Asianet Suvarna News Asianet Suvarna News

ಮಂಗಳೂರಿನ ಕದ್ರಿ ಪಾರ್ಕ್ ನೈತಿಕ ಪೊಲೀಸ್ ಗಿರಿ ಕೇಸ್‌ಗೆ ಸಿಕ್ತು ಭರ್ಜರಿ ಟ್ವಿಸ್ಟ್!

ಮಂಗಳೂರು ನಗರದ ಕದ್ರಿ ಪಾರ್ಕ್‌ನ ಬಳಿ ನರ್ಸಿಂಗ್ ವಿದ್ಯಾರ್ಥಿಗಳ ಜೋಡಿಯ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ.

Mangaluru Kadri park moral policing case was got twist sat
Author
First Published Jan 19, 2024, 9:10 PM IST

ಮಂಗಳೂರು (ಜ.19): ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಕದ್ರಿ ಪಾರ್ಕ್‌ನ ಬಳಿ ನರ್ಸಿಂಗ್ ವಿದ್ಯಾರ್ಥಿಗಳ ಜೋಡಿಯ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ.. ಹಿಂದೂ ಧರ್ಮದ ಮೂವರು ಪುಂಡರು ನರ್ಸಿಂಗ್ ವಿದ್ಯಾರ್ಥಿಗಳ ಜೋಡಿಗೆ ಕಿರುಕುಳ ನೀಡಿದೆ. ಆದರೆ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೂರುದಾರರನ್ನು ವಿಚಾರಿಸಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ರಾಜ್ಯಾದ್ಯಂತ ಲವ್‌ಜಿಹಾದ್ ಮುನ್ನೆಲೆಗೆ ಬಂದ ನಂತರ ನೈತಿಕ ಪೊಲೀಸ್‌ಗಿರಿ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅದರಲ್ಲಿಯೂ ಕರಾವಳಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಹೆಚ್ಚೇ ಆಗಿದೆ. ಮಂಗಳೂರು ನಗರದ ಕದ್ರಿ ಉದ್ಯಾನವನಕ್ಕೆ ಆಗಮಿಸಿದ ನರ್ಸಿಂಗ್‌ ವಿದ್ಯಾರ್ಥಿಗಳ ಜೋಡಿಯನ್ನು ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ನೀವು ಯಾರು? ಯಾವ ಕೋಮಿನವರು? ನಿಮ್ಮ ಹೆಸರೇನು? ನಿಮ್ಮ ಐಡಿ ಕಾರ್ಡ್‌ಗಳನ್ನು ತೋರಿಸಿ ಎಂದು ಕೇಳಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ ಅಜ್ಜಿ ಶವ ಕೊಂಡೊಯ್ಯುತ್ತಿದ್ದ ಕಾರು ಪಲ್ಟಿ: ಮೂವರು ಮೊಮ್ಮಕ್ಕಳ ಸಾವು

ಆದರೆ, ಇದ್ಯಾವ ವಿವರವನ್ನೂ ಕೊಡದ ವಿದ್ಯಾರ್ಥಿಗಳು  ನರ್ಸಿಂಗ್‌ ವಿದ್ಯಾರ್ಥಿಗಳ ಜೋಡಿಗಳಿಬ್ಬರೂ ಒಂದೇ ಕೋಮಿನವರು ಎಂಬುದೇ ಪ್ರಕರಣದ ಟ್ವಿಸ್ಟ್‌ ಆಗಿದೆ. ಆದರೆ, ಅವರನ್ನು ಹಿಂಬಾಲಿಸಿಕೊಂಡು ಬಂದ ಯುವಕರು ಈ ಜೋಡಿ ಬೇರೆ ಬೇರೆ ಧರ್ಮದವರೆಂದು ತಿಳಿದು ತಮ್ಮ ಐಡಿ ಕಾರ್ಡ್‌ ತೋರಿಸುವಂತೆ ಕೇಳಿ ಹಲ್ಲೆಗೆ ಮುಂದಾಗಿದ್ದರು. ಅನ್ಯಧರ್ಮೀಯ ಜೋಡಿ ಎಂದು ತಪ್ಪಾಗಿ ತಿಳಿದು ಹಲ್ಲೆ ಯತ್ನಿಸಿದ್ದಾರೆ. ಆದ್ದರಿಂದ ಮೂವರು ಆರೋಪಿಗಳನ್ನು ಬಂಧಿಸಿದ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿತಿನ್(18), ಹರ್ಷ(18) ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. 

ಕರ್ನಾಟಕ- ಅಯೋಧ್ಯೆ ಪಾದಯಾತ್ರೆ: ರಾಮ ಮಂದಿರಕ್ಕೆ 1,800 ಕಿ.ಮೀ. ನಡೆದುಕೊಂಡು ಹೋದ ಗದಗಿನ ಗಾಂಧಿ

ದೇರಳಕಟ್ಟೆಯ ಯೇನಪೋಯಾ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ನಂತೂರಿನ ಜಿಎನ್ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾದ ಗೆಳೆಯನ ಜೊತೆ ಕದ್ರಿ ಪಾರ್ಕ್ ಗೆ ಬಂದಿದ್ದಳು. ಇವರಿಬ್ಬರನ್ನು ಹಿಂಬಾಲಿಸಿಕೊಂಡು ಮೂವರು ಯುವಕರು ಬಂದಿದ್ದರು. ಅನ್ಯಕೋಮಿನ ಜೋಡಿ ಎಂದು ತಿಳಿದು ಕದ್ರಿ ಪಾರ್ಕ್ ನಲ್ಲಿ ತಡೆದು ಪ್ರಶ್ನೆ ಮಾಡಿದ್ದಾರೆ. ಐಡಿ ಕಾರ್ಡ್ ತೋರಿಸುವಂತೆ ಬೈದು ಹಲ್ಲೆಗೆ ಯತ್ನ ಮಾಡಿದ್ದಾರೆ. ಬಳಿಕ ಇಬ್ಬರ ಫೋಟೋ, ವಿಡಿಯೋ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಮೂವರು ಯುವಕರ ವಶಕ್ಕೆ ಪಡೆದಿದ್ದರು. ಯುವಕ ನೀಡಿದ ದೂರಿನಡಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

Follow Us:
Download App:
  • android
  • ios