PUCಯಲ್ಲಿ ಪ್ರಥಮ ರ‌್ಯಾಂಕ್ ಬಂದಿದ್ದ ವಿವಾಹಿತೆ ಗ್ರಾಮಲೆಕ್ಕಾಧಿಕಾರಿ ನಾಪತ್ತೆ

ವಿವಾಹಿತೆ ಗ್ರಾಮಲೆಕ್ಕಾಧಿಕಾರಿ ನಾಪತ್ತೆ, ದೂರು| ಕೂಡ್ಲಿಗಿ ತಾಲೂಕು ಕಚೇರಿಯ ಭೂಮಿಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಚೈತ್ರಾ| ಕೊಟ್ರೇಶ್‌ ಎನ್ನುವವರೊಂದಿಗೆ ವಿವಾಹವಾಗಿದ್ದ ಚೈತ್ರಾ|ಕಳೆದ 2 ವರ್ಷಗಳ ಹಿಂದೆ ಚೈತ್ರಾ ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದರು|

Married Village Accountant Missing in Kudligi in Ballari District

ಕೂಡ್ಲಿಗಿ(ಡಿ.15): ತಾಲೂಕು ಕಚೇರಿಯ ಭೂಮಿಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಚೈತ್ರಾ ಎನ್ನುವ ಯುವತಿ ಪ್ರತಿನಿತ್ಯದಂತೆ ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ್ದು, ಯುವತಿಯ ತಂದೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಚೈತ್ರಾ (20) ಕೊಟ್ಟೂರು ತಾಲೂಕು ಗಂಗಮ್ಮನಹಳ್ಳಿ ಗ್ರಾಮದವಳಾಗಿದ್ದು, ಈಕೆಯನ್ನು ಇತ್ತೀಚೆಗೆ ಕೂಡ್ಲಿಗಿ ತಾಲೂಕು ಸೂರಮ್ಮನಹಳ್ಳಿ ಗ್ರಾಮದ ಕೊಟ್ರೇಶ್‌ ಎನ್ನುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರತಿದಿನ ಗಂಡನ ಮನೆ ಸೂರವ್ವನಹಳ್ಳಿ ಗ್ರಾಮದಿಂದ 8.30ಕ್ಕೆ ಹೋಗಿ ಸಂಜೆ 7 ಗಂಟೆಗೆ ಮನೆಗೆ ಬರುತ್ತಿದ್ದಳು. ಡಿಸೆಂಬರ್‌ 11 ರಂದು ಬೆಳಗ್ಗೆ 8.30ಕ್ಕೆ ಕೂಡ್ಲಿಗಿಗೆ ಕೆಲಸಕ್ಕೆಂದು ಹೋಗಿದ್ದ ಚೈತ್ರಾ ಸಂಜೆ ಮನೆಗೆ ಬರಲಿಲ್ಲ. ಪೋಷಕರು ಅಲ್ಲಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಲಿಲ್ಲ. ಹೀಗಾಗಿ, ಚೈತ್ರಾ ತಂದೆ ಡಿ.13 ರಂದು ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಪ್ರಥಮ ರ‌್ಯಾಂಕ್ ಪಡೆದಿದ್ದ ಚೈತ್ರಾ:

ಕಳೆದ 2 ವರ್ಷಗಳ ಹಿಂದೆ ಚೈತ್ರಾ ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದರು. ಹೀಗಾಗಿಯೇ ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಕೂಡ್ಲಿಗಿಯ ತಹಶೀಲ್ದಾರ್‌ ಕಚೇರಿಯಲ್ಲಿ ಭೂಮಿಕೇಂದ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಚೈತ್ರಾಗೆ ಸೂರವ್ವಹನಹಳ್ಳಿ ಗ್ರಾಮದ ಕೊಟ್ರೇಶ್‌ ಎನ್ನುವ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.

Latest Videos
Follow Us:
Download App:
  • android
  • ios