ಬೆಂಗಳೂರು(ನ.02): ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಸ್ಥಳೀಯರಿಗೆ ಉಚಿತವಾಗಿ ಸೆಟ್‌ಟಾಪ್‌ ಬಾಕ್ಸ್‌ಗಳನ್ನು ವಿತರಣೆ ಮಾಡಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿವಿ ಆನ್‌ ಮಾಡಿದ ತಕ್ಷಣ ಬಿಜೆಪಿ ಅಭ್ಯರ್ಥಿಯ ಫೋಟೋ ಬರುವಂತೆ ಈ ಸೆಟ್‌ ಟಾಪ್‌ ಬಾಕ್ಸ್‌ ರೂಪಿಸಲಾಗಿದೆ. ಅದನ್ನು ಮುಂದಿನ 48 ಗಂಟೆ ನಿಲ್ಲಿಸುವುದಕ್ಕೆ ಸಂಬಂಧಪಟ್ಟ ನಟ್‌ವರ್ಕ್ಸ್‌ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

"

RR ನಗರ ಉಪಚುನಾವಣೆ: ಮುನಿರತ್ನ ವಿರುದ್ಧ ಕಾಂಗ್ರೆಸ್‌ ದೂರು

ಇನ್ನು ಚುನಾವಣೆಗೆ ಅಧಿಸೂಚನೆಗೂ ಮುನ್ನ ಸೆಟ್‌ಟಾಪ್‌ ಬಾಕ್ಸ್‌ ವಿತರಣೆ ಬಗ್ಗೆ ಆಯೋಗದ ಸ್ಪಷ್ಟನೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.