Asianet Suvarna News Asianet Suvarna News

ಶಾಸಕ ಪುಟ್ಟರಾಜು ನಾಯಕತ್ವ ಒಪ್ಪಿ ಜೆಡಿಎಸ್‌ ಸೇರ್ಪಡೆ

ತಾಲೂಕಿನ ಸಣಬ ಗ್ರಾಮದ ಹಿರಿಯ ಮುಖಂಡರು, ಯುವಕರು ಸೇರಿ 50 ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ಸಿ.ಎಸ್‌.ಪುಟ್ಟರಾಜು ನಾಯಕತ್ವ ಒಪ್ಪಿ ರೈತಸಂಘ ತೊರೆದು ಜೆಡಿಎಸ್‌ ಸೇರ್ಪಡೆಗೊಂಡರು.

Many Leaders Joins JDS in mandya snr
Author
First Published Dec 7, 2022, 6:38 AM IST

ಪಾಂಡವಪುರ: (ಡಿ. 07):  ತಾಲೂಕಿನ ಸಣಬ ಗ್ರಾಮದ ಹಿರಿಯ ಮುಖಂಡರು, ಯುವಕರು ಸೇರಿ 50 ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ಸಿ.ಎಸ್‌.ಪುಟ್ಟರಾಜು ನಾಯಕತ್ವ ಒಪ್ಪಿ ರೈತಸಂಘ ತೊರೆದು ಜೆಡಿಎಸ್‌ ಸೇರ್ಪಡೆಗೊಂಡರು.

ಚಿನಕುರಳಿ ಗ್ರಾಮದ ಶಾಸಕ ಸಿ.ಎಸ್‌.ಪುಟ್ಟರಾಜು ನಿವಾಸದಲ್ಲಿ ಸೋಮವಾರ ಮುಖಂಡರಾದ ಚನ್ನಕೇಶವ, ಎಸ್‌.ಕೆ.ಪ್ರಕಾಶ್‌, ಚಲುವರಾಜು ನೇತೃತ್ವದಲ್ಲಿ ರೈತ ಸಂಘದ ಮುಖಂಡರಾದ ಸಣ್ಣೇಗೌಡ, ಮೂಲ ಮನೆ ಕೃಷ್ಣೇ ಗೌಡ, ಎಸ್‌.ಕೆ. ಯೋಗಣ್ಣ, ಕಾಂತ ರಾಜು, ಸ್ವಾಮಯ್ಯ, ಜವರಯ್ಯ, ಸ್ವಾಮಿ, ಉಮಾಶಂಕರ್‌, ಯೋಗಯ್ಯ, ನರಸಿಂಹಶೆಟ್ಟಿ, ಶೇಖರಯ್ಯ, ಕಾರೆಚಲುವಯ್ಯ, ಮಾದಮ್ಮರ ಕೃಷ್ಣೇಗೌಡ, ದಿವಾಕರ, ಸಣ್ಣೈದೇಗೌಡ, ಮಹೇಶ್‌, ಮಾದೇವ, ಚಂದ್ರು, ಜವರಯ್ಯ ಸೇರಿದಂತೆ ಹಲವು ಮಂದಿ ಜೆಡಿಎಸ್‌ (JDS)  ಟವಲ್… ಹಾಕಿಕೊಳ್ಳುವ ಮೂಲಕ ಸೇರ್ಪಡೆಗೊಂಡರು.

ನಂತರ ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಸಣಬ ಗ್ರಾಮ ನನ್ನ ತಾಯಿ ಮನೆ ಇದ್ದಂತೆ. ನನ್ನನ್ನು ಮೊದಲಿನಿಂದಲೂ ಮನೆ ಮಗನಂತೆ ಪ್ರೀತಿಸಿ ಬೆಳೆಸಿದ್ದಾರೆ. ನಾನು ಸಚಿವನಾಗಿ ಕೆಲಸ ಮಾಡುವ ವೇಳೆ ಕೆರೆ ಅಭಿವೃದ್ಧಿ ಪಡಿಸಿದ್ದೇನೆ. ಮುಖ್ಯರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆಸಲ್ಲಿಸಿ ಕೆಲಸ ಆರಂಭಿಸಿದ್ದೇವೆ. ಅರ್ಧಕ್ಕೆ ಸ್ಥಗಿತಗೊಂಡಿದ್ದ ದೇವಸ್ಥಾನ ಉದ್ಘಾಟನೆಗೂ ಕ್ರಮವಹಿಸಲಾಗಿದೆ ಎಂದರು.

ಗ್ರಾಮದ ಜನತೆ ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು ಎಂದು ಗ್ರಾಪಂ ಸದಸ್ಯರು, ಯುವಕರು, ಮುಖಂಡರು ಗ್ರಾಮದ ಐಕ್ಯತೆ ಉದ್ದೇಶದಿಂದ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖವಾದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ದ್ವೇಷ ಅಸೂಯೆಯನ್ನು ಬಿಟ್ಟು ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ನಡೆಯೋಣ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ

 

 ಬೆಟ್ಟದಪುರ (.29)  ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಮುರದೂರು ಗ್ರಾಮದ ಕಾಂಗ್ರೆಸ್‌ ಮುಖಂಡರು ಶಾಸಕ ಕೆ. ಮಹದೇವ್‌ ನೇತೃತ್ವದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಶಾಸಕ ಮಹದೇವ್‌ ಅವರು ಗ್ರಾಮದ ಅಭಿವೃದ್ಧಿಗಾಗಿ . 20 ಲಕ್ಷದ ರಸ್ತೆ (Road)  ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿಗಾಗಿ ಶಾಸಕನಾಗಿದ್ದೇನೆ ಹೊರತು ಹಣ ಮಾಡುವ ಉದ್ದೇಶವಿಲ್ಲ. ಕಡು ಬಡತನದಲ್ಲಿ ಹುಟ್ಟಿದ ನನಗೆ ಬಡವರ ಕಷ್ಟಗೊತ್ತು. ಆದ್ದರಿಂದ ಹಣವನ್ನು (money) ಯಾವುದೇ ಸಂದರ್ಭದಲ್ಲಿ ಸಂಪಾದನೆ ಮಾಡಬಹುದು. ಆದರೆ ಬಡವರ ಕಷ್ಟವನ್ನು ತಿಳಿಯುವುದು ಬಹಳ ಕಷ್ಟಎಂದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಕುಮಾರ್‌, ಪಂಚ್ವಳ್ಳಿ ಸಂತೋಷ್‌, ಕೆಂಪಣ್ಣ ಮರದುರು, ಮಹದೇವ್‌, ಸಂತೋಷ್‌ ಹಾಗೂ ಜಿಪಂ ಎಇಇ ಮಲ್ಲಿಕಾರ್ಜುನ್‌ ಇದ್ದರು.

ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ

ಚಿಕ್ಕಬಳ್ಳಾಪುರ : ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡತನವನ್ನ ಹೋಗಲಾಡಿಸಲಾಗಿಲ್ಲ. ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಬಾರಿ ಪೂರ್ಣ ಬಹುಮತದ ಸರ್ಕಾರ ಕೊಟ್ಟು ನೋಡಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಂಚರತ್ನ ರಥಯಾತ್ರೆಯ 10ನೇ ದಿನವಾದ ಭಾನುವಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಮಂಚೇನಹಳ್ಳಿ, ಮುಸ್ಟೂರು, ಗೊಲ್ಲಹಳ್ಳಿ, ಪೆರೇಸಂದ್ರ, ಹೊನೇಗಲ್ಲು, ದಿಬ್ಬೂರು, ನಾಯನಹಳ್ಳಿ ಗ್ರಾಮಗಳಲ್ಲಿ ನಡೆದ ರಥಯಾತ್ರೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದರು.

ಆರೋಗ್ಯ ಲೆಕ್ಕಿಸದೇ ಯಾತ್ರೆ: ಇಂದು ನನ್ನ ಆರೋಗ್ಯವನ್ನು ಲೆಕ್ಕಿಸದೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ನೂರು ದಿನ ಹಮ್ಮಿಕೊಂಡಿದ್ದೇನೆ. ನಿಮಗೆ ನಮ್ಮ ಪಂಚರತ್ನ ಯೋಜನೆ ಬಗ್ಗೆ ತಿಳಿಸಲು ಓಡಾಡುತ್ತಿದ್ದೇನೆ. ಕಳೆದ 10 ದಿನಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆಂದರು. ಸ್ವಾತಂತ್ರ್ಯ ಬಂದ ಬಳಿಕ ಎಷ್ಟೋ ನೇಮಕಾತಿಯಾಗಿಲ್ಲ. ಸರಿಯಾಗಿ ಕಟ್ಟಡ ಕಟ್ಟಿಲ್ಲ. ಎರಡು ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್‌ ಕೊಟ್ಟಿಲ್ಲ. ಈ ಭಾಗದಲ್ಲಿ ಬಸ್‌ ವ್ಯವಸ್ಥೆ ಕೂಡ ಸರಿಯಾಗಿಲ್ಲ. 

ಬಿಜೆಪಿ ಸರ್ಕಾರ ಬಂದಾಗಲೇ ಗಡಿ ಗಲಾಟೆ: ಎಚ್‌.ಡಿ.ಕುಮಾರಸ್ವಾಮಿ

ಹೀಗಿರುವಾಗ ಬಡ ಮಕ್ಕಳು ಶಾಲೆಗೆ ಹೋಗಿ ಕಲಿಯೋದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಇದಕ್ಕಾಗಿ ಪಂಚರತ್ನ ಯೋಜನೆಗೆ 1ಲಕ್ಷ 20 ಸಾವಿರ ಕೋಟಿ ಹಣ ಹೊಂದಿಸಬೇಕಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಹಣ ಪೋಲಾಗಲು ಬಿಡೋದಿಲ್ಲ. ಜನತೆಯ ಸಮಸ್ಯೆ ಆಧಾರದ ಮೇಲೆ, ಜನರಿಗೆ ಅನುಕೂಲ ಆಗಲು ಪ್ರಣಾಳಿಕೆ ತರುತ್ತವೆಂದು ಭರವಸೆ ನೀಡಿದರು.

Follow Us:
Download App:
  • android
  • ios