ಮಂಡ್ಯ(ಆ.02): ಆತ್ಮಹತ್ಯೆ ಮಾಡಿಕೊಳ್ಳಲೆಂದು ಬಂದ ವೃದ್ಧೆಯೊಬ್ಬರು ತಾಯಿಯ ಅಸ್ತಿ ವಿಸರ್ಜನೆಗೆ ಬಂದಿದ್ದ ಮಗ ನದಿಯಲ್ಲಿ ಕೊಚ್ಚಿಹೋದ ಘಟನೆಯನ್ನು ಕಣ್ಣಾರೆ ನೋಡಿ ಆತ್ಮಹತ್ಯೆ ಯೋಚನೆ ಕೈಬಿಟ್ಟಿದ್ದಾರೆ.

ಯುವಕ ಕೊಚ್ಚಿ ಹೋದ ಘಟನೆ ತಿಳಿದು ವೃದ್ಧೆ ಹೆದರಿಕುಳಿತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವೃದ್ಧೆಯನ್ನು ಪೊಲೀಸರು ರಕ್ಷಿಸಿದ್ದಾರೆ. ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲೆಂದು ವೃದ್ಧೆಯ ನದಿಯ ಬಳಿ ಬಂದಿದ್ದರು.

ಶ್ರೀರಂಗಪಟ್ಟಣದ ಸಂಗಮದಲ್ಲಿ ತಾಯಿ ಅಸ್ತಿ ವಿಸರ್ಜನೆಗೆಂದು ಬಂದಿದ್ದ ಮಗ ನದಿಯಲ್ಲಿ ಕೊಚ್ಚಿಹೋಗಿದ್ದ. ಇದೇ ಸಂಗಮದಲ್ಲಿ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ ಅಪರಿಚಿತ ವೃದ್ಧೆ ಘಟನೆಯನ್ನು ನೋಡಿ ಹೆದರಿದ್ದಾರೆ.

ಸ್ಥಳದಲ್ಲಿದ್ದ ವೃದ್ಧೆಯನ್ನು ಕಂಡ ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ. ವಿಚಾರಣೆಯ ಸಂದರ್ಭ ತಡವರಿಸುತ್ತಾ ವೃದ್ಧೆ ಭಯದಿಂದ ಆತ್ಮಹತ್ಯೆ ವಿಷಯ ತಿಳಿಸಿದ್ದಾರೆ. ‌ವೃದ್ದೆಯನ್ನು ಸಂತೈಸಿ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಶ್ರೀರಂಗಪಟ್ಟಣ: ತಾಯಿ ಅಸ್ಥಿ ವಿಸರ್ಜನೆಗೆ ಬಂದವ ನದಿಯಲ್ಲಿ ಕೊಚ್ಚಿಹೋದ

ವೃದ್ದೆಯ ಬಳಿ 250 ಗ್ರಾಂ ಒಡವೆಗಳಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾಮನಗರ ಮೂಲದವಳೆಂದು ವೃದ್ಧೆ ಸ್ಥಳೀಯರ ಬಳಿ ಪರಿಚಯ ಮಾಡಿಕೊಂಡಿದ್ದರು. ಸದ್ಯ‌ ವೃದ್ಧೆ ಶ್ರೀರಂಗಪಟ್ಟಣ ಪೊಲೀಸರ ವಶದಲ್ಲಿದ್ದಾರೆ. ಅಪರಿಚಿತ ವೃದ್ದೆಯ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ