ಹುಣಸೂರು [ನ.02]: ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ ಎಂದು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಭವಿಷ್ಯ ನುಡಿದರು. ಹುಣಸೂರು ಪಟ್ಟಣದ ಸರಸ್ವತಿಪುರಂ, ಕರೀಗೌಡರ ಬೀದಿ, ಬನ್ನಿಬೀದಿ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರಚಾರ ಕಾರ್ಯ ನಡೆಸಿ ಮತಯಾಚನೆ ನಡೆಸಿದರು.

ಈ ವೇಳೆ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಮತ್ತು ಅವರ ತಂದೆ ಕೂಡ ದೇವರಾಜ ಅರಸರ ರಾಜಕೀಯ ವಿರೋಧಿಗಳು. ಇಂತಹವರು ನನಗೆ ಅರಸರ ಕುರಿತು ಪಾಠ ಹೇಳಲು ಬರುತ್ತಿದ್ದಾರೆ. ತಾಲೂಕಿನ ಜನತೆ ಕಾಂಗ್ರೆಸ್ ಅಭ್ಯರ್ಥಿಯ 10ವರ್ಷಗಳ ದುರಾಡಳಿತವನ್ನು ನೋಡಿ ರೋಸಿದ್ದಾರೆ ಎಂದರು. 

ಉಪ ಸಮರದ ಬಗ್ಗೆ ವಿಸ್ಮಯದ ಭವಿಷ್ಯ: ಇವರು ಹೇಳಿದ್ದು ಸುಳ್ಳಾಗಿದ್ದೇ ಇಲ್ಲ!...

ಹಾಗಾಗಿ ಈ ಬಾರಿಯೂ ನನಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚೆಗೆ ಚೆಕ್‌ಪೋಸ್ಟನಲ್ಲಿ 2 ಕೋಟಿ ರು. ಹಣ ದೊರಕಿರುವ ಬಗ್ಗೆ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ತಮ್ಮ ಮೇಲೆ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಡಿಸಿಸಿ ಬ್ಯಾಂಕಿನ ಹಣವೆಂದು ಬ್ಯಾಂಕಿನ ಅಧಿಕಾರಿಗಳೇ ಒಪ್ಪಿಕೊಂಡಿರುವಾಗ ಜೆಡಿಎಸ್ ಪಕ್ಷದವರು ಈ ರೀತಿಯ ಅರೋಪ ಮಾಡುತ್ತಿದ್ದಾರೆ. ಅವರು ಇಂತಹ ಸುಳ್ಳುಗಳ ನ್ನೇ ಹೇಳಿಯೇ ಕಾಲ ಕಳೆದಿದ್ದಾರೆ ಎಂದರು. 

ಬಿಜೆಪಿಮುಖಂಡ ಸಿ.ಪಿ. ಯೋಗೀಶ್ವರ್ ಸಮ್ಮುಖದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, 9 ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.