ಮಂಡ್ಯ(ಅ.04): ವಿವಾಹಿತನೊಬ್ಬ ಅಪ್ರಾಪ್ತೆಯನ್ನು ಮದುವೆಯಾಗಿರುವ ಘಟನೆ ಕಿಕ್ಕೇರಿಯ ಬಿದರಹಳ್ಳಿಯಲ್ಲಿ ಜರುಗಿದೆ. ಯುವಕ ವಿವಾಹಿತನಾಗಿದ್ದು, ವಿದ್ಯಾರ್ಥಿನಿಗೆ ಬಲವಂತವಾಗಿ ತಾಳಿ ಕಟ್ಟಿದ್ದಾನೆ.

ಗ್ರಾಮದ ಪ್ರಕಾಶ್‌ ವಿವಾಹವಾದ ವ್ಯಕ್ತಿ. ಅಪ್ರಾಪ್ತೆ ಚನ್ನರಾಯಪಟ್ಟಣದ ಹಾಸ್ಟಲ್‌ನಲ್ಲಿ ಇದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಪಿತೃ ಪಕ್ಷಕ್ಕಾಗಿ ಗ್ರಾಮಕ್ಕೆ ಬಂದಿದ್ದಳು. ಬುಧವಾರ ಮನೆಗೆ ನೀರು ತರಲು ನೀರಿನ ಟ್ಯಾಂಕ್‌ ಬಳಿ ಬಾಲಕಿ ಹೋಗಿದ್ದಾಳೆ.

ಹಾರ, ತುರಾಯಿಯೊಂದಿಗೆ ಬಂದ ಬಿಜೆಪಿ ಕಾರ್ಯಕರ್ತರು ಅಳ್ತಾ ಹೋದ್ರು..!

ಬೈಕ್‌ನಲ್ಲಿ ಬಂದಿದ್ದ ಪ್ರಕಾಶ್‌ ಈಕೆಯನ್ನು ಬಲವಂತವಾಗಿ ಅಪಹರಣ ಮಾಡಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಜನತೆ ರಕ್ಷಣೆಗೆ ಮುಂದಾಗಿದ್ದಾರೆ.

ಆರೋಪಿ ಸಮೀಪದ ಆಂಜನೇಯ ಗುಡಿಗೆ ತೆರಳಿ ಬಲವಂತವಾಗಿ ಯುವತಿಗೆ ತಾಳಿ ಕಟ್ಟಿದ್ದಾನೆ. ನಂತರ ಗ್ರಾಮಸ್ಥರು ಬರುವುದನ್ನು ತಿಳಿದು ಸ್ಥಳದಿಂದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಕಿಕ್ಕೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದಾರೆ.

ರೇವಣ್ಣ ಕರ್ನಾಟಕದ ಕುರಿಯನ್: ಪುಟ್ಟರಾಜು