ಬೆಳಗಾವಿ(ಜ.12): ಕರ್ನಾಟಕದಲ್ಲಿ ಹಿಟ್ಲರ್ ಸ್ವರೂಪದ ಭಯೋತ್ಪಾದನೆ ಇದೆ. ಮಾಧ್ಯಮ ಸೇರಿದಂತೆ ಎಲ್ಲದರ ಮೇಲೆ ಹಿಟ್ಲರ್ ದಬ್ಬಾಳಿಕೆ ಮಾಡುತ್ತಿದ್ದ, ಅದೇ ರೀತಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಹೊಸ ಹಿಟ್ಲರ್‌ಶಾಹಿ ನಿರ್ಮಾಣವಾಗಿದೆ ಎಂಬುದು ನನಗೆ ಖಾತ್ರಿಯಾಗಿದೆ. ಇದನ್ನು ಕರ್ನಾಟಕ ಹಾಗೂ ಭಾರತದಲ್ಲಿ  ನಾವು ಸಹಿಸಲ್ಲ ಎಂದು ಮರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ವಿವಾದಾತ್ಮಕವಾಗಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಷಂಡರ ಭೂಮಿ ಇದೆಯಾ? ಪರಾಕ್ರಮಿಗಳ ಭೂಮಿ ಏನಲ್ಲ ಇದು ಎಂದು ಹೇಳುವ ಮೂಲಕ ಕನ್ನಡ ನೆಲದಲ್ಲೇ ನಿಂತು ಕನ್ನಡಿಗರಿಗೆ ಅಪಮಾನವಾಗುವ ರೀತಿ ಡಾ.ಶ್ರೀಪಾಲ್ ಸಬ್ನೀಸ್ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾಷೆಗಳ ಮೇಲೆ ದಬ್ಬಾಳಿಕೆ ಏಕೆ ಮಾಡ್ತೀರಾ? ಷಂಡರ ಭೂಮಿ ಇದೆಯಾ, ಪರಾಕ್ರಮಿಗಳ ಭೂಮಿ ಏನಲ್ಲಾ ಇದು. ಭಾಷೆಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ಮರಾಠಿ ಭಾಷಿಕರು ಕನ್ನಡಿಗರನ್ನು ವಿರೋಧಿಸುವುದಿಲ್ಲ. ಈ ಕನ್ನಡ ಭಾಷೆ ಬಸವೇಶ್ವರ ಭಾಷೆ ಅಲ್ಲ ಎಂದು ತಿಳಿಸಿದ್ದಾರೆ. 

ಕರ್ನಾಟಕ ನವನಿರ್ಮಾಣ ಸೇನೆ(ಕನಸೆ) ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಏನು ಬೊಬ್ಬೆ ಹೊಡೀತಾನೆ, ಇಂತಹ ಮನುಷ್ಯ ಕರ್ನಾಟಕದ ಭೂಮಿ ಹಾಗೂ ಸಂಸ್ಕೃತಿಗೆ ಯೋಗ್ಯವಲ್ಲ. ಅವನ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಇದನ್ನು ನಾವು ಕರ್ನಾಟಕ ಸರ್ಕಾರವನ್ನು ನಾವು ಕೇಳುತ್ತೇವೆ. ಈ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.