ಮಂಗಳೂರು ಪಾಲಿಕೆ: ಗೃಹ ಬಳಕೆ ನೀರಿನ ದರ ಇಳಿಕೆ ಆದೇಶ

ಮಂಗಳೂರಲ್ಲಿ 20 ಸಾವಿರ ಲೀಟರ್‌ ಗೃಹ ಬಳಕೆ ನೀರಿಗೆ ಕೇವಲ 100 ರು. ದರ, ಶಾಸಕ ವೇದವ್ಯಾಸ ಕಾಮತ್‌ ಪ್ರಯತ್ನ 

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊನೆಗೂ ಬಹುಬೇಡಿಕೆಯ ಗೃಹ ಬಳಕೆ ನೀರಿನ ದರ ಇಳಿಕೆ ಮಾಡಲಾಗಿದೆ.

Mangaluru Corporation Order to reduce the price of water for domestic use rav

ಮಂಗಳೂರು (ಜು.19) ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊನೆಗೂ ಬಹುಬೇಡಿಕೆಯ ಗೃಹ ಬಳಕೆ ನೀರಿನ ದರ ಇಳಿಕೆ ಮಾಡಲಾಗಿದೆ. ಇದರಿಂದಾಗಿ 20 ಸಾವಿರ ಲೀಟರ್‌ ವರೆಗೆ ನೀರು ಬಳಸುವವರು ಕೇವಲ 100 ರು. ದರ ಮಾತ್ರ ಪಾವತಿಸಿದರೆ ಸಾಕು. ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಸೀಮಿತಗೊಳಿಸಿ ಗೃಹ ಬಳಕೆ ನೀರಿನ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಈ ಇಳಿಕೆಯಾದ ದರ ಆಗಸ್ಟ್‌ 1ರಿಂದ ಮುಂದಿನ ಒಂದು ವರ್ಷದ ಅವಧಿಗೆ ಚಾಲ್ತಿಯಲ್ಲಿ ಇರುತ್ತದೆ.ಮಂ

ಅದರಂತೆ ಈಗ 20 ಸಾವಿರ ಲೀಟರ್‌ಗೆ 140 ರು. ದರ ಇದ್ದುದನ್ನು 100 ರು.ಗೆ ಇಳಿಕೆ ಮಾಡಲಾಗಿದೆ. ಗೃಹ ಬಳಕೆಯ ನೀರಿನ ದರ ಇಳಿಕೆ ಮಾಡಿದರೆ ಬಡವರಿಗೆ ಅನುಕೂಲವಾಗಲಿದೆ. 70 ಸಾವಿರ ಲೀಟರ್‌ಗಿಂತ ಹೆಚ್ಚಿನ ನೀರಿನ ಉಪಯೋಗಕ್ಕೆ ದರ ಪರಿಷ್ಕರಣೆ ಮಾಡಿದರೆ ಪಾಲಿಕೆಗೆ ಆದಾಯ ಬರಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌(MLA Vedavyasa Kamat) ಅವರು ನಗರಾಭಿವೃದ್ಧಿ ಇಲಾಖೆ(Urban Development Department) ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು ದರ ಪರಿಷ್ಕರಣೆಗೊಳಿಸಿ ಜು.18ರಂದು ಆದೇಶ(order) ಹೊರಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಬೆಂಬಲಿಸಿದರಷ್ಟೇ MINISTER S ANGARA ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ: ಆಡಿಯೋ ವೈರಲ್!

2019ರಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ 20 ಸಾವಿರ ಲೀಟರ್‌ ನೀರಿನ ದರ 174 ರು.ಗೆ ಇತ್ತು. ಇದನ್ನು ಪಾಲಿಕೆ ಆಡಳಿತ 2020ರಲ್ಲಿ 140 ರು.ಗೆ ಇಳಿಕೆ ಮಾಡಿತ್ತು. ಆದ್ದರಿಂದ ಮತ್ತೆ ಇಳಿಕೆ ಮಾಡಲು ಸರ್ಕಾರ ಸಮ್ಮತಿಸಿರಲಿಲ್ಲ. ಮತ್ತೆ ದರ ಇಳಿಕೆ ಮಾಡಿದರೆ ಪಾಲಿಕೆಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತದೆ ಎಂದು ಫೆ.8ರಂದು ಸರ್ಕಾರದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯಪಡಲಾಗಿತ್ತು. ಮತ್ತೆ ಪಾಲಿಕೆಯಿಂದ ದರ ಇಳಿಕೆಗೆ ಪ್ರಸ್ತಾವನೆ ಬಂದ ಕಾರಣ ಯಾವುದೇ ಆದಾಯ ನಷ್ಟವಾಗದಂತೆ ಪುನರ್‌ ಪ್ರಸ್ತಾವನೆ ಕಳುಹಿಸುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಮತ್ತಷ್ಟುದರ ಇಳಿಕೆ ಮಾಡುವಂತೆ ಮೇ 31ರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿತ್ತು.

ಪಾಲಿಕೆ ಆಯುಕ್ತರು ಕಳುಹಿಸಿದ ಪ್ರಸ್ತಾವನೆ ಮೇಲೆ ಶಾಸಕ ವೇದವ್ಯಾಸ ಕಾಮತ್‌ ಅವರು ನಗರಾಭಿವೃದ್ಧಿ ಇಲಾಖಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆದೇಶ ಹೊರಡಿಸುವಲ್ಲಿ ಸಫಲರಾದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಕಡಿಮೆಗೊಳಿಸುವ ಕುರಿತು ನಾವು ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅತೀ ಅಗತ್ಯತೆಯ ಕುಡಿಯುವ ನೀರಿನ ದರ ಪರಿಷ್ಕರಣೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿ ಬೆಲೆ ಕಡಿಮೆಗೊಳಿಸಿ ಆದೇಶಿಸುವಂತೆ ಕೋರಲಾಗಿತ್ತು. ಅದರಂತೆ ಈಗ ಅಧಿಕೃತ ಆದೇಶ ಬಂದಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.

-ವೇದವ್ಯಾಸ ಕಾಮತ್‌, ಶಾಸಕ, ಮಂಗಳೂರು ದಕ್ಷಿಣ

ಇದನ್ನೂ ಓದಿ: Monsoon Update: ಕರಾವಳಿಯಲ್ಲಿ ಇಂದು ಯಲ್ಲೋ ಅಲರ್ಟ್

ಮಂಗಳೂರು ನಾಗರಿಕರ ಮನವಿಯಂತೆ ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್‌ ಸಭೆಯಲ್ಲಿ ಅನುಮೋದನೆಗೊಂಡು ರಾಜ್ಯ ಸರ್ಕಾರÜಕ್ಕೆ ಕಳುಹಿಸಿದ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿಯ ಗೃಹ ಬಳಕೆಯ ಕುಡಿಯುವ ನೀರಿನ ದರವನ್ನು ಇಳಿಸಿ ಆದೇಶ ಹೊರಡಿಸಿದೆ.

ಇದಕ್ಕಾಗಿ ಪಾಲಿಕೆ ವ್ಯಾಪ್ತಿಯ ಸಮಸ್ತ ನಾಗರಿಕರ ಪರವಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ಗೆ ಧನ್ಯವಾದ.

-ಡಾ.ಭರತ್‌ ಶೆಟ್ಟಿ, ಶಾಸಕ, ಮಂಗಳೂರು ಉತ್ತರ

 

Latest Videos
Follow Us:
Download App:
  • android
  • ios