Asianet Suvarna News Asianet Suvarna News

ಸೇವೆಯ ಕೊರತೆ: ಮಂಗಳೂರು-ಮಡಗಾಂವ್‌ ರೈಲು ತಡೆದು ಪ್ರತಿಭಟನೆ

ಮಂಗಳೂರು-ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಕೊಂಕಣ ರೈಲ್ವೇ ಮೆಮು ಎಕ್ಸ್‌ಪ್ರೆಸ್ ರೈಲನ್ನಾಗಿ ಮೇಲ್ದರ್ಜೆಗೇರಿಸಿತ್ತು. ಆದರೆ, ಇದರಿಂದ ಜಿಲ್ಲೆಯ ಜನರು ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಜನರು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. 

Mangalore Madgaon train blocked and protested Over Lack of service gvd
Author
First Published Jan 17, 2023, 12:30 AM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಅಂಕೋಲಾ (ಜ.17): ಮಂಗಳೂರು-ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಕೊಂಕಣ ರೈಲ್ವೇ ಮೆಮು ಎಕ್ಸ್‌ಪ್ರೆಸ್ ರೈಲನ್ನಾಗಿ ಮೇಲ್ದರ್ಜೆಗೇರಿಸಿತ್ತು. ಆದರೆ, ಇದರಿಂದ ಜಿಲ್ಲೆಯ ಜನರು ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಜನರು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಹೌದು! ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಕಾರಣದಿಂದ ಮಂಗಳೂರು-ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲು ಸಂಚಾರವನ್ನು ಪ್ರಯಾಣಿಕರಿಲ್ಲವೆಂದು ಸ್ಥಗಿತಗೊಳಿಸಲಾಗಿತ್ತು. 

ಸದ್ಯ ಸಾರ್ವಜನಿಕರ ಒತ್ತಾಯದ ಮೇರೆಗೆ ಡೆಮು ಬದಲು ಎಲೆಕ್ಟ್ರಿಕ್ ಎಂಜಿನ್‌ನ ಮೆಮು ರೈಲಿನ ಸಂಚಾರವನ್ನು ಜ.5ರಿಂದ ಸಂಚಾರ ಆರಂಭಿಸಲಾಗಿದೆ. ಆದರೆ, ಈ ಮೆಮು ರೈಲನ್ನು ತಡೆರಹಿತ ರೈಲನ್ನಾಗಿ ಮಾಡಲಾಗಿದ್ದು, ಮೊದಲು ಡೆಮು ರೈಲು ನಿಲುಗಡೆಯಾಗುತ್ತಿದ್ದ ಹಾರವಾಡ, ಮಿರ್ಜಾನ್, ಚಿತ್ರಾಪುರ ನಿಲ್ದಾಣಗಳಲ್ಲಿ ಮೆಮುಗೆ ನಿಲುಗಡೆ ರದ್ದುಪಡಿಸಲಾಗಿದೆ. ಅಲ್ಲದೇ, ಟಿಕೆಟ್ ಕೂಡಾ ದುಬಾರಿಯಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದರಿಂದ ಪರಿಹಾರಕ್ಕಾಗಿ ಕೊಂಕಣ ರೈಲ್ವೇಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆಕ್ರೋಶಗೊಂಡಿದ್ದ ಜನರು ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. 

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮ್ಯಾಜಿಕ್ ನಡೆಯಲ್ಲ: ಸತೀಶ್ ಜಾರಕಿಹೊಳಿ

ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಸುಕ್ರಿ ಗೌಡ, ವೃಕ್ಷಮಾತೆ ತುಳಸಿ ಗೌಡ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಕೂಡಾ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮೂಲಕ ಒತ್ತಾಯಿಸಿದರು. ಪ್ರತಿಭಟನೆಯ ಹಿನ್ನೆಲೆ ರೈಲ್ವೇ ರಕ್ಷಣಾ ದಳದ ಸಿಬ್ಬಂದಿ ಹಾಗೂ ಅಂಕೋಲಾ ಠಾಣೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇನ್ನು ಪ್ರತಿಭಟನೆ ವೇಳೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ್ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ರೈಲ್ವೇ ಹಳಿಯ ಮೇಲೆ ಮಲಗಿ ರೈಲು ಸಂಚಾರಕ್ಕೆ ತಡೆಯುಂಟು ಮಾಡಲು ಯತ್ನಿಸಿದರು. ಆದರೆ, ರಾಜ್ಯ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಅವರನ್ನು ತಡೆದರು.‌ 

ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

ಪ್ರತಿಭಟನಾಕಾರರು ರೈಲು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದರಿಂದ ಸ್ಥಳಕ್ಕಾಗಮಿಸಿದ ಕೊಂಕಣ ರೈಲ್ವೇ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕ್ಕಂ, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದ್ದಲ್ಲದೇ, ಅವರ ಮನವಿ ಸ್ವೀಕರಿಸಿದರು. ಅಲ್ಲದೇ,10 ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು‌. ಅಧಿಕಾರಿಗಳ ಭರವಸೆ ಬಳಿಕ ಪ್ರತಿಭಟನಾರರು ತಮ್ಮ ಪ್ರತಿಭಟನೆ ಹಿಂಪಡೆದು ರೈಲು ಸಾಗಲು ಅವಕಾಶ ಮಾಡಿಕೊಟ್ಟರು. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂಲಕವೇ ಸಾಗುವ ಕೊಂಕಣ ರೈಲ್ವೇಯ ಮೆಮು ರೈಲು ಪ್ರಮುಖ ನಿಲ್ದಾಣಗಳಲ್ಲಿ ಬಿಟ್ಟು ಉಳಿದ ಎಲ್ಲಿಯೂ ಸೇವೆ ನೀಡದ ಕಾರಣ ಜನರು ಬೀದಿಗಿಳಿದಿದ್ದಾರೆ. ಜನರಿಗೆ ನೀಡಿದ ಭರವಸೆಯಂತೆ ಅಧಿಕಾರಿಗಳು 10 ದಿನಗಳ ಒಳಗೆ ಸಮಸ್ಯೆಗೆ ಪರಿಹಾರ ಒದಗಿಸ್ತಾರಾ ? ಅಥವಾ ಮತ್ತೆ ಹೋರಾಟ ಮುಂದುವರಿಯುತ್ತಾ ? ಎಂದು ಕಾದು ನೋಡಬೇಕಷ್ಟೇ.

Follow Us:
Download App:
  • android
  • ios