ಉಳ್ಳಾಲ(ಮೇ 25): ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೊಕ್ಕೊಟ್ಟು, ಉಳ್ಳಾಲ ಬಳಿ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಬಂದೂಕು ಹಿಡಿದು ತಡೆದು ಎಚ್ಚರಿಕೆ ನೀಡಿ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.

ಇಷ್ಟುದಿನ ಪೊಲೀಸರು ಕೈಯ್ಯಲ್ಲಿ ಲಾಠಿ ಹಿಡಿದು ಲಾಕ್‌ಡೌನ್‌ ನಿಯಮ ಪಾಲನೆಯ ಪಾಠ ಮಾಡಿದ್ದರು. ಆದರೆ ಈ ಬಾರಿ ಸೂಕ್ಷ್ಮ ಪ್ರದೇಶವಾಗಿರುವ ಉಳ್ಳಾಲದಲ್ಲಿ ಬಂದೋಬಸ್ತ್ ನಿರತರಾಗಿದ್ದ ಪೊಲೀಸರ ಕೈಗೆ ಬಂದೂಕು ನೀಡಲಾಗಿತ್ತು.

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಹಬ್ಬದ ನೆಪದಲ್ಲಿ ಮತ್ತು ವಸ್ತುಗಳ ಖರೀದಿ ಹೆಸರಲ್ಲಿ ಬೈಕ್‌ ಗಳಲ್ಲಿ ಸುತ್ತಾಡುತ್ತಿರುವವರನ್ನು, ಪಾಸ್‌ ಇಲ್ಲದೆ ಅನಗತ್ಯ ಓಡಾಡುತ್ತಿರುವರನ್ನು ತಡೆದು ಪೊಲೀಸರು ಎಚ್ಚರಿಕೆ ನೀಡಿದರು. ಲಾಠಿ ಹಿಡಿದಿದ್ದ ಪೊಲೀಸರ ಕೈಯ್ಯಲ್ಲಿ ಬಂದೂಕು ಇದ್ದಿದ್ದನ್ನು ನೋಡಿ ಕೆಲವರು ಅರ್ಧ ದಾರಿಯಲ್ಲೇ ಬೈಕ್‌ ತಿರುಗಿಸಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೇರಳ-ಕರ್ನಾಟಕ ಗಡಿ ಭಾಗವೂ ಸ್ತಬ್ಧ!

ಕೇರಳ ಗಡಿಭಾಗವಾದ ತಲಪಾಡಿಯಲ್ಲಿ ಭಾನುವಾರದ ಲಾಕ್‌ಡೌನ್‌ ಹಿನ್ನಲೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಾರ್ವಜನಿಕರ ಸಂಚಾರ, ವಾಹನ ಸಂಚಾರವೂ ಕೂಡ ಸ್ತಬ್ಥವಾಗಿತ್ತು. ವಾಹನ ಸಂಚಾರವಿಲ್ಲದೇ ತಲಪಾಡಿ ಟೋಲ್‌ಗೇಟ್‌ನಲ್ಲೂ ಕೇರಳ ಮತ್ತು ಕರ್ನಾಟಕ ಮಧ್ಯೆ ಗೂಡ್ಸ್‌ ಲಾರಿಗಳ ಸಂಚಾರ ಹೊರತು ಯಾವುದೇ ವಾಹನ ಸಂಚಾರವಿರಲಿಲ್ಲ.

ಬಿಲ್ಡಿಂಗ್‌ನಿಂದ ಹಾರಿ ಟೆಕ್ಕಿ ಉತ್ತಮ್ ಹೆಗಡೆ  ಆತ್ಮಹತ್ಯೆ, ಕಾರಣ ನಿಗೂಢ

ಕಳೆಗುಂದಿದ ಈದುಲ್‌ ಫಿತ್‌್ರ: ಉಳ್ಳಾಲದ ಇತಿಹಾಸ ಪ್ರಸಿದ್ದ ಸೈಯ್ಯದ್‌ ಮದನಿ ದರ್ಗಾದಲ್ಲಿ ಕಫä್ರ್ಯ ಹಿನ್ನೆಲೆಯಲ್ಲಿ ಈದ್‌ ಉಲ್‌ ಫಿತ್‌್ರ ಹಬ್ಬ ಕಳೆಗುಂದಿತ್ತು. ಪ್ರತಿವರ್ಷ ಹಬ್ಬದ ಸಂದರ್ಭ ನೂರಾರು ಸಂಖ್ಯೆಯಲ್ಲಿ ಜಿಲ್ಲೆ, ಹೊರಜಿಲ್ಲೆಗಳಿಂದ ಜನ ದರ್ಗಾ ಸಂದರ್ಶನಗೈದು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದಿನ ದಿನ ಇತಿಹಾಸದಲ್ಲಿಯೇ ಪ್ರಥಮ ಬಾರಿ, ಜನರೇ ಇಲ್ಲದೆ ದರ್ಗಾ ಆವರಣ ಬಿಕೋ ಅನ್ನುತಿತ್ತು. ದರ್ಗಾ ಮುಖ್ಯ ದ್ವಾರದಲ್ಲಿ ಬ್ಯಾರಿಕೇಡ್‌ ಅಳವಡಿಸಿ ಜನ ಬಾರದಂತೆ ತಡೆಹಿಡಿಯಲಾಗಿತ್ತು. ಜನರೂ ಇದಕ್ಕೆ ಸ್ಪಂದಿಸಿ ದರ್ಗಾ ಸಂದರ್ಶನ ನಡೆಸದೆ ದರ್ಗಾ ಆಡಳಿತದೊಂದಿಗೆ ಸಹಕರಿಸಿದರು.