Tumakuru ಊರ ಜಾತ್ರೆಯಲ್ಲಿ ಎತ್ತುಗಳನ್ನು ಬಲಿಕೊಟ್ಟ ಗ್ರಾಮಸ್ಥರು!

  • ಚೌಡೇಶ್ವರಿ ಜಾತ್ರೆಯಲ್ಲಿ ಎತ್ತುಗಳನ್ನು ಬಲಿಕೊಟ್ಟ ಗ್ರಾಮಸ್ಥರು
  • ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಘಟನೆ
  • ಗ್ರಾಮಸ್ಥರ ಮೂಢನಂಬಿಕೆಯಿಂದಾಗಿ  ಮೂಕ ಪ್ರಾಣಿಗಳ ಬಲಿ
     
oxes killed for animal sacrifice ritual in chowdeshwari festival at Tumakuru  gow

ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ 

ತುಮಕೂರು (ಮೇ.11):  ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾಲ್ಲಿದ್ದರು ಚೌಡೇಶ್ವರಿ ಜಾತ್ರೆಯಲ್ಲಿ ಎತ್ತುಗಳನ್ನು ಬಲಿ ಕೊಡಲಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಗ್ರಾಮದಲ್ಲಿ ಎರಡು ದಿನಗಳ ಕಾಲ ಚೌಡೇಶ್ವರಿ ಜಾತ್ರೆ ನಡೆದಿತ್ತು. ಜಾತ್ರೆಯ ಉಸ್ತುವಾರಿವಹಿಸಿದ್ದ, ಬಸವಲಿಂಗಪ್ಪ, ಚಂದ್ರಪ್ಪ, ಹನುಮಂತರಾಯಪ್ಪ ಎಂಬುವರು ಸೇರಿ ಜಾತ್ರೆಯಲ್ಲಿ ಎತ್ತುಗಳನ್ನು ಬಲಿ ನೀಡಿದ್ದಾರೆ. ಗ್ರಾಮಸ್ಥರ ಮೂಢನಂಬಿಕೆಯಿಂದಾಗಿ  ಮೂಕ ಪ್ರಾಣಿಗಳ ಬಲಿಯಾಗಿದೆ.‌

Mandya ಊರ ಜಾತ್ರೆಯಲ್ಲಿ ಬಲಿ ತಪ್ಪಿಸಲು ಮರವೇರಿ ಕುಳಿತ ಹರಕೆ ಹುಂಜ!

ಪ್ರಾಣಿವಧೆ ಮಾಡದಂತೆ ಎಸ್ಪಿಗೆ ಮನವಿ: ಚೌಡೇಶ್ವರಿ ಜಾತ್ರೆಯಲ್ಲಿ ಎತ್ತುಗಳನ್ನು ಬಲಿ ಕೊಡತ್ತಾರೆ, ಇದನ್ನು ತಡೆಯಬೇಕೆಂದು, ಗ್ರಾಮದ ಕೆಲ ಜನರು ಮೇ 9ನೇ ತಾರೀಕು ತುಮಕೂರು ಎಸ್ಪಿಗೆ ಮನವಿ ಮಾಡಿದ್ದರು, ಗ್ರಾಮದಸ್ಥರ ಮನವಿಗೆ ಸ್ಪಂದಿಸಿದ ಎಸ್ಪಿ ಅರಸೀಕೆರೆ ಪೊಲೀಸರನ್ನು ಜಾತ್ರೆಗೆ ನಿಯೋಜನೆ ಮಾಡಲಾಗಿತ್ತು. ಇಷ್ಟಾದ್ರೂ ಗ್ರಾಮಸ್ಥರು, ಪೊಲೀಸರ ಕಣ್ತಪ್ಪಿಸಿ ಎತ್ತುಗಳನ್ನು ಬಲಿ ನೀಡಿದ್ದಾರೆ.

ಸಾಮಾನ್ಯವಾಗಿ ಮಾರಮ್ಮನ ಜಾತ್ರೆಯಲ್ಲಿ ಕೋಣಗಳನ್ನು ಬಲಿ ನೀಡಲಾಗುವುದು, ಆದರೆ  ಬೆಳ್ಳಿಬಟ್ಲು ಗ್ರಾಮದಲ್ಲಿ ಎತ್ತುಗಳನ್ನು ಬಲಿ ನೀಡಿರುವುದು ವಿಶೇಷವಾಗಿದೆ. ಮೂಕ ಪ್ರಾಣಿಗಳನ್ನು ಹತ್ಯೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹವಾಗಿದೆ.‌ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

KARNATAKA BANK RECRUITMENT 2022: ದೇಶದಾದ್ಯಂತ ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ 

ಊರ ಜಾತ್ರೆಯಲ್ಲಿ ಬಲಿ ತಪ್ಪಿಸಲು ಮರವೇರಿ ಕುಳಿತ ಹರಕೆ ಹುಂಜ!: ಬೇಸಿಗೆ ವೇಳೆ ಹಳ್ಳಿಗಳಲ್ಲಿ ಗ್ರಾಮದೇವತೆ ಹಬ್ಬ ಸರ್ವೇಸಾಮಾನ್ಯ. ತಮ್ಮೂರಿನ ದೇವರಿಗೆ ವರ್ಷಕೊಮ್ಮೆ ಭಕ್ತಿಪೂರ್ವಕ ಪೂಜೆ ಸಲ್ಲಿಸುವುದು ಗ್ರಾಮಸ್ಥರ ಸಂಪ್ರದಾಯ. ಹಬ್ಬದ ಸಂದರ್ಭದಲ್ಲಿ ಕೋಳಿ ಕುರಿ ಬಲಿ ಕೊಡುವುದು ಕೂಡ ಬಹುತೇಕ ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯ. ಈಗ ಎಲ್ಲಾ ಊರುಗಳಲ್ಲೂ ಕೂಡ ಹಬ್ಬ, ಜಾತ್ರೆ ಒಂದರ ಹಿಂದೆ ಒಂದರಂತೆ ನಡೆಯುತ್ತದೆ. ಅದೇ ರೀತಿ ಮಂಡ್ಯದ (Mandya) ಗಾಂಧಿನಗರದಲ್ಲೂ ಕೂಡ ಬಿಸಿಲು ಮಾರಮ್ಮನ (bisilu maramma temple) ಹಬ್ಬದ ವೇಳೆ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ದೇವಿಗೆ ಬಲಿ ಕೊಡಲು ತಂದಿದ್ದ ಹುಂಜವೊಂದು ಭಕ್ತೆ ಕೈಯಿಂದ ತಪ್ಪಿಸಿಕೊಂಡು ಮರವೇರಿ ಕುಳಿತ ಘಟನೆ ನಡೆದಿದೆ.

ಭಕ್ತೆ ಕೈಯಿಂದ ಹಾರಿ ಮರವೇರಿದ ಹುಂಜ (Roosters) ಕೆಳಗಿಳಿಸಲು ಭಕ್ತರು ಹೈರಾಣು: ಮಂಗಳವಾರ ಮಂಡ್ಯದ ಗಾಂಧಿನಗರದಲ್ಲಿ ಶ್ರೀ ಬಿಸಿಲು ಮಾರಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಿತು. ಸೋಮವಾರ ರಾತ್ರಿ ಹೂಹೊಂಬಾಳೆ ನೆರವೇರಿಸಿದ್ದ ಗ್ರಾಮಸ್ಥರು. ಮಂಗಳವಾರ ಮಧ್ಯಾಹ್ನ ಬಿಸಿಲು ಮಾರಮ್ಮ ದೇವಿಗೆ ಕೋಳಿ ಬಲಿ ಕೊಟ್ಟು ಭಕ್ತಿ ಸಮರ್ಪಿಸಲು ಮುಂದಾಗಿದ್ದರು.

ಈ ವೇಳೆ ಗ್ರಾಮದ ರತ್ನಮ್ಮ ಎಂಬುವರು ತಂದಿದ್ದ ಹುಂಜವೊಂದು ಅವರ ಕೈಯಿಂದ ಹಾರಿಹೋಗಿತ್ತು. ಹೀಗೆ ರತ್ನಮ್ಮ ಕೈತಪ್ಪಿದ್ದ ಹುಂಜ ದೇವಾಲಯ ಮುಂಭಾಗವೇ ಇದ್ದ ಮರವೇರಿ ಕುಳಿತಿದೆ. ನೆರೆದಿದ್ದ ಭಕ್ತರೆಲ್ಲರು ಹುಂಜ ಹಿಡಿಯಲು ಪ್ರಯತ್ನಿಸಿದ್ರು ಕೂಡ ಮರದ ರಂಬೆ ರೆಂಬೆಗೆ ಹಾರಿ ಕಿರಿಕ್ ಹುಂಜ  ಜಾಗ ಬದಲಾಯಿಸಿದೆ. ಅಲ್ಲಿಂದ‌ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಡ್ಡಾಡುತ್ತಿದ್ದ ಹುಂಜ ಇಳಿಸಲು ಭಕ್ತರು ಹರಸಾಹಸ ಪಟ್ಟಿದ್ದಾರೆ. ಸತತ ಮೂರರಿಂದ ನಾಲ್ಕು ತಾಸು ಕೆಳಗೆ ಇಳಿಯದೆ ಸತಾಯಿಸಿದ ಹುಂಜ ಕಡಗೇ ಮರದಿಂದ ಕೆಳಗಿಳಿದಿದೆ. ಬಳಿಕ ಹುಂಜ ಹಿಡಿದು ಬಿಸಿಲು ಮಾರಮ್ಮ ದೇವಿಗೆ ಬಲಿ ಕೊಟ್ಟ ಭಕ್ತೆ ರತ್ನಮ್ಮ ನಿಟ್ಟುಸಿರು ಬಿಟ್ಟರು.

Latest Videos
Follow Us:
Download App:
  • android
  • ios