Mandya Politics : ಪಕ್ಷೇತರವಾಗಿ ಕಣಕ್ಕೆ ಪ್ರಕಾಶ್‌

  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಯುವ ಮುಖಂಡ ಪ್ರಕಾಶ್‌ ಭಾನುವಾರ ಹೇಳಿದರು.

Mandya Politics   Prakash will contest in Election  Independently  snr

ಮದ್ದೂರು :  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಯುವ ಮುಖಂಡ ಪ್ರಕಾಶ್‌ ಭಾನುವಾರ ಹೇಳಿದರು.

ಪಟ್ಟಣದ ಶಂಕರ್‌ ಪಾರ್ಟಿ ಹಾಲ್‌ನಲ್ಲಿ ಚುನಾವಣೆ ಸ್ಪರ್ಧೆ ಕುರಿತಂತೆ ಬೆಂಬಲಿಗರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕ್ಷೇತ್ರಕ್ಕೆ ಯುವಶಕ್ತಿಯ ಅಗತ್ಯತೆ ಇರುವುದರಿಂದ ನನ್ನ ಸ್ನೇಹಿತರು, ಹಿತೈಷಿಗಳ ಮತ್ತು ಅಭಿಮಾನಿಗಳ ಒತ್ತಾಸೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.

ನಾನು ಈಗಾಗಲೇ ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಪ್ರವಾಸ ಮಾಡಿ ಯುವಕರನ್ನು ಭೇಟಿ ಮಾಡಿದ್ದೇನೆ. ಚುನಾವಣೆ ಸ್ಪರ್ಧಿಸುವಂತೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಪಟ್ಟಿಮಾಡಿಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಖಚಿತ ಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಭೂಗಳ್ಳರು, ಅಪ್ರಾಮಾಣಿಕರು, ಜಾತಿವಾದಿಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಆಕ್ರಮವಾಗಿ ಹಣ ಮಾಡಿರುವ ವ್ಯಕ್ತಿಗಳು ಹಣ ಉಳಿಸಿಕೊಳ್ಳಲು ರಾಜಕೀಯಕ್ಕೆ ಬರುತ್ತಿದ್ದಾರೆ. ಇಂತಹವರನ್ನು ಮಟ್ಟಹಾಕಲು ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಯುವಕರು, ಮಹಿಳೆಯರು, ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಚುನಾವಣೆಯಲ್ಲಿ ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದು ಪ್ರಕಾಶ್‌ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ರಘು, ವಿನೋದ್‌, ಅರ್ಜುನ್‌, ಪ್ರಸನ್ನ, ಪ್ರದೀಪ್‌, ವಿಷ್ಣು ಇದ್ದರು.

ರೇವಣ್ಣ - ಕುಮಾರಣ್ಣರೇ ನಿಲ್ಲಲಿ

ಮಂಡ್ಯ (ಫೆ.5) : ಮುಂದಿನ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ರೇವಣ್ಣ, ಕುಮಾರಣ್ಣ ಅಷ್ಟೇಕೆ ದೇವೇಗೌಡರೇ ಬಂದು ಸ್ಪರ್ಧಿಸಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಚಿವ, ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಧೈರ್ಯವಾಗಿ ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಚುನಾವಣಾ ಕಣ. ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಯಾರನ್ನೂ ಬರಬೇಡಿ ಎಂದು ಹೇಳಲಾಗುವುದಿಲ್ಲ. ರೇವಣ್ಣನಾದ್ರೂ ಬರಲಿ, ಕುಮಾರಣ್ಣ ಬೇಕಾದರೂ ಬರಲಿ, ದೇವೇಗೌಡರೇ ಕಣಕ್ಕಿಳಿಯಲಿ. ನಾನೇ ಅವರಿಗೆ ಖುದ್ದು ಆಹ್ವಾನ ಕೊಡುತ್ತಿದ್ದೇನೆ. ಯಾರೇ ಬಂದು ಸ್ಪರ್ಧೆ ಮಾಡಿದರೂ ನನಗೆ ಭಯ ಇಲ್ಲ ಎಂದು ರೇವಣ್ಣ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗುತ್ತಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಆಲಿಬಾಬ ಕಥೆಗೆ ಹೋಲಿಸಿದ ಜೆಡಿಎಸ್‌ ಮುಖಂಡನಿಗೆ ಸಚಿವ ನಾರಾಯಣಗೌಡರ ತರಾಟೆ

ಕ್ಷೇತ್ರದೊಳಗೆ ನನಗೆ ಯಾವುದೇ ಭಯದ ವಾತಾವರಣ ಇಲ್ಲ. ಚುನಾವಣೆಯನ್ನು ಎದುರಿಸುವುದು ನಮ್ಮ ಧರ್ಮ. ಯಾರನ್ನು ಆಯ್ಕೆ ಮಾಡಬೇಕೆಂದು ನಮ್ಮ ತಾಲೂಕಿನ ಮತದಾರ ದೇವತೆಗಳು ನಿರ್ಧರಿಸುತ್ತಾರೆ. ಅವರನ್ನು ಬರಬೇಡಿ ಎಂದು ಹೇಳಲು ನಾನು ಯಾರು. ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದು ನುಡಿದರು.

ಜೆಡಿಎಸ್‌ನಲ್ಲಿ ಟಿಕೆಟ್‌ ಗೊಂದಲವಿರುವುದಕ್ಕೆ ನಾನೇನು ಹೇಳಲಿ. ನಾನು ಜೆಡಿಎಸ್‌ ಬಿಟ್ಟವನು. ಪಕ್ಷಕಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಟಿಕೆಟ್‌ಗೊಂದಲ ಅವರ ಪಕ್ಷಕ್ಕೆ ಬಿಟ್ಟವಿಚಾರ ಎಂದರು.

ಕೆಆರ್ ಪೇಟೆಯಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್:

ಮಂಡ್ಯ: ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಚುನಾವಣೆಗೂ ಮುನ್ನವೇ ಗಿಫ್‌್ಟಪಾಲಿಟಿಕ್ಸ್‌ ಶುರುವಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಚಿವ ಹಾಗೂ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡ ಅವರು ಗ್ರಾಪಂ ಸದಸ್ಯರಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ. ಈ ಮೂಲಕ ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲಾರಂಭಿಸಿದ್ದಾರೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಶುಭಾಶಯದ ಹೆಸರಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ 32 ಇಂಚಿನ 500ಕ್ಕೂ ಹೆಚ್ಚು ಸ್ಮಾರ್ಚ್‌ ಟಿವಿ ನೀಡಿ ಅಭಿನಂದಿಸಿದ್ದಾರೆ. ಪಂಚಾಯ್ತಿ ಮಟ್ಟದಲ್ಲಿ ಮತ ಬ್ಯಾಂಕ್‌ ಗಟ್ಟಿಗೊಳಿಸಲು ಸ್ಮಾರ್ಚ್‌ ಟಿವಿಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆಂಬ ಮಾತುಗಳು ಕ್ಷೇತ್ರದೊಳಗೆ ಕೇಳಿಬರುತ್ತಿವೆ.

Latest Videos
Follow Us:
Download App:
  • android
  • ios