ಹೆಂಡತಿಯ ಅಕ್ರಮ ಸಂಬಂಧ: ಪತಿ ಆತ್ಮಹತ್ಯೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jul 2018, 8:42 PM IST
Married man commits suicide over illegal affair at Bengaluru City
Highlights

  • ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿದ್ದ ಪತ್ನಿ ಡ್ರೈವರ್ ಜೊತೆ ಅಕ್ರಮ ಸಂಬಂಧ ಆರೋಪವಿತ್ತು
  • ರಾಜಿ ಪಂಚಾಯಿತಿ ಮಾಡಿಸಿದ್ದರೂ ಸಮಸ್ಯೆ ಬಗೆ ಹರಿಯದ ಕಾರಣ ಆತ್ಮಹತ್ಯೆ ಶಂಕೆ

ಬೆಂಗಳೂರು[ಜು.16]: ಹೆಂಡತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ ಘಟನೆ ಬೆಂಗಳೂರಿನ ಜ್ಞಾನಗಂಗಾನಗರದಲ್ಲಿ ನಡೆದಿದೆ.

ಯೋಗೇಶ್ (37) ಆತ್ಮಹತ್ಯೆ ಮಾಡಿಕೊಂಡವ. ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿದ್ದ ಪತ್ನಿ ಡ್ರೈವರ್ ಜೊತೆ ಅಕ್ರಮ ಸಂಬಂಧ ಆರೋಪವಿದ್ದು ಈ ಬಗ್ಗೆ ಹೆಂಡತಿಗೆ ಸಾಕಷ್ಟು ಬುದ್ಧಿವಾದ ಹೇಳಲಾಗಿತ್ತು. ಊರಿನ ಹಿರಿಯರ ನೇತೃತ್ವದಲ್ಲಿ ಒಂದೆರಡು ಬಾರಿ ರಾಜಿ ಪಂಚಾಯಿತಿ ಕೂಡ ಮಾಡಿಸಲಾಗಿತ್ತು.

ಇಷ್ಟಾದರೂ ಹೆಂಡತಿ ಪರ ಪುರುಷನ ಸಂಬಂಧ ಬಿಡಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

loader