ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ತರಿಸಿಕೊಂಡಿದ್ದ, ಹೋಟೆಲ್‌ನಲ್ಲೇ ತಯಾರಿಸಿದ್ನಾ ಬಾಂಬ್..?

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿ ಹೋಟೆಲ್‌ನಲ್ಲಿ ಉಳಿದುಕೊಂಡು ಬಾಂಬ್ ತಯಾರಿಸಿದ್ದ ಎನ್ನಲಾಗುತ್ತಿದೆ. ಹಾಗೆಯೇ ಆತ ಆನ್‌ಲೈನ್‌ ಮೂಲಕ ವೈಟ್‌ ಸಿಮೆಂಟ್‌ ತರಿಸಿಕೊಂಡ ಎನ್ನಲಾಗುತ್ತಿದೆ.

mangalore bomb incident accused ordered white cement in online

ಮಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿ ಹೋಟೆಲ್‌ನಲ್ಲಿ ಉಳಿದುಕೊಂಡು ಬಾಂಬ್ ತಯಾರಿಸಿದ್ದ ಎನ್ನಲಾಗುತ್ತಿದೆ. ಹಾಗೆಯೇ ಆತ ಆನ್‌ಲೈನ್‌ ಮೂಲಕ ವೈಟ್‌ ಸಿಮೆಂಟ್‌ ತರಿಸಿಕೊಂಡ ಎನ್ನಲಾಗುತ್ತಿದೆ.

"

ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಾಂಬ್ ತಯಾರಿಸಲಾಗಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ. 10 ದಿನಗಳ ಹಿಂದೆ ಹೊಟೇಲ್‌ನ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದಾತ ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ಆರ್ಡರ್ ಮಾಡಿದ್ದ. ಬಿಳಿ ಬಣ್ಣದ ಪೌಡರ್ ಹೊಟೇಲ್‌ನಲ್ಲಿ ಪತ್ತೆಯಾಗಿದೆ.

ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು

ವ್ಯಕ್ತಿ ಕೆಲವು ದಿನಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ. ಹೋಟೆಲ್‌ನಲ್ಲಿ ಬಾಕಿ ಉಳಿದ ಪೌಡರ್‌ನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕರ ವಿಚಾರಣೆ ನಡೆಸಿದ್ದದಾರೆ. ಮಂಗಳೂರಿನಲ್ಲಿದ್ದುಕೊಂಡೇ ಬಾಂಬ್ ಸ್ಫೋಟಕ್ಕೆ ಯೋಜನೆ ರೂಪಿಸಲಾಗಿತ್ತು ಎಂಬ ಶಂಕೆಯೂ ವ್ಯಕ್ತವಾಗಿದೆ.

ಆನ್‌ಲೈನ್‌ನಲ್ಲಿ ವೈಟ್ ಸಿಮೆಂಟ್ ಖರೀದಿಸಿದ್ದ ಸಂದರ್ಬ ಹೋಟೆಲ್ ಸಿಬ್ಬಂದಿ ಕೇಳಿದ್ದಕ್ಕೆ ಜಿಮ್‌ನಲ್ಲಿ ಗ್ರಿಪ್ ಸಿಗಲು ಬಳಸಲು ಅಂದಿದ್ದ. ಕೆಂಜಾರು ಮೈದಾನದಲ್ಲಿ ಸ್ಪೋಟ ನಡೆಸಿದ ಜಾಗದಲ್ಲೂ ವೈಟ್ ಸಿಮೆಂಟ್ ಪತ್ತೆಯಾಗಿದೆ.

Latest Videos
Follow Us:
Download App:
  • android
  • ios