ಮಂಗಳೂರು(ಮೇ 28): ಮಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ನಮ್‌ರ್‍ ಬಸ್‌ಗಳು ಓಡಾಟ ಆರಂಭಿಸಿದೆ. ಈಗ ಖಾಸಗಿ ಬಸ್‌ಗಳು ಕೂಡ ಸಂಚಾರಕ್ಕೆ ಸಿದ್ಧತೆ ನಡೆಸಿವೆ. ಜೂನ್‌ 1ರಿಂದ ಬಹುತೇಕ ಸಿಟಿ ಬಸ್‌ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿವೆ. ರಾಜ್ಯ ಸರ್ಕಾರ ಸೂಚಿಸಿದ ಮಾರ್ಗಸೂಚಿ ಪ್ರಕಾರ ಜೂನ್‌ 1ರಿಂದ ಖಾಸಗಿ ಬಸ್‌ ಸಂಚಾರ ನಡೆಸಲು ದ.ಕ. ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘ ನಿರ್ಧರಿಸಿದೆ.

ಬಸ್‌ ಓಡಾಟದ ನಿಟ್ಟಿನಲ್ಲಿ ಬುಧವಾರ ಜಿಲ್ಲಾ​ಧಿಕಾರಿ ಕಚೇರಿಯಲ್ಲಿ ಜಿಲ್ಲಾ​ಧಿಕಾರಿ ಸಿಂಧೂ ರೂಪೇಶ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್‌, ದ.ಕ. ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಕೆನರಾ ಬಸ್‌ ಮಾಲೀಕರ ಸಂಘದ ಕೋಶಾ​ಕಾರಿ ಜ್ಯೋತಿ ಪ್ರಕಾಶ್‌ ಹೆಗ್ಡೆ, ಮಾಧವ ನಾಯಕ್‌, ಸುದೇಶ್‌ ಮರೋಳಿ ಪಾಲ್ಗೊಂಡಿದ್ದರು.

ಎರಡು ಎಲೆಕ್ಷನ್: ಹೊಸ ರಾಜಕೀಯ ದಾಳ ಉರುಳಿಸಿದ ದೇವೇಗೌಡ್ರು..!

ಪ್ರತಿ ದಿನ ಬಸ್‌ ಸಂಚಾರ ಆರಂಭಿಸುವ ಮುನ್ನ ಇಡೀ ಬಸ್‌ನ್ನು ಸ್ಯಾನಿಟೈಸ್‌ ಮಾಡುವುದು, ಪ್ರಯಾಣಿಕರು ಮಾಸ್ಕ್‌ ಕಡ್ಡಾಯವಾಗಿ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಬಸ್‌ನಲ್ಲಿ ಸ್ಯಾನಿಟೈಸರ್‌ ಬಳಕೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ನಗರದಲ್ಲಿ ರಸ್ತೆಗಿಳಿದ ನಮ್‌ರ್‍ ಬಸ್‌: ಮಂಗಳೂರು ನಗರದಲ್ಲಿ ನಮ್‌ರ್‍ ಬಸ್‌ಗಳ ಓಡಾಟ ಮಂಗಳವಾರದಿಂದ ಆರಂಭಗೊಂಡಿದೆ. ನಗರ ವ್ಯಾಪ್ತಿಯಲ್ಲಿ 7 ಬಸ್‌ಗಳು ಸಂಚಾರ ಆರಂಭಿಸಿದ್ದು, ಬುಧವಾರ ಕೂಡ ಈ ಬಸ್‌ಗಳ ಓಡಾಟ ನಗರದಲ್ಲಿ ಕಂಡುಬಂತು. ನಗರದ ಸ್ಟೇಟ್‌ ಬ್ಯಾಂಕ್‌ನಿಂದ ವಾಮಂಜೂರು, ಸುರತ್ಕಲ್‌, ಬಜಪೆ, ಮುಡಿಪು ಮುಂತಾದ ಕಡೆಗಳಿಗೆ 7 ಬಸ್‌ಗಳು ಸಂಚಾರ ನಡೆಸುತ್ತಿವೆ.