ಶಿರಸಿ(ಜು.06): ಮಹಾಮಾರಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯವನ್ನು ನಿನ್ನೆ(ಭಾನುವಾರ)ಯಿಂದ ಮುಂದಿನ 7 ದಿನಗಳವರೆಗೆ ಸೀಲ್‌ಡೌನ್‌ ಮಾಡಲಾಗಿದೆ. 

ದೇವಸ್ಥಾನದ ಎದುರು ಮನೆಯಲ್ಲಿ ವಾಸಿಸುತ್ತಿದ್ದ ಲಾರಿ ಚಾಲಕನೋರ್ವನಿಗೆ ಕೊರೋನಾ ಸೋಂಕು ದೃಢಪಟ್ಟದೆ. ಆತನ ನೇರ ಸಂಪರ್ಕಿತರು ದೇವಸ್ಥಾನಕ್ಕೆ ಬಂದಿರಬಹುದೆಂಬ ಊಹೆಯಿಂದ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನ ಸೀಲ್‌ಡೌನ್‌ ಮಾಡಲಾಗಿದೆ. 

ಚೀನಾಕ್ಕೆ ಸೆಡ್ಡು ಹೊಡೆದ ಕರ್ನಾಟಕದ ಶ್ರೀರಾಮ ಭಟ್, 25 ರೂಪಾಯಿಗೆ ಫೇಸ್‌ಶೀಲ್ಡ್..!

ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಾರಿ ಚಾಲಕ ಇತ್ತೀಚೆಗೆ ಹುಬ್ಬಳ್ಳಿಗೆ ಲಾರಿ ಸಮೇತ ಹೋಗಿ ಬಂದಿರುವ ಮಾಹಿತಿ ದೊರೆತಿದ್ದು, ಇದೇ ಕಾರಣದಿಂದ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ. ಮುಂದಿನ ಏಳು ದಿನಗಳವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ಭಾಗ್ಯ ನಿಷೇಧಿಸಲಾಗಿದೆ. ಈಗಾಗಲೇ ಸಂಪೂರ್ಣ ದೇವಸ್ಥಾವನ್ನು ಸ್ಯಾನಿಟೈಜ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.