ಮಂಡ್ಯ(ಮೇ 17): ಮೈಷುಗರ್‌ ಸಕ್ಕರೆ ಕಾರ್ಖಾನೆ ಅಳಿವು ಉಳಿವಿನ ಪ್ರಶ್ನೆಗೆ ಕೊನೆಗೂ ಫುಲ್‌ ಸ್ಟಾಪ್‌ ಹಾಕುವ ಕಾಲ ಬಂದಿದೆ. ಮಂಡ್ಯದ ಮೈಷುಗರ್‌ ಕಾರ್ಖಾನೆ ಖಾಸಗಿಕರಣ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಶನಿವಾರ ಬೆಂಗಳೂರಿನಲ್ಲಿ ಪ್ರಕಟಿಸಿದ್ದಾರೆಂದು ಉನ್ನತ ಅಧಿಕಾರಿಗಳ ಮೂಲದಿಂದ ತಿಳಿದುಬಂದಿದೆ.

ಸರ್ಕಾರದ ಸ್ವಾಮ್ಯದಲ್ಲೇ ಕಾರ್ಖಾನೆ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯದ ರೈತರ ಹಿತರಕ್ಷಣೆಗೆ ಬಿಜೆಪಿ ಮತ್ತೆ ಜೀವದಾನ ಮಾಡಿದಂತಾಗಿದೆ.

ಗ್ಲಾಡಿಯೋಸ್‌ ಹೂ ಮಾರಾಟವಾಗದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಯಾವುದೇ ಕಾರಣಕ್ಕೂ ಖಾಸಗಿಗೆ ಕಾರ್ಖಾನೆ ಒಪ್ಪಿಸಲು ನಾನು ಒಪ್ಪುವುದಿಲ್ಲ. ಮಂಡ್ಯದ ಜೊತೆ ಭಾವನಾತ್ಮಕ ಸಂಬಂಧವಿದೆ. ನನಗೆ ಜನ್ಮ ನೀಡಿದ ಮಂಡ್ಯ ಜಿಲ್ಲೆಯ ಹಿತವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾನು ಮುಖ್ಯಮಂತ್ರಿ ಆಗಿರುವ ವೇಳೆಯಲ್ಲಿ ಮಂಡ್ಯ ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆಂದು ಹೇಳಲಾಗಿದೆ. ಹೊರಗಿನಿಂದ ಸಾಲ ತಂದಾದರೂ ಸರಿ ಮೈಷುಗರ್‌ ಕಾರ್ಖಾನೆ ಉಳಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ತಾಕೀತು ಮಾಡಿದ್ದಾರೆಂದು ಮೂಲಗಳು ಹೇಳಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಕ್ಯಾಬಿನೆಟ್‌ ಸಭೆಗೆ ಚರ್ಚೆಗೆ ತರಲು ಸೂಚನೆ ನೀಡಿದ್ದಾರೆ. ಆಪರೇಶನ್‌ ಆ್ಯಂಡ್‌ ಮ್ಯಾನೇಜ್‌ ಮೆಂಟ್‌ ತತ್ವದ ಅಡಿಯಲ್ಲಿ ಮೈಷುಗರ್‌ ಕಾರ್ಖಾನೆ ಉಳಿಸಲು ನಿರ್ಧಾರ ಮಾಡಲಾಗಿದೆ. ಕಾರ್ಖಾನೆ ಮಾಲೀಕತ್ವ ಸರ್ಕಾರದ ಬಳಿ, ಮ್ಯಾನೇಜ್‌ ಮೆಂಟ್‌ ಮಾತ್ರ ಖಾಸಗಿಗೆ ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆಂದು ಅಧಿಕಾರಿಯ ಮೂಲಗಳು ಹೇಳಿವೆ.

ಕೊರೋನಾ ಮಧ್ಯೆ ಬರ್ತ್‌ಡೇ ಆಚರಿಸಿಕೊಂಡ ಚಿತ್ರದುರ್ಗದ MP ನಾರಾಯಣಸ್ವಾಮಿ

ಈ ಮೊದಲು ಪಿಪಿಪಿ ಮಾದರಿಯಲ್ಲಿ 40 ವರ್ಷ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕೆ ವಿರೋಧ ಬಂದ ಹಿನ್ನೆಲೆ ಸರ್ಕಾರದ ಬಳಿಯೇ ಉಳಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಮಂಡ್ಯದ ಮೈಷುಗರ್‌ ಕಾರ್ಖಾನೆ ಪೂರ್ಣ ಖಾಸಗೀಕರಣ ಇಲ್ಲ ಎಂಬ ಮಹತ್ವ ಪೂರ್ಣ ನಿರ್ಧಾರವನ್ನು ಕೈಗೊಂಡಿದೆ ಎಂದು ಗೊತ್ತಾಗಿದೆ.