ಮಸಾಲಾ ಜಯರಾಮ್‌ರಿಂದ ವೀರಶೈವ ಲಿಂಗಾಯತರ ಕಡೆಗಣನೆ: ಸೋಮಶೇಖರ್‌

ಹಾಲಿ ಶಾಸಕ ಮಸಾಲಾ ಜಯರಾಮ್‌ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ ಫಲವಾಗಿ ಇಂದು ಹಲವಾರು ಲಿಂಗಾಯತ ಮುಖಂಡರು ತಮ್ಮ ಜೆಡಿಎಸ್‌ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ್‌ ಹೇಳಿದರು.

Marginalization of Veerashaiva Lingayats by Masala Jayaram: Somasekhar snr

 ತುರುವೇಕೆರೆ : ಹಾಲಿ ಶಾಸಕ ಮಸಾಲಾ ಜಯರಾಮ್‌ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ ಫಲವಾಗಿ ಇಂದು ಹಲವಾರು ಲಿಂಗಾಯತ ಮುಖಂಡರು ತಮ್ಮ ಜೆಡಿಎಸ್‌ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ್‌ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಹಲವು ವೀರಶೈವ ಮುಖಂಡರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಶಾಸಕ ಮಸಾಲಾ ಜಯರಾಮ್‌ರನ್ನು ಕಳೆದ ಬಾರಿ ಶಾಸಕರನ್ನಾಗಿ ಮಾಡಲು ವೀರಶೈವ ಸಮುದಾಯ ತನ್ನದೇ ಆದ ಪಾತ್ರವನ್ನು ವಹಿಸಿತ್ತು. ಆದರೆ ಮಸಾಲಾ ಜಯರಾಮ್‌ರವರು ಗೆಲುವಿಗೆ ಕಾರಣಕರ್ತರಾಗಿದ್ದ ವೀರಶೈವ ಮುಖಂಡರನ್ನು ಕಡೆಗಣಿಸಿದರು. ಗೆಲುವಿಗೆ ಕಾರಣರಾಗಿದ್ದ ಪ್ರಮುಖ ಸಮುದಾಯವನ್ನು ನಿರ್ಲಕ್ಷಿಸಿದರು. ಹಾಗಾಗಿ ಬಹುಪಾಲು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಸೋಮಶೇಖರ್‌ ಹೇಳಿದರು.

ಬಿಜೆಪಿ ಪಕ್ಷ ಮಸಾಲಜಯರಾಮ್‌ ಕಾರ್ಯವೈಖರಿಗೆ ಬೇಸತ್ತಿರುವ ಸಾವಿರಾರು ಲಿಂಗಾಯಿತ ಮುಖಂಡರು ಜೆಡಿಎಸ್‌ ಸೇರ್ಪಡೆಗೊಂಡು ಜೆಡಿಎಸ್‌ನÜ ಅಭ್ಯರ್ಥಿಯಾಗಲಿರುವ ಎಂ.ಟಿ.ಕೃಷ್ಣಪ್ಪರನ್ನು ಈ ಬಾರಿ ಶಾಸಕರನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ತಾಲೂಕು ಬಿಜೆಪಿಯ ಮಾಜಿ ಅಧ್ಯಕ್ಷ ಹೆಡಿಗೆಹಳ್ಳಿವಿಶ್ವನಾಥ್‌ ಹೇಳಿದರು.

ವೀರಶೈವ ಲಿಂಗಾಯಿತ ಬಂಧುಗಳು ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡಿದ್ದರು. ಆದರೆ ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ದಾಂತ ಮಾಯವಾಗಿದೆ. ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆ ಸಿಗದಂತಾಗಿದೆ. ಲಿಂಗಾಯಿತ ಸಮುದಾಯವನ್ನು ಮತ ಹಾಕಲು ಮಾತ್ರ ಬಳಸಿಕೊಂಡು ಅಧಿಕಾರ ಬಂದ ನಂತರ ದೂರ ಮಾಡಿದ ಬಿಜೆಪಿ ಶಾಸಕರ ಆಟ ಈ ಬಾರಿ ನಡೆಯುವುದಿಲ್ಲ. ಲಿಂಗಾಯಿತ ಸಮುದಾಯದ ಜನರು ಶಾಸಕರ 5 ವರ್ಷದ ಆಡಳಿತದಲ್ಲಿ ಲಿಂಗಾಯಿತರಿಗೆ ಏನೇನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ತಾಲೂಕಿನಲ್ಲಿಯೂ ಸಹ ಸಾವಿರಾರು ಲಿಂಗಾಯಿತ ಮುಖಂಡರು ಬಿಜೆಪಿ ಬಿಟ್ಟು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲಿಯೇ ಜೆಡಿಎಸ್‌ ವೀರಶೈವ ಲಿಂಗಾಯಿತ ಸಮಾವೇಶ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್‌, ಮಾವಿನಹಳ್ಳಿ ರೇಣಕಪ್ಪ, ಮುಖಂಡರಾದ ವೆಂಕಟಾಪುರ ಯೋಗೀಶ್‌, ತಾಳಕೆರೆ ಮಂಜುನಾಥ್‌, ಮಾದಾಪಟ್ಟಣ ಮೋಹನ್‌ಕುಮಾರ್‌, ನವೀನ್‌, ತಂಡಗ ಚನ್ನಬಸವಯ್ಯ, ರಾಮಕೃಷ್ಣ, ಅಶ್ವತ, ವಿನೋದ್‌, ದುಂಡ ಕುಮಾರ್‌ ಸೇರಿದಂತೆ ಹಲವರು ಇದ್ದರು.

ಸ್ಪೀಕರ್ ವಜಾಕ್ಕೆ ಆಗ್ರಹ

ಬೀದರ್‌ (ಫೆ.18) : ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಕ್ಷೇತ್ರದ ಮತದಾರರನ್ನು ಅವಮಾನಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegade Kageri) ಅವರನ್ನು ವಿಧಾನಸಭಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(Veerashaiva Lingayat Mahasabha) ಜಿಲ್ಲಾ ಯುವ ಘಟಕ ಆಗ್ರಹಿಸಿದೆ.

ಯುವ ಘಟಕದ ಪದಾಧಿ​ಕಾರಿಗಳು ನಗರದಲ್ಲಿ ನಿಯೋಗದಲ್ಲಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ​ಡಳಿತಕ್ಕೆ ಸಲ್ಲಿಸಿ, ವಿಧಾನಸಭಾಧ್ಯಕ್ಷರ ಹುದ್ದೆ ಸಾಂವಿಧಾನಿಕವಾದದ್ದು. ಆದರೆ, ಕಾಗೇರಿ ಪಕ್ಷಪಾತದಿಂದ ವರ್ತಿಸಿದ್ದಾರೆ. ಪ್ರತಿ ಪಕ್ಷದ ಸದಸ್ಯರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಶಾಸಕ ಈಶ್ವರ ಖಂಡ್ರೆ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಕ್ಷೇತ್ರದ ಜನರಿಗೂ ಅವಮಾನ ಮಾಡಿದ್ದಾರೆ. ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು.

ಸದನದಲ್ಲಿ ಈಶ್ವರ್‌ ಖಂಡ್ರೆ-ಸ್ಪೀಕರ್‌ ಕಾಗೇರಿ ವಾಕ್ಸಮರ, ಕೋಲಾಹಲ

ಚುನಾವಣೆ(Election) ವೇಳೆ ಈಶ್ವರ ಖಂಡ್ರೆ ಘನತೆಗೆ ಚ್ಯುತಿ ತರಲೆಂದೇ ವಿಧಾನಸಭಾಧ್ಯಕ್ಷರು(Assembly Speaker) ಮಾತುಗಳನ್ನು ಆಡಿದ್ದಾರೆ. ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.

ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಾಬುರಾವ್‌(Babu rao) ತುಂಬಾ, ರಾಜ್ಯ ಘಟಕದ ಕಾರ್ಯದರ್ಶಿ ನಾಗಶೆಟ್ಟಿ, ಶಿವಶೆಟ್ಟಿ, ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಜಿಲ್ಲಾ ಯುವ ಅಧ್ಯಕ್ಷ ಸಂಗಮೇಶ ಮೂಲಗೆ, ಮುಖಂಡರಾದ ಗಣೇಶ ಪಾಟೀಲ ಜ್ಯಾಂತಿ, ಹಣಮಂತ ಮಲ್ಕಾಪುರ, ಧನರಾಜ ಹಂಗರಗಿ, ಧನರಾಜ ಪಾಟೀಲ, ಪ್ರಕಾಶ ಪಾಟೀಲ, ಸಂಜು ಯಾದವ್‌, ರಾಮಶೆಟ್ಟಿಹುಣಜೆ, ಗೋಪಾಲ್‌, ಶಿವರಾಜ ವೀರಣ್ಣೂರ, ದೊಡ್ಡಿ, ದಯಾನಂದ ಜಾಧವ್‌, ಅನೀಲ ಪಾಟೀಲ್‌, ದತ್ತಾತ್ರಿ ಬಿರಾದಾರ, ಸಂಜುಕುಮಾರ ಕುರನಳ್ಳಿಕರ್‌, ಅಮರ ಹಜನಾಳೆ ಮೊದಲಾದವರು ಇದ್ದರು.

ನಿಮ್ಮಂಥವರನ್ನು ಆಯ್ಕೆ ಮಾಡುವುದೇ ಅಗೌರವ: ಈಶ್ವರ ಖಂಡ್ರೆಗೆ ಸ್ಪೀಕರ್‌ ವಾರ್ನಿಂಗ್‌

Latest Videos
Follow Us:
Download App:
  • android
  • ios