, 2021, 9:49 AM IST

 ಪಾವಗಡ (ಏ.17):  ಹಲವಾರು ವರ್ಷಗಳಿಂದ ಮಟ್ಕಾ ಹಾಗೂ ಇತರೆ ಕಾನೂನು ಬಾಹಿರ ಚಟವಟಿಕೆಗಳಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಪ್ರಮುಖ ಮಟ್ಕಾ ಬುಕ್ಕಿ, ಕಿಂಗ್‌ಪಿನ್‌ ಪಾವಗಡ ಪಿ.ಎನ್‌.ಅಶ್ವತ್ಥನಾರಾಯಣ್‌ ಎಂಬಾತನನ್ನು ಗೂಂಡಾಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿರುವುದಾಗಿ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಟ್ಟಣ ಹಳೇಕುಂಬಾರರ ಬೀದಿ ವಾಸಿ ಮಟ್ಕಾ ರೂವಾರಿ ಪಿ.ಎನ್‌.ಅಶ್ವತ್ಥ್ ನಾರಾಯಣ್‌ ಹಲವಾರು ವರ್ಷಗಳಿಂದ ಮಟ್ಕಾ ಹಾಗೂ ಇತರೆ ಕಾನೂನು ಬಾಹೀರ ಚಟವಟಿಕೆಗಳಲ್ಲಿ ನಿರತರಾಗಿದ್ದ ಆರೋಪವಿದ್ದು, ಈತನ ವಿರುದ್ಧ ಈಗಾಗಲೇ ಹಲವಾರು ಮಟ್ಕಾ ದಂಧೆ ಪ್ರಕರಣ ದಾಖಲಾಗಿವೆ. ಅದರೂ ಅಕ್ರಮ ಜೂಜು ನಿಲ್ಲಿಸದೇ ರೂಢಿಗತ ಮಾಟ್ಕಾ ಆಡಿಸುತ್ತಿದ್ದು, ಇತ್ತೀಚೆಗೆ ಪರಿಶೀಲನೆ ವೇಳೆ ತಾಲೂಕಿನಲ್ಲಿ ವ್ಯಾಪಕ ಮಟ್ಕಾ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ನಿತ್ಯ ಸಾವಿರಾರು ಕುಟುಂಬಗಳು ಬಲಿಯಾಗುತ್ತಿರುವ ಆಂಶ ಬೆಳಕಿಗೆ ಬಂದಿದೆ.

ಕ್ರಿಕೆಟ್‌ ಕಿಟಲ್ಲಿ ಡ್ರಗ್ಸ್‌ ಇಟ್ಟು ಸರಬರಾಜು..! ...

ಈ ಹಿನ್ನೆಲೆಯಲ್ಲಿ ಮಟ್ಕಾ ಬುಕ್ಕಿ ಅಶ್ವತ್ಥನಾರಾಯಣನನ್ನು ಸ್ಥಾನ ಬದ್ಧತೆಯಲ್ಲಿಡುವಂತೆ ಕೋರಿ ಇತ್ತೀಚೆಗೆ ಮಧುಗಿರಿ ಜಿಲ್ಲಾ ಉಪವಿಭಾಗದ ಡಿವೈಎಸ್‌ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಅಧಿಕಾರಿಗಳು ತಾಲೂಕಿನ ಅಕ್ರಮ ಚಟವಟಿಕೆಗಳ ಕುರಿತು ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿ ಪಡೆದ ಬಳಿಕ ಅನೈತಿಕ ವ್ಯವಹಾರ ಜೂಜು, ಕೊಳಚೆ ಪ್ರದೇಶ ಅಕ್ರಮಿಸುವ ಚಟವಟಿಕೆ ಅಪರಾಧ ತಡೆ ಅಧಿನಿಯಮ 1985 ಕರ್ನಾಟಕ ಕಾಯ್ದೆ ಸಂಖ್ಯೆ 12ರಡಿ ಸ್ಥಾನ ಬದ್ಧತೆ ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ಮಟ್ಕಾ ಬುಕ್ಕಿ ಪಿ.ಎನ್‌.ಅಶ್ವತ್ಥನಾರಾಯಣನನ್ನು ಏ.13ರಿಂದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದು, ಈ ಸಂಬಂಧ ಏ.14ರಂದು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿದೆ.

ಅನ್‌ಲೈನ್‌ ಮಟ್ಕಾ ತಡೆಗೆ ಆಗ್ರಹ :  ಇದೇ ರೀತಿ ಮಟ್ಕಾ ಜತೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅನ್‌ಲೈನ್‌ ಮಟ್ಕಾ ಗೇಮ್‌ ವ್ಯಾಪಕವಾಗಿ ನಡೆಯುತ್ತಿದ್ದು, ನಿತ್ಯ ಸಾವಿರಾರು ಬಡ ಕುಟುಂಬಗಳು ಬಲಿಯಾಗುತ್ತಿರುವುದು ಸಾಮಾನ್ಯವಾಗಿದೆ. ಈಗಾಗಲೇ ತಾಲೂಕಿನ ಲಿಂಗದಹಳ್ಳಿ ಅರಸೀಕೆರೆ ಮಂಗಳವಾಡ ವೆಂಕಟಾಪುರ ವೈ.ಎನ್‌.ಹೊಸಕೋಟೆ ಭರ್ಜರಿ ದಂಧೆಗಳು ನಡೆಯುತ್ತಿದ್ದು, ನಿತ್ಯ ಸಾವಿರಾರು ವಹಿವಾಟು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೇಮ್‌ ಜೂಜುಕೋರ ರೂವಾರಿಗಳು ಯಾರಿಗೂ ಕ್ಯಾರೆ ಮಾಡದೇ ಡೌನ್‌ಲೋಡ್‌ ಮಾಡಿಕೊಂಡ ಮೊಬೈಲ್‌ ಆ್ಯಪ್‌ಗಳ ಮೂಲಕ ನಿತ್ಯ ನಿರ್ಭೀತಿಯಿಂದ ದಂಧೆ ನಡೆಸುತ್ತಿದ್ದು ಈ ಬಗ್ಗೆ ಸಂಬಂಧ ಪಟ್ಟಇಲಾಖೆಗೆ ಮಾಹಿತಿ ಇದ್ದರೂ ತಡೆಗಟ್ಟುವಲ್ಲಿ ವಿಫಲರಾಗಿರುವುದಾಗಿ ಬಹುತೇಕ ಸಾರ್ವಜನಿಕರು ಆರೋಪಿಸಿದ್ದಾರೆ.

Follow Us:
Download App:
  • android
  • ios