ಮಂಡ್ಯ(ಫೆ.26): ದೊಡ್ಡ ಮಿನಿಸ್ಟರಾ ನೀನು..? ಬರಲಿಲ್ಲ ಅಂದರೆ ಮನೆ ಹತ್ತಿರ ಹುಡಕಿಕೊಂಡು ಬರ್ತೀನಿ. ಅದಕ್ಕೆ ನನಗೆ ನೌಕರಿ ಕೊಟ್ಟಿರೋದು ಎಂದು ಪಿಎಸ್‌ಐ ರೌಡಿಗಳ ಬೆವರಿಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಇಷ್ಟು ದಿನ ಬೇರೆ ನೋಡಿದ್ದೀಯಾ.. ನನ್ನ ಕಥೆ ಗೊತ್ತಿಲ್ಲ ನಿನಗೆ ಎಂದು ರೌಡಿಗಳನ್ನು ಬೆದರಿಸಿದ್ದಾರೆ. ಶ್ರೀಮಂತರನ್ನು ಬೆದರಿಸಿ ಹಣವಸೂಲಿ ಮಾಡ್ತಿದ್ದವರನ್ನು ಬಂಧಿಸಲಾಗಿದೆ. ಬೆದರಿಸಿ ಹಣ ವಸೂಲಿ ಮಾಡ್ತಿದ್ದ ಇಬ್ಬರನ್ನು ಬಂಧಿಸಿ, ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಕೆ.ಆರ್. ಪೇಟೆ ಪಟ್ಟಣ ಪೋಲಿಸ್ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ.

ಇದು ದೈವ ಶಕ್ತಿಯಾ..? ಕದಿಯೋಕೆ ಬಂದವನಿಗೆ ಅಚಾನಕ್ ಗಾಢ ನಿದ್ದೆ..!

ಅರಣ್ ಅಲಿಯಾಸ್ ಅಲ್ಲು, ಗುರು ಅಲಿಯಾಸ್ ಗುರು ಬಂಧಿತರು. ಕಿರಣ್ ಅಲಿಯಾಸ್ ಅಗಸ್ತ, ಚಂದು ಅಲಿಯಾಸ್ ಅರುಣ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಬಂಧಿತ ಖದೀಮರಿಗೆ ಪಿಎಸ್‌ಐ ಬ್ಯಾಟರಾಯಗೌಡ ಅವಾಜ್ ಹಾಕಿದ್ದಾರೆ.

ಬೆದರಿಸಿ ಹಣ ವಸೂಲಿ ಮಾಡ್ತಿದ್ದವರಿಗೆ ಬೆವರಿಳಿಸಿದ ಇನ್ಸ್ಪೆಕ್ಟರ್ ಅವ್ಯಾಚ್ಯ ಶಬ್ದಗಳಿಂದ ಆರೋಪಿಗಳಿಗೆ ಗದರಿದ್ದಾರೆ. ಕಾರಿನಲ್ಲಿ ಕೂರಿಸಿಕೊಂಡು ಹಣ ವಸೂಲಿ ಮಾಡ್ತೀಯಾ ನನ್ನ ಮಗನೆ, ಪೋಲಿಸ್ ಠಾಣೆಗೆ ಬರಲು ಹೇಳಿದ್ರೆ ಬರಲ್ಲ ಅಂತೀತಾ. ಬರಬೇಕ್ ಬರಬೇಕ್ ಅಷ್ಟೇ. ದೊಡ್ಡ ಮಿನಿಸ್ಟರಾ ನೀನು. ಬರಲಿಲ್ಲ ಅಂದ್ರೆ ಮನೆ ಹತ್ತಿರ ಹುಡಕಿಕೊಂಡು ಬರ್ತೀನಿ. ಅದಕ್ಕೆ ನನಗೆ ನೌಕರಿ ಕೊಟ್ಟಿರೋದು ಎಂದಿದ್ದಾರೆ.

ದಿವ್ಯಾಂಗ ವಿದ್ಯಾರ್ಥಿನಿ ಮೇಲೆ 60ರ ಮುದುಕನಿಂದ ನಿರಂತರ ಅತ್ಯಾಚಾರ..!

ಇಷ್ಟು ದಿನ ಬೇರೆ ನೋಡಿದ್ದೀಯಾ. ನನ್ನ ಕಥೆ ಗೊತ್ತಿಲ್ಲ ನಿನಗೆ. ಫಿಟ್ ಫಾರ್ ಎನ್‌ಕೌಂಟರ್. ಮುಗಿಸಿಬಿಡ್ತೀನಿ. ಇವೆಲ್ಲ ಬಿಟ್ಟು ಬಿಡು ಅರ್ಥ ಆಯ್ತಾ..? ಮಿಸ್ಟರ್ ಅರುಣ್ ದಿಸ್ ಇಸ್ ನಾಟ್ ಓಲ್ಡ್ ಪೋಲಿಸಿಂಗ್. ಪೋಲಿಸಿಂಗ್ ಬೇರೆ ಇದೆ. ಅರ್ಥ ಆಯ್ತಾ..? ನೀವಲ್ಲ ರೌಡಿ, ಪೋಲಿಸರು ರೌಡಿಗಳು ಎಂದಿದ್ದಾರೆ.