ಮಂಡ್ಯ(ಫೆ.06): ಜಿಲ್ಲಾ ಹಾಲು ಒಕ್ಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈತರು ಸರಬರಾಜು ಮಾಡುವ ಪ್ರತಿ ಲೀಟರ್‌ ಹಾಲಿಗೆ .30 ದರ ನಿಗದಿಪಡಿಸಿ ದಾಖಲೆ ಬರೆದಿದೆ. ಅಲ್ಲದೆ, ಪಶು ಆಹಾರದ ಬೆಲೆಯನ್ನು 15 ಇಳಿಸುವ ಮೂಲಕ ರೈತಸ್ನೇಹಿಯಾಗಿದೆ. ಒಕ್ಕೂಟದ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ.

ಮನ್‌ಮುಲ್‌ ಇತಿಹಾಸದಲ್ಲೇ ಪ್ರಥಮ:

ಕಳೆದ ಐದು ತಿಂಗಳ ಅವಧಿಯಲ್ಲಿ ಮೂರು ಬಾರಿ ಹಾಲಿನ ಖರೀದಿ ದರ ಏರಿಕೆ ಮಾಡಿದೆ. .22.50 ಇದ್ದ ದರವನ್ನು .30 ವರೆಗೆ ಹೆಚ್ಚಳ ಮಾಡಿದೆ. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ .7.50 ದರ ಹೆಚ್ಚಳ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅ.11ರಲ್ಲಿ ಪ್ರತಿ ಲೀಟರ್‌ ಹಾಲಿನ ಖರೀದಿ ದರವನ್ನು .22.50 ನಿಂದ .25, ಜ.1ರಿಂದ .25 ನಿಂದ .28.50, ಫೆ.11ರಿಂದ .28.50 ನಿಂದ .30ಗೆ ದರ ಏರಿಕೆ ಮಾಡಿ ತೀರ್ಮಾನ ಕೈಗೊಂಡಿದೆ. ಮನ್ಮುಲ್‌ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಂಘಕ್ಕೆ ಪ್ರತಿ ಲೀಟರ್‌ ಹಾಲಿನ ಖರೀದಿ ದರ .30.90 ಹಾಗೂ ರೈತರಿಗೆ ಪ್ರತಿ ಲೀಟರ್‌ಗೆ .30 ದೊರಕುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

ನಿತ್ಯ 7 ಲಕ್ಷ ಲೀಟರ್‌ ಹಾಲು:

ಸಂಘದಿಂದ ಉತ್ಪಾದಕರಿಗೆ ಶೇ.3.5ರಷ್ಟಿರುವ ಜಿಡ್ಡೇತರ ಘನಾಂಶದ ಶೇ.8.50 ಅಂಶವುಳ್ಳ ಪ್ರತಿ ಲೀಟರ್‌ ಹಾಲಿನ ದರ .25.80 ನಿಂದ ಇತ್ತು. ನಂತರದಲ್ಲಿ ಅದನ್ನು .29.40 ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶೇ.3.5ರಷ್ಟಿರುವ ಜಿಡ್ಡಿನಾಂಶದ ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು .25 ನಿಂದ .28.50 ಗೆ ಹೆಚ್ಚಿಸಲಾಗಿದೆ. ಒಕ್ಕೂಟದಿಂದ ಸಂಘಗಳಿಗೆ ನಿರ್ವಹಣಾ ವೆಚ್ಚ ಹಿಂದೆ 75 ಪೈಸೆ ಇದ್ದು, ಈಗ ಅದನ್ನು 85 ಪೈಸೆಗೆ ಹೆಚ್ಚಳ ಮಾಡಿದೆ.

ಚಳಿಗಾಲದ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ 9.45 ಲಕ್ಷ ಲೀಟರ್‌ ಹಾಲು ಸರಬರಾಜಾಗುತ್ತಿತ್ತು. ಈಗ ಅದು 7 ಲಕ್ಷ ಲೀಟರ್‌ಗೆ ಇಳಿಮುಖವಾಗಿದೆ. ಇದರಲ್ಲಿ 4 ಲಕ್ಷ ಲೀಟರ್‌ ಹಾಲನ್ನು ಮಾರುಕಟ್ಟೆಗೆ ಪೂರೈಸಲಾಗುತ್ತಿದೆ.

ಆಡಳಿತ ಮಂಡಳಿ ಪ್ರಮುಖ ನಿರ್ಧಾರ

  • ಪ್ರತಿ ಲೀಟರ್‌ ಹಾಲಿನ ಖರೀದಿ ದರವನ್ನು .1.50 ಹೆಚ್ಚಳ
  • ಪ್ರತಿ 50 ಕೆಜಿ ಪಶು ಆಹಾರದ ಬೆಲೆಯಲ್ಲಿ .50 ಗೆ ಇಳಿಸುವ ತೀರ್ಮಾನ
  • ಈ ಹಿಂದೆ .28.50 ಇದ್ದ ಪ್ರತಿ ಲೀಟರ್‌ ಹಾಲಿನ ದರ ಈಗ .30 ನಂತೆ ಖರೀದಿ
  • ಪ್ರತಿ 50 ಕೆಜಿ ಪಶು ಆಹಾರದ ಬೆಲೆ .1065 ನಿಂದ .1015 ಗೆ ಇಳಿಕೆ
  • ಹೊಸ ಹಾಲಿನ ದರ ಫೆ.11ರಿಂದ ಅಧಿಕೃತವಾಗಿ ಜಾರಿಗೆ

ಚುನಾವಣಾ ಕಣದಲ್ಲಿದ್ದ JDS ಅಭ್ಯರ್ಥಿ ಬಿಜೆಪಿಗೆ

ರೈತರ ಹಿತದೃಷ್ಟಿಯಿಂದ ಹಾಲಿನ ಖರೀದಿ ದರವನ್ನು ಏರಿಕೆ ಮಾಡಲಾಗಿದೆ. ರೈತರೂ ಸಹ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಒಕ್ಕೂಟಕ್ಕೆ ಕಳಪೆ ಮಟ್ಟದ ಹಾಲು ಸರಬರಾಜು ಮಾಡುವ ಕುರಿತು ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕಳಪೆ ಮಟ್ಟಪತ್ತೆಹಚ್ಚಲು ಎರಡು ತಂಡ ರಚನೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವಂತೆ ಪಶು ಆಹಾರಕ್ಕೆ ಕೊರತೆ ಎದುರಾಗದಂತೆ ಕೆಎಂಎಫ್‌ನಿಂದ ಹೆಚ್ಚುವರಿಯಾಗಿ 500 ಮೆಟ್ರಿಕ್‌ ಟನ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಗೆಜ್ಜಲಗೆರೆ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಹೇಳಿದ್ದಾರೆ.