ಮಂಗಳೂರು ಜಂಕ್ಷನ್- ಯಶವಂತಪುರ ರೈಲು ಸಮಯ ಬದಲಾವಣೆ
ಮಂಗಳೂರು ಜಂಕ್ಷನ್- ಯಶವಂತಪುರ ನಡುವೆ ಚಲಿಸುವ ರೈಲು ಸಂಖ್ಯೆ 16576ರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ.
ಮಂಗಳೂರು : ಮಂಗಳೂರು ಜಂಕ್ಷನ್- ಯಶವಂತಪುರ ನಡುವೆ ಚಲಿಸುವ ರೈಲು ಸಂಖ್ಯೆ 16576ರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ.
ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿಯ ಮೇರೆಗೆ ಈ ಬದಲಾವಣೆಯನ್ನು ತರಲಾಗಿದೆ. ರೈಲ್ವೆ ಸಚಿವಾಲಯವು ತಂದಿರುವ ಈ ಬದಲಾವಣೆಯಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ ಎಂದು ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಿತ್ತುಕೊಂಡ ಇಲಾಖೆ
ಬೆಂಗಳೂರು : ಬಡ್ತಿಗಾಗಿ ಕನ್ನಡದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ಮತ್ತೆ ಶಾಕ್ ಕೊಟ್ಟಿದೆ. ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದ ಇಲಾಖೆ ಇದೀಗ ಹಾಲ್ ಟಿಕೆಟ್‌ನಲ್ಲಿ ಕನ್ನಡಕ್ಕೆ ಕೊಕ್ ನೀಡಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವ ಆಯ್ಕೆ ಕೊಟ್ಟಿದೆ. ಇದರಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯ (ಜಿಡಿಸಿಇ) ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರೀಕ್ಷೆ ಬರೆವ ಅವಕಾಶವಿತ್ತು. ಹೀಗಾಗಿ ಕನ್ನಡಿಗ ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಕೈಗೊಂಡಿದ್ದರು. ಆಗಸ್ಟ್ 3ಕ್ಕೆ ಈ ಪರೀಕ್ಷೆಯಿದೆ. ಆದರೆ, ಈ ನಡುವೆ ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವಂತೆ ಆಯ್ಕೆ ನೀಡಲಾಗಿದೆ.
ಮಹಿಳೆಯ ಯಾವ ಅಂಗ ರಾತ್ರಿ ದೊಡ್ಡದಾಗುತ್ತೆ?
ಹುಬ್ಬಳ್ಳಿ ವಿಭಾಗದಲ್ಲಿ 521, ಮೈಸೂರು 130, ಬೆಂಗಳೂರು ವಿಭಾಗದಲ್ಲಿ 278 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಎರಡು ತಿಂಗಳಿಂದ ಪರೀಕ್ಷೆ ಸಿದ್ಧತೆ ನಡೆಸಿದ್ದ ಕನ್ನಡಿಗರು ಇದೀಗ ಮಾತೃಭಾಷೆಯಲ್ಲಿ ಪರೀಕ್ಷೆ ಬರೆವ ಆಯ್ಕೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತಿದ್ದಾರೆ. ಈ ಹಿಂದೆ ನಡೆದ ಜಿಡಿಸಿಇ ಪರೀಕ್ಷೆಗಳಲ್ಲಿ ಕನ್ನಡದ ಅವಕಾಶ ನೀಡಿದ್ದ ಇಲಾಖೆ ಈ ಬಾರಿ ಯಾಕೆ ನೀಡುತ್ತಿಲ್ಲ ಎಂದು ನೌಕರರು ಪ್ರಶ್ನಿಸಿದ್ದಾರೆ.
ತಮಿಳಲ್ಲಿದೆ, ಕನ್ನಡದಲ್ಲೇಕಿಲ್ಲ?:
ದಕ್ಷಿಣ ರೈಲ್ವೆಯು ತಮಿಳುನಾಡಿನಲ್ಲಿ 2017-18ರಿಂದಲೇ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮಿಳಿನಲ್ಲಿ ಬರೆವ ಆಯ್ಕೆಯನ್ನು ನೀಡಿದೆ. ಪ್ರತಿ ವರ್ಷವೂ ಸಾವಿರಾರು ಬಡ್ತಿ ಪರೀಕ್ಷೆಗಳು ಆ ರಾಜ್ಯದ ಅಧಿಕೃತ ಭಾಷೆಯಲ್ಲಿ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ನೈಋತ್ಯ ರೈಲ್ವೆಯಿಂದ ಇದಿನ್ನೂ ಜಾರಿಯಾಗಿಲ್ಲ. ಕನ್ನಡಿಗರು ಹಿಂದಿ/ ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ರಾಜ್ಯದವರು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕೇಳುತ್ತಿದ್ದರೂ ಇನ್ನೂ ಬೇಡಿಕೆ ಈಡೇರಿಲ್ಲ.
‘ನಾವು ಕನ್ನಡದಲ್ಲೇ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದೆವು. ಆದರೆ, ಹಾಲ್ ಟಿಕೆಟ್‌ನಲ್ಲಿ ಹಿಂದಿ/ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡಿರುವ ಕಾರಣ ಸಮಸ್ಯೆಯಾಗಿದೆ. ಇಲಾಖೆ ಪರೀಕ್ಷೆ ಮುಂದೂಡಬೇಕು. ಜೊತೆಗೆ ಕನ್ನಡದ ಆಯ್ಕೆ ನೀಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ಹೇಳಿದರು.