Asianet Suvarna News Asianet Suvarna News

ತುಮಕೂರು: ದೇಗುಲ ಪೂಜಾರಿ ಮನೆಯಲ್ಲಿ ಗಾಂಜಾ

ಹಲವಾರು ವರ್ಷಗಳಿಂದ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಪೂಜಾರಿಯ ಕಳ್ಳಾಟ ತುಮಕೂರಿನಲ್ಲಿ ಬಯಲಿಗೆ ಬಂದಿದೆ. ಗಾಂಜಾ ಬೆಳೆದಿದ್ದ ಮತ್ತು ಸಂಗ್ರಹಿಸಿದ್ದ ಆರೋಪಿ ದೇವಾಲಯದ ಪೂಜಾರಿ ಸೋಮಶೇಖರ್‌ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Marijuana found in priests house in tumakur
Author
Bangalore, First Published Jan 29, 2020, 2:40 PM IST

ಮಂಗಳೂರು(ಜ.29): ತುರುವೇಕೆರೆ ತಾಲೂಕಿನ ಬಿಗನೇನಹಳ್ಳಿ ಗೇಟ್‌ ಬಳಿಯ ಶ್ರೀ ಸರ್ಪ ಶನೀಶ್ವರ ದೇವಾಲಯದ ಆವರಣದಲ್ಲಿ ಸುಮಾರು 7.550 ಕೆಜಿ ತೂಕದ ಹಸಿ ಗಾಂಜಾ ಗಿಡ ಮತ್ತು ತನ್ನ ಮನೆಯಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 200 ಗ್ರಾಂ ಒಣಗಿದ ಗಾಂಜಾವನ್ನು ಇಲ್ಲಿಯ ಅಬಕಾರಿ ಉಪನಿರೀಕ್ಷಕ ಬಿ.ಎಲ್‌.ರವಿಶಂಕರ್‌ ನೇತೃತ್ವದ ಇಲಾಖಾ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖಾ ಸಿಬ್ಬಂದಿ ಶ್ರೀ ಸರ್ಪ ಶನೀಶ್ವರ ದೇವಾಲಯದ ಆವರಣದಲ್ಲಿ ಬೆಳೆಸಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿದ್ದರು. ಮಂಗಳವಾರ ಬೆಳಗ್ಗೆ ತಹಸೀಲ್ದಾರ್‌ ನಯೀಮ್‌ ಉನ್ನಿಸ್ಸಾ, ತಿಪಟೂರಿನ ಅಬಕಾರಿ ನಿರೀಕ್ಷಕರಾದ ಕೆ.ಟಿ.ವಿಜಯಕುಮಾರ್‌, ಎಂ.ಆರ್‌.ಸೋಮಶೇಖರ್‌, ಉಪ ನಿರೀಕ್ಷಕರಾದ ಎಚ್‌.ಟಿ.ಗಂಗರಾಜು, ರಾಜಮ್ಮ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಹೆಣ್ಮಕ್ಳನ್ನ ಕೆಣಕಿದರೆ ಹುಷಾರ್, ಬೀದಿ ಕಾಮಣ್ಣರ ಸದೆ ಬಡಿಯಲು ಕಲ್ಪತರು ಪಡೆ ಸಿದ್ಧ

ಗಾಂಜಾ ಬೆಳೆದಿದ್ದ ಮತ್ತು ಸಂಗ್ರಹಿಸಿದ್ದ ಆರೋಪಿ ದೇವಾಲಯದ ಪೂಜಾರಿ ಸೋಮಶೇಖರ್‌ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಹಲವಾರು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಈತ ದೇವಾಲಯಕ್ಕೆ ಬರುವ ಭಕ್ತರಲ್ಲಿ ಕಾಣಿಸಿಕೊಳ್ಳುವ ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಈ ಗಾಂಜಾದಿಂದ ತಯಾರಿಸಿದ ದ್ರವವನ್ನು ಔಷಧವೆಂದು ಹೇಳಿ ನೀಡಿ ಹಣ ಕೀಳುತ್ತಿದ್ದ ಎಂದು ಹೇಳಲಾಗಿದೆ.

ಪೂಜಾರಿ ವಾಹನದಲ್ಲಿ ಗಾಂಜಾ:

ಈತನ ಮನೆಯಿಂದ ಗಾಂಜಾ ಸಾಗಿಸಲು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ವಾಹನದೊಳಗೆ ಸುಮಾರು 200 ಗ್ರಾಂ ನಷ್ಟುಒಣ ಗಾಂಜಾ ಪತ್ತೆಯಾಗಿದೆ. ಈತನಿಂದ ವಶಪಡಿಸಿಕೊಂಡ ಹಸಿ ಗಾಂಜಾ, ಒಣ ಗಾಂಜಾ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ಸುಮಾರು 74 ಸಾವಿರ ರು. ಮೌಲ್ಯದ ಪದಾರ್ಥಗಳನ್ನು ವಶಪಡಿಸಿಕೊಂಡಿರುವುದಾಗಿ ಇಲ್ಲಿಯ ಅಬಕಾರಿ ನಿರೀಕ್ಷಕ ಬಿ.ಎಲ್‌.ರವಿಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios