Asianet Suvarna News Asianet Suvarna News

ಸಂಸತ್ ಭವನದಲ್ಲಿ ದಾಳಿ: ಹಾಸನದಲ್ಲಿ ಜಮೀನು ಹೊಂದಿರುವ ಮನೋರಂಜನ್‌ ಕುಟುಂಬ

ಮಲ್ಲಾಪುರ ಗ್ರಾಮದಲ್ಲಿ ಮನೋರಂಜನ್‌ ಚಿಕ್ಕಪ್ಪ ಕುಮಾರ್ ಎಂಬುವರು ಮಾತ್ರ ನೆಲೆಸಿದ್ದಾರೆ. ಇವರೊಂದಿಗೆ ದೇವರಾಜೇಗೌಡ ಕುಟುಂಬ ಸಂಪರ್ಕವನ್ನು ಇಟ್ಟು ಕೊಂಡಿಲ್ಲ ಎಂದು ಗ್ರಾಮದವರು ಹೇಳುತ್ತಾರೆ.

Manoranjan Family Owns Land in Hassan grg
Author
First Published Dec 16, 2023, 3:00 AM IST

ಹಾಸನ(ಡಿ.16):  ನೂತನ ಸಂಸತ್ ಭವನದಲ್ಲಿ ಬುಧವಾರ ನಡೆದಿರುವ ದಾಳಿಯಲ್ಲಿ ಹಾಸನ ತಾಲೂಕಿನ ಗಡಿಭಾಗ ಮಲ್ಲಾಪುರ ಗ್ರಾಮದ ದೇವರಾಜೇಗೌಡ ಅಲಿಯಾಸ್ ದೇವರಾಜು ಎಂಬುವರ ಮಗ ಮನೋರಂಜನ್ ಎಂದು ತಿಳಿದು ಬಂದಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಮೈಸೂರಲ್ಲೇ ವಾಸ:

ಗ್ರಾಮದ ಭದ್ರಪ್ಪ ಎಂಬುವರ ಮಗನಾಗಿರುವ ದೇವರಾಜು ಅಲಿಯಾಸ್ ದೇವರಾಜೇಗೌಡ ಹಾಲಿ ಮೈಸೂರಿನಲ್ಲಿ ಇದ್ದಾರೆ. ರಾಗಿಮರೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿ ಮೈಸೂರಿಗೆ ವಲಸೆ ಹೋಗಿ ಕಳೆದ 30 ವರ್ಷಗಳಿಂದಲೂ ಸ್ವಂತ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗಳು ಹಾಗೂ ಸಂಸತ್ ಭವನದಲ್ಲಿ ದುಷ್ಕೃತ್ಯ ನಡೆಸಿರುವ ಮನೋರಂಜನ್ ಒಬ್ಬರಾಗಿದ್ದಾರೆ.

ಸಂಸದ ಪ್ರತಾಪ್ ಸಿಂಹ ಎಡವಿದ್ದೆಲ್ಲಿ..? ಟಾರ್ಗೆಟ್ ಆಗಿದ್ದೇಕೆ..?

ಸ್ವಗ್ರಾಮದಿಂದ ದೂರ:

ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಪೂರ್ವಿಕರಿಂದ ಬಂದಿರುವ ಹಾಗೂ ಇತ್ತೀಚೆಗೆ ಖರೀದಿಸಿರುವ ಭೂಮಿ ಸೇರಿ ಒಟ್ಟು 10 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಮೀನು ಮತ್ತು ಕುರಿ ಸಾಕಾಣಿಕೆ ಮಾಡಿದ್ದು, ಕೂಲಿ ಕಾರ್ಮಿಕರನ್ನು ತೋಟದ ಮನೆಯಲ್ಲಿಟ್ಟು ಕೃಷಿಯನ್ನು ಕೈಗೊಂಡಿದ್ದು, ದೇವರಾಜೇಗೌಡ ವಾರಕ್ಕೆ ಒಮ್ಮೆ ಊರಿಗೆ ಬಂದು ಹೋಗುತ್ತಿದ್ದಾರೆ. ಆದರೆ ಇವರ ಮಗ ಮನೋರಂಜನ್ ನನ್ನು ಗ್ರಾಮದವರು ಕಂಡಿಲ್ಲ ಹಾಗೂ ಈತ ಗ್ರಾಮಕ್ಕೆ ಬಂದುಹೋಗಿಲ್ಲ ಎನ್ನಲಾಗಿದೆ.

ಸಂಸತ್ ಭದ್ರತಾ ವೈಫಲ್ಯ ಪ್ರಕರಣ; ಆರೋಪಿ ಮನೋರಂಜನ್ ಯಾರು, ಹಿನ್ನೆಲೆ ಏನು ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಮಲ್ಲಾಪುರ ಗ್ರಾಮದಲ್ಲಿ ಮನೋರಂಜನ್‌ ಚಿಕ್ಕಪ್ಪ ಕುಮಾರ್ ಎಂಬುವರು ಮಾತ್ರ ನೆಲೆಸಿದ್ದಾರೆ. ಇವರೊಂದಿಗೆ ದೇವರಾಜೇಗೌಡ ಕುಟುಂಬ ಸಂಪರ್ಕವನ್ನು ಇಟ್ಟು ಕೊಂಡಿಲ್ಲ ಎಂದು ಗ್ರಾಮದವರು ಹೇಳುತ್ತಾರೆ.

ರಾಜಕಾರಣಿಗಳ ಸಂಪರ್ಕ

ದೇವರಾಜೇಗೌಡ ಮೈಸೂರು ವಿಕ್ರಾಂತ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದು, 2000ನೇ ಇಸವಿಯಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದು ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಕೊಡಗು ಜಿಲ್ಲೆ ಸಿದ್ದಾಪುರದಲ್ಲಿ ಹೋಂ ಸ್ಟೇ ನಡೆಸುತ್ತಿದ್ದಾರೆ. ಅಲ್ಲದೆ ರಾಜಕಾರಣಿಗಳ ಸಂಪರ್ಕವನ್ನು ಸಹ ಇಟ್ಟುಕೊಂಡಿದ್ದಾರೆ. ಸಂಸತ್‌ನಲ್ಲಿ ದುಷ್ಕೃತ್ಯ ನಡೆಸಿರುವ, ಮನೋರಂಜನ್‌ ಬಿಇ ಪದವೀಧರ ಎಂದು ಗೊತ್ತಾಗಿದೆ.

Follow Us:
Download App:
  • android
  • ios