ಹನುಮ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲು ನೀರು ಹೊತ್ತು ತರುತ್ತಿದ್ದ ಹನುಮ ಮಾಲಾಧಾರಿಗಳ ಮೇಲೆ ಮಿನಿ ಲಾರಿಯನ್ನು ಹರಿಸಲಾಗಿದ್ದು, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ.
Karnataka Districts Apr 23, 2024, 1:18 PM IST
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ತಾಲೂಕು. ಇಲ್ಲಿ ಪ್ರತಿ ಬಾರಿಯೂ ಕೂಡ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಕೂಡ ಒಟ್ಟೊಟ್ಟಿಗೆ ಆರಂಭವಾಗುತ್ತೆ. ಅಂತದ್ದೇ ಒಂದು ಕುಡಿಯುವ ನೀರಿನ ಸಮಸ್ಯೆ ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದಲ್ಲಿ ಎದುರಾಗಿದೆ.
Karnataka Districts Apr 22, 2024, 12:18 AM IST
ರಾಜ್ಯದ ಅಭಿವೃದ್ಧಿಗೆ ಸಹಕಾರ ಕೊಡ್ತೀನಿ ಅಂತಾ ಮೋದಿ ಹೇಳಿದ್ದಾರೆ. ಕಾವೇರಿ ವಿಚಾರದಲ್ಲಿ ನ್ಯಾಯ ಕೊಡಿಸದಿದ್ದರೇ ಮತ್ತೆಂದೂ ನಿಮ್ಮ ಮುಂದೆ ಮತ ಕೇಳೋಕೆ ಬರಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
Politics Apr 21, 2024, 5:24 PM IST
ತಳಿರು ತೋರಣ ತಹೇವಾರಿ ಹೂವುಗಳಿಂದ ಅಲಂಕರಿಸಿದ ದ್ವಾರ, ಒಳಗೆ ಹೋದಂತೆ ಮಣ್ಣಿನ ಮಡಕೆಯಲ್ಲಿ ಸಿಗುವ ತಣ್ಣನೆ ನೀರು... ಈ ರೀತಿಯ ಸುಂದರ ಅಲಂಕಾರ ಭವ್ಯ ಸ್ವಾಗತ, ಇವೆಲ್ಲಾ ಕಂಡು ಬರುತ್ತಿರುವುದು ಯಾವುದೋ ಮದುವೆ ಮನೆಯಲ್ಲಲ್ಲ, ತಮಿಳುನಾಡಿನ ಚುನಾವಣಾ ಕೇಂದ್ರವೊಂದರ ದೃಶ್ಯವಿದ್ದು...
India Apr 21, 2024, 3:43 PM IST
ನಮ್ಮ ನೀರು ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ತೂರಾಡಿಕೊಂಡು ಹೋರಾಟ ನಡೆಸಿದ ಮೇಕೆದಾಟು ಯೋಜನೆ ಕಾಂಗ್ರೆಸ್ ಸರ್ಕಾರ ಬಂದು 11 ತಿಂಗಳಾಯಿತು. ರೈತರು, ಜನರಿಗೆ ನೀಡಿದ ಭರವಸೆ ಏನಾಯಿತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು.
Politics Apr 21, 2024, 7:43 AM IST
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾದುದು. ಅವ್ರು ತಿನ್ನೋ ಆಹಾರ, ಪಾನೀಯ ಎಲ್ಲದರ ಬಗ್ಗೆಯೂ ಗಮನ ಹರಿಸಬೇಕು. ಆದ್ರೆ ಮಕ್ಕಳು ದಿನಕ್ಕೆ ಎಷ್ಟು ಲೀಟರ್ ನೀರು ಕುಡೀಬೇಕು ಅನ್ನೋದು ನಿಮ್ಗೊತ್ತಾ? ಆ ಬಗ್ಗೆ ಮಾಹಿತಿ ಇಲ್ಲಿದೆ.
Health Apr 19, 2024, 6:30 PM IST
ಕಳೆದ ವರ್ಷದ ಮಳೆ ಕೊರತೆ ಹಾಗೂ ಬೀರು ಬೇಸಿಗೆಯಿಂದ ಜಲಮೂಲಗಳು ಬರಿದಾಗಿವೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಪ್ರತಿ ಬೇಸಿಗೆಯಲ್ಲೂ ಈ ಸ್ಥಿತಿ ನಿರ್ಮಾಣ ಸಾಮಾನ್ಯವಾಗಿದೆ. ಹೀಗಾಗಿ ಬೇರೆಡೆಯಿಂದ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಆದರೆ, ಹೀಗೆ ಹರಿದು ಬರುವ ನೀರನ್ನು ಸೂಕ್ತವಾಗಿ ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಬ್ಯಾರೇಜ್‌ನಿಂದ ನೀರು ಸೋರುತ್ತಿರುವುದು.
Karnataka Districts Apr 19, 2024, 4:51 PM IST
ಈಶ್ವರ ಖಂಡ್ರೆ ಅವರೇ ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಂಡಿದ್ದೆ ಆದರೆ ಈಗ ತಂದೆಯಂತೆ ಮಗ ಕೂಡ ಸುಳ್ಳು ಹೇಳುವುದರಲ್ಲಿ ಪ್ರತಿಸ್ಪರ್ಧೆ ನಡೆಸಿದಂತೆ ಕಾಣುತ್ತಿದೆ ಎಂದ ಅವರು ಬುಧವಾರ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಸಾಗರ ಖಂಡ್ರೆ ನನಗೆ ಸವಾಲು ಮಾಡಿದ್ದಾರೆ. ಆದರೆ ನಿಮ್ಮ ಕುಟುಂಬದ ಹಿನ್ನೆಲೆ ನೋಡಿಕೊಳ್ಳಿ ಎಂದು ವ್ಯಂಗ್ಯವಾಡಿದ ಭಗವಂತ ಖೂಬಾ
Politics Apr 19, 2024, 11:30 AM IST
ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಸದ ನಿಮಗೆ ಓಟು ಯಾಕೆ ಬೇಕು? ಲೋಕಸಭಾ ಚುನಾವಣೆ ಮತದಾನಕ್ಕೆ ಬಹಿಷ್ಕಾರಕ್ಕೆ ಮುಂದಾದ ಚಿಕ್ಕಮಗಳೂರು ಜಿಲ್ಲೆಯ ಮಡಬೂರು ಗ್ರಾಮಸ್ಥರು
Politics Apr 18, 2024, 9:04 PM IST
ನಗರದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆದರಿಕೆ ರೂಪದಲ್ಲಿ ಹೇಳಿದ್ದಾರೆ ಎನ್ನಲಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ.
Politics Apr 18, 2024, 9:25 AM IST
ಮಧ್ಯಪ್ರಾಚ್ಯ ದೇಶಗಳು ಅದರಲ್ಲೂ ಪ್ರಮುಖವಾಗಿ ಯುಎಇಯಲ್ಲಿ ಈ ವಾರಿ ಭಾರೀ ಪ್ರಮಾಣದ ಮಳೆಯಾಗಿದೆ. ಅದರಲ್ಲೂ ವಿಶ್ವದ ಐಷಾರಾಮಿ ನಗರಗಳಲ್ಲಿ ಒಂದಾದ ದುಬೈ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ.
International Apr 17, 2024, 11:51 AM IST
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಎಲ್ಲ ಕೈಗಾರಿಕೆಗಳಿಗೆ ರಾಸಾಯನಿಕ ತ್ಯಾಜ್ಯ ನೀರಿನ ಸಂಸ್ಕರಣೆಗೆ ಜಪಾನ್ ಟೆಕ್ನಾಲಜಿ ಬಳಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
BUSINESS Apr 16, 2024, 9:37 PM IST
ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ನಂಬಿದ್ದೇನೆ. ೧೯೬೨ರಿಂದ ನಾನು ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದೇನೆ. ವಿ.ಸೋಮಣ್ಣ ಗೆದ್ದರೆ ತಲೆ ಎತ್ತಿ ನಾನು ನರೇಂದ್ರ ಮೋದಿಯವರಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡುವೆ. ತಮಿಳುನಾಡಿನ ಸ್ಟಾಲಿನ್ ನೀರಿನ ವೈರತ್ವದ ಬಗ್ಗೆ ಪ್ರಧಾನಿ ಮೋದಿಗೂ ಅರ್ಥವಾಗಿದೆ.
Politics Apr 16, 2024, 9:32 AM IST
ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ರಾಯಲ್ ಲೇಕ್ ಫ್ರಂಟ್ ನಿವಾಸಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದ್ದು, ಇಟಿಪಿ ಶುಲ್ಕ ಪಾವತಿಸಿಲ್ಲಿ ಮಾತ್ರ ಕಾವೇರಿ ನೀರು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
Karnataka Districts Apr 15, 2024, 7:50 PM IST
ಐತಿಹಾಸಿಕ ರೋಮ್ ನಗರದ ಕರಾಕಲ್ಲಾ ಸಾರ್ವಜನಿಕ ಸ್ನಾನಗೃಹ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹೆಸರು. ಈಗ ಈ ಸ್ನಾನಗೃಹದ ಪ್ರದೇಶದಲ್ಲಿ ಕೃತಕ ಸರೋವರ ನಿರ್ಮಿಸಲಾಗಿದೆ. ಬರೋಬ್ಬರಿ ಸಾವಿರ ವರ್ಷಗಳ ಬಳಿಕ ಇಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎನ್ನುವುದು ವಿಶೇಷ.
Travel Apr 14, 2024, 6:55 PM IST