ಚಿಕ್ಕೋಡಿ (ಅ.02): ಮರಾಠಿಗರ ಪ್ರಾಬಲ್ಯವಿರುವ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮರಾಠಿಗರೇ ಹೆಚ್ಚಾಗಿ ಭಾಗವಹಿಸಿ 65ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ಭಾಷಾ ಸಾಮರಸ್ಯ ಮೆರೆದರು. 

ಗ್ರಾಮದ ಶಿವಾಜಿ ಚೌಕ್‌ನಲ್ಲಿ ಶಿವಾಜಿ ತರುಣ ಮಂಡಳದ ಯುವಕರು ಹಾಗೂ ಗ್ರಾಮದ ಹಿರಿಯದು ಭುವನೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದರು. 

ಮರಾಠಿ ಸಮುದಾಯಕ್ಕೆ ಶೇ.16 ಮೀಸಲು ಜಾರಿಗೆ ಸುಪ್ರೀಂ ತಡೆ! ...

ಈ ಸಂದರ್ಭದಲ್ಲಿ ಮಾತನಾಡಿದ ಶಿವಾಜಿ ಕ್ರೆಡಿಟ್‌ ಸೌಹಾರ್ದ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಬೋಸಲೆ, ಗಡಿಭಾಗದಲ್ಲಿ ಕನ್ನಡ-ಮಾರಾಠಿಗರು ಒಂದಾಗಿ ಬದುಕುತ್ತಿದ್ದೇವೆ. 

ಕನ್ನಡಿಗರ ಮಧ್ಯೆ ಮತ್ತು ಕನ್ನಡ ನೆಲದಲ್ಲಿರುವ ಮರಾಠಿಗರು ಮೊದಲು ಕನ್ನಡ ಭಾಷೆ ಕಲಿತು ಆಮೇಲೆ ತಮ್ಮ ತಮ್ಮ ಮಾತೃಭಾಷೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.