ರಾಜ್ಯದಲ್ಲಿ ದೇವಾಲಯಗಳ ತೆರವು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿಲುವಿಗೆ ಬೇಸತ್ತು ರಾಜೀನಾಮೆ  ರಾಜಿನಾಮೆಗೆ ಮುಂದಾದ ಪಕ್ಷದ ವಿವಿಧ ಪದಾಧಿಕಾರಿಗಳು

ಮಂಗಳೂರು (ಸೆ.16): ರಾಜ್ಯದಲ್ಲಿ ದೇವಾಲಯಗಳ ತೆರವು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿಲುವಿಗೆ ಬೇಸತ್ತು ಪಕ್ಷದ ವಿವಿಧ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದಾರೆ. 

ಹಿಂದುತ್ವ ಉಳಿವಿಗಾಗಿ ರಾಜಿನಾಮೆ ಹೆಸರಿನ ಪೋಸ್ಟರ್‌ಗಳು ಬುಧವಾರ ರಾತ್ರಿಯಿಂದ ಜಾಲತಾಣಗಳಲ್ಲಿ ಕಾಣಿಸತೊಡಗಿವೆ. 

ದೇಗುಲ ಧ್ವಂಸ : ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಕಾರಣ

ನನಗೆ ಪಕ್ಷದ ಸ್ಥಾನಮಾನಕ್ಕಿಂತ ಹಿಂದುತ್ವವೇ ಮುಖ್ಯ. ಇದರದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯ ಸರ್ಕಾರದ ದೇವಸ್ಥಾನ ಧ್ವಂಸ ನಡೆಯನ್ನು ಖಂಡಿಸಿ ಭಾಜಪದ ನನ್ನ ಜವಾಬ್ದಾರಿಗೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಸಾಮಾಜಿಕ ಜಾಲತಾಣ ಪ್ರಮುಖ್‌ ವಿಶ್ವ ಕಜೆ ಹೆಸರಿನಲ್ಲಿ ಅವರ ಭಾವಚಿತ್ರ ಸಹಿತದ ಪೋಸ್ಟರ್‌ ಜಾಲತಾಣದಲ್ಲಿ ಹರಿದಾಡುತ್ತಿದೆ.

 ಇದೇ ಹಾದಿ ತುಳಿದಿರುವ ಮಂಗಳೂರು ಉತ್ತರ ಕ್ಷೇತ್ರದ ಕಾರ್ಯಕಾರಿ ಸಮಿತಿ ಸದಸ್ಯ ವಿಕೇಶ್‌ ಕಾವೂರು, ಮಂಗಳೂರು ಕ್ಷೇತ್ರ ಯುವಮೋರ್ಚಾ ಸದಸ್ಯ ಸಂದೀಪ್‌ ಇರಾ ಹೆಸರಿನ ಪೋಸ್ಟ್‌ಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.