ಹೊಳೆನರಸೀಪುರ (ಏ.15):  ತಾಲೂಕಿನ ಕುಂಚೇವುಹೊಸಳ್ಳಿ ಗ್ರಾಮದಲ್ಲಿ ತಮ್ಮನ ಮದುವೆಗೆ ನಿರಾಕರಿಸಿದ ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವು ಸೋಮವಾರ ರಾತ್ರಿ ನಗರ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿ​ಸಲಾಗಿದೆ.

ತಾಲೂಕಿನ ಕುಂಚೇವುಹೊಸಳ್ಳಿ ಗ್ರಾಮದ ಯೋಗಿತಾ ಹಾಗೂ ಪುಷ್ಪಿತಾ ಎಂಬ ಯುವತಿಯರು ಸೋದರತ್ತೆ ಮಗ ನಾಗರಾಜುವಿನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ! .

ಗ್ರಾಮದ ಲೇ. ಪುಟ್ಟರಾಜು ಪುತ್ರಿ ಯೋಗಿತಾ ಮನೆಗೆ ಆರೋಪಿ ನಾಗರಾಜು ತನ್ನ ತಾಯಿ ಅಕ್ಕಮ್ಮ ಹಾಗೂ ಅಜ್ಜಿ ಪುಟ್ಟಮ್ಮ ಜತೆ ಬಂದಿದ್ದಾರೆ.

ತನ್ನ ತಮ್ಮನನ್ನು ಮದುವೆ ಆಗುವಂತೆ ನಾಗರಾಜು ಯೋಗಿತಾಳನ್ನು ಕೇಳಿದ್ದಾರೆ. ಎಂಎಸ್ಸಿ ಓದಿರುವ ನಾನಾಗಲಿ ಅಥವಾ ತಂಗಿ ಪುಷ್ಪಿತಾ ನಿನ್ನ ತಮ್ಮನನ್ನು ಮದುವೆ ಆಗುವುದಿಲ್ಲವೆಂದು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ನಾಗರಾಜು ಯುವತಿಯರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ಯುವತಿಯರಿಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪುಷ್ಪಿತ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗರಾಜು ಮತ್ತು ಹಲ್ಲೆಗೆ ಕುಮ್ಮಕ್ಕು ನೀಡಿದ ಪುಟ್ಟಮ್ಮ ಹಾಗೂ ಅಕ್ಕಮ್ಮನನ್ನು ಬಂ​ಸಲಾಗಿದೆ.