ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಮಂಗಳೂರು ಏರ್ಪೋರ್ಟ್ಗೆ ತೆರಳುವ ರಸ್ತೆ ಸೇತುವೆ ಕುಸಿತ ಮಂಗಳೂರು ಹೊರವಲಯದ ಬಜ್ಪೆಯ ಮರವೂರು ಬಳಿ ಘಟನೆ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಇಂದು ಸೇತುವೆ ಕುಸಿತ

ಮಂಗಳೂರು (ಜೂ.15): ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಮಂಗಳೂರು ಏರ್ಪೋರ್ಟ್ಗೆ ತೆರಳುವ ರಸ್ತೆ ಸೇತುವೆ ಕುಸಿದು ಬಿದ್ದಿದೆ. 

ಮಂಗಳೂರು ಹೊರವಲಯದ ಬಜ್ಪೆಯ ಮರವೂರು ಬಳಿ ಘಟನೆ ನಡೆದಿದೆ. ಹೊಸ ಸೇತುವೆ ಕಾಮಗಾರಿ ಹಿನ್ನೆಲೆ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಇಂದು ಸೇತುವೆ ಕುಸಿದು ಬಿದ್ದಿದೆ. 

ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ರೆಡ್, ಆರೇಂಜ್, ಯೆಲ್ಲೋ​ ಅಲರ್ಟ್ ..

ಸೇತುವೆ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯುಂಟಾಗಿದ್ದು, ಮಂಗಳೂರಿನಿಂದ ವಿಮಾನ ನಿಲ್ದಾಣ ಭಾಗಕ್ಕೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ನಿಟ್ಟಿನಲ್ಲಿ
ವಾಹನ ಸಂಚಾರ ಬಂದ್ ಮಾಡಿದ್ದು, ಉಡುಪಿಯಿಂದ ಬರುವವರು ಮೂಲ್ಕಿಯಲ್ಲಿ ತಿರುವ ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ. 

ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ ಗುರುಪುರ ರಸ್ತೆಯಾಗಿ ಎರ್ ಪೂರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನ ಕಾವೂರಿನಿಂದ ಏರ್ ಪೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.