Magadi: ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ ಯುವಪಡೆ

ತಾಲೂಕಿನ ಕೋರಮಂಗಲ ಗ್ರಾಮದ ಯುವಕರು ಮುಖಂಡ ಶಿವಕುಮಾರ್‌ ಅವ​ರೊಂದಿಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷವನ್ನು ಶಾಸಕ ಎ.ಮಂಜುನಾಥ್‌ ಸಮ್ಮು​ಖ​ದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.

Many Youths Joins JDS in Magadi snr

ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ ಯುವಪಡೆ

 ಮಾಗಡಿ (ಅ.14):  ತಾಲೂಕಿನ ಕೋರಮಂಗಲ ಗ್ರಾಮದ ಯುವಕರು ಮುಖಂಡ ಶಿವಕುಮಾರ್‌ ಅವ​ರೊಂದಿಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷವನ್ನು ಶಾಸಕ ಎ.ಮಂಜುನಾಥ್‌ ಸಮ್ಮು​ಖ​ದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.

ಈ ವೇಳೆ ಶಾಸಕ ಮಂಜುನಾಥ್‌ ಮಾತನಾಡಿ, ಜೆಡಿಎಸ್‌ (JDS)  ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿರುವ ಯುವಕರಿಗೆ ಜೆಡಿಎಸ್‌ ಪಕ್ಷದಿಂದ ಸ್ವಾಗತ ಕೋರುತ್ತೇವೆ. ನಮ್ಮ ಪಕ್ಷದಲ್ಲಿ ನಿಮಗೆ ಉತ್ತಮ ಸ್ಥಾನಮಾನ ಕೊಡುವ ಜವಾಬ್ದಾರಿ ನನ್ನ ಮೇಲಿದ್ದು ಅದನ್ನು ಉಳಿಸಿಕೊಳ್ಳು​ತ್ತೇನೆ. ಕಳೆದ 4 ವರ್ಷಗಳಿಂದಲೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು ಕೋರಮಂಗಲ ಗ್ರಾಮಕ್ಕೂ ರಸ್ತೆ (road)  ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಒತ್ತು ಕೊಟ್ಟಿರುವ ಕಾರಣ ಅಭಿವೃದ್ಧಿಯನ್ನು ಬೆಂಬಲಿಸಿ ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಹೆಚ್ಚಿನ ಬಲ ಬಂದಂತಾಗಿದೆ. ಯುವಕರನ್ನೆಲ್ಲಾ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟುಒತ್ತು ಕೊಡಲಾಗುತ್ತದೆ. ಯುವಕರು ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ಹೆಚ್ಚಿನ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕರು ತಿಳಿಸಿದರು.

ಕೋರಮಂಗಲದ ಮುಖಂಡ ಶಿವಕುಮಾರ್‌ ಮಾತನಾಡಿ, ಶಾಸಕ ಎ. ಮಂಜುನಾಥ್‌ ಅವರ ಅಭಿವೃದ್ಧಿಯನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಹರ್ಷ ತಂದಿದೆ. ನಾನು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪರಾಜಿತರಾಗಿದ್ದರೂ ಕೂಡ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಗ್ರಾಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರು ಸಾಕಷ್ಟುಅನುದಾನ ತಂದಿದ್ದಾರೆ. ಈ ಅಭಿವೃದ್ಧಿಯನ್ನು ನೋಡಿ ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿ​ದರು.

ಕಾಂಗ್ರೆಸ್‌ ಪಕ್ಷವನ್ನು ತೊರೆದ ಕೋರಮಂಗಲದ ಕಾಳೇಗೌಡ, ಅನಂತ್‌ ಕುಮಾರ್‌, ಗಂಗಾಧರ ಗೋವಿಂದ ಸೇರಿದಂತೆ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ನಾನು ಕಾಂಗ್ರೆಸ್ ಸೇರಿಲ್ಲ :  

ನಾನು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡಿಲ್ಲ. ಎರಡು ಬಾರಿ ಶಾಸಕರಾಗಿದ್ದ ತಂದೆ ಡಿ.ಹಲಗೇಗೌಡರು ಹಾಗೂ ಇಡೀ ನಮ್ಮ ಕುಟುಂಬವೇ ಕಾಂಗ್ರೆಸ್‌ ಆಗಿರುವ ಕಾರಣ ಭಾರತ್‌ ಜೋಡೋ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಭಿಮಾನದಿಂದ ನಮಗೆ ಹಾರ ಹಾಕಿದ್ದಾರೆ ಅಷ್ಟೇ ಎಂದು ಜಿಪಂ ಮಾಜಿ ಸದಸ್ಯ ಎಚ್‌.ಮಂಜುನಾಥ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ನಾನು ಸಕ್ರಿಯ ರಾಜಕಾರಣದಿಂದ (Politics)  ದೂರವಿದ್ದೆ. ಈ ಹಿಂದೆ ನಾನು ಬಿಜೆಪಿ(BJP) ಪಕ್ಷ ಸೇರಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಮನೆಗೆ ಭೇಟಿ ನೀಡಿ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡುವ ಭರವಸೆ ನೀಡಿದ್ದರು. ಆದರೆ, ನಾನು ಬಿಜೆಪಿಗೆ ಸೇರಿರಲಿಲ್ಲ ಎಂದರು.

ಭಾರತ್‌ ಜೋಡೋ ಯಾತ್ರೆ (Bharat Jodo Yatra ) ಪ್ರಯುಕ್ತ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಜಕ್ಕನಹಳ್ಳಿಗೆ ಬರುವ ಹಿನ್ನೆಲೆ ಡಿ.ಕೆ.ಶಿವಕುಮಾರ್‌ ಸಿದ್ಧತೆ ಪರಿಶೀಲಿಸಲು ಆಗಮಿಸಿದ್ದರು. ಜತೆಗೆ ಅದು ಪಕ್ಷಾತೀತ ಕಾರ್ಯಕ್ರಮವಾಗಿದ್ದರಿಂದ ಅಲ್ಲಿಗೆ ಭೇಟಿ ಮಾಡಿದ್ದ ನನಗೆ ಅಭಿಮಾನದಿಂದ ಹಾರ ಹಾಕಿದರು.

ಮೇಲುಕೋಟೆ ಕ್ಷೇತ್ರ ಕಾಂಗ್ರೆಸ್‌ನಲ್ಲಿ ಗೊಂದಲಮಯ ವಾತಾವರಣ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸಲಾಯಿತು. ಅಲ್ಲದೇ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ಚುನಾವಣೆಗಳಲ್ಲಿಯೂ ರೈತಸಂಘದ ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಮತ ಚಲಾಯಿಸುವ ಮೂಲಕ ಪಕ್ಷದಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಬೆಂಬಲಿಗರು ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಕಾಂಗ್ರೆಸ್‌ ಸೇರುವ ಬಗ್ಗೆ ಚಿಂತಿಸುವೆ ಎಂದರು.

ನನ್ನ ಸಹೋದರ ಕಾಂಗ್ರೆಸ್ನಲ್ಲಿದ್ದಾರೆ. ಜತೆಗೆ ನಮ್ಮ ತಂದೆ, ಮಾಜಿ ಶಾಸಕ ಡಿ.ಹಲಗೇಗೌಡರ ಕುಟುಂಬ ಕಾಂಗ್ರೆಸ್‌ ಆಗಿದೆ. ಹೀಗಾಗಿ ಕಾಂಗ್ರೆಸ್‌ ಜೋಡೋ ಯಾತ್ರೆ ಪ್ಲೆಕ್‌ಗಳಲ್ಲಿ ನನ್ನ ಫೋಟೋ ಅಳವಡಿಸಲಾಗಿದೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಳೇನಹಳ್ಳಿ ಪುಟ್ಟಸ್ವಾಮಿಗೌಡ, ಶಿವರಾಜು, ಎಸ….ಕೆ.ಪ್ರಕಾಶ್‌, ಶಿವಣ್ಣ ಇತರರಿದ್ದರು.

ನನ್ನನ್ನು ಕಂಡರೆ ಭಯ  :  

ಭಾರತ್‌ ಜೋಡೋ ಪಾದಯಾತ್ರೆಯಿಂದ ಬಿಜೆಪಿಗರಲ್ಲಿ ನಡುಕ ಶುರುವಾಗಿದ್ದು, ದೇಶದಲ್ಲಿ ರಾಹುಲ್‌ ಗಾಂಧಿ, ರಾಜ್ಯದಲ್ಲಿ ನಾನು ಎಂದರೆ ಅವರಿಗೆ ಭಯವಾಗುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಸ್ಥಳೀಯ ಯರಮರಸ್‌ ಸಕ್ರ್ಯುಟ್‌ ಹೌಸ್‌ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಿಂದ ಭೀತಿಗೊಂಡಿರುವ ಬಿಜೆಪಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ದ್ವೇಷದ ರಾಜಕಾರಣ ಹೆಚ್ಚಾಗಿದೆ. 

Latest Videos
Follow Us:
Download App:
  • android
  • ios