ಮಂಗಳೂರು(ಸೆ.10): ನಗರದ ಹೊರವಲಯದ ಜೋಕಟ್ಟೆಯಲ್ಲಿ ಬಸ್‌ ಚಾಲನೆ ವೇಳೆ ಮೊಬೈಲ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕನಿಗೆ ಸಂಚಾರ ಪೊಲೀಸರು 5,000 ರು. ದಂಡ ವಿಧಿಸಿದ್ದಾರೆ.

ಶನಿವಾರ ರಾತ್ರಿ 7 ಗಂಟೆ ಸುಮಾರು ಮಂಗಳೂರು ಉತ್ತರ ಠಾಣಾ ಪೊಲೀಸರು ಜೋಕಟ್ಟೆಕ್ರಾಸ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ಬಸ್‌ ಚಲಾಯಿಸುತ್ತಿದ್ದ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನು. ಬಸ್‌ ನಿಲ್ಲಿಸಲು ಸೂಚಿಸಿದ ಪೊಲೀಸರು ಚಾಲಕನಿಂದ ಭಾರೀ ದಂಡ ವಸೂಲಿ ಮಾಡಿದ್ದಾರೆ.

ರಾಜೀನಾಮೆ ನೀಡಿದ್ದು ಸೆಂಥಿಲ್ ಹೇಡಿತನ: ಬಿಜೆಪಿ ವ್ಯಂಗ್ಯ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಮೊತ್ತವನ್ನು ಹೆಚ್ಚಿಸಿ ಜಾರಿ ಮಾಡಿರುವ ಹೊಸ ಮೋಟಾರು ವಾಹನ ಕಾಯ್ದೆ ಮಂಗಳೂರು ನಗರದಲ್ಲಿ ಶನಿವಾರದಿಂದ ಅನುಷ್ಠಾನಕ್ಕೆ ಬಂದಿದೆ.

ಮಂಗಳೂರು: ಸೆಂಥಿಲ್‌ ವಿರುದ್ಧ ದೇಶದ್ರೋಹಿ ತನಿಖೆ..?