Mandya Mysugar: ಮೈಶುಗರ್ ಆರಂಭಕ್ಕೆ ಸರ್ಕಾರ ಬದ್ಧ, ಬಜೆಟ್‌ನಲ್ಲಿ ಭರಪೂರ ಕೊಡುಗೆ
*ಮಂಡ್ಯದ ಮೈಶುಗರ್ ಕಾರ್ಖಾನೆ ಪುನರ್ ಆರಂಭಕ್ಕೆ ಸರ್ಕಾರ ಬದ್ಧ
* ಮಂಡ್ಯದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ
* ಖಾಸಗೀಕರಣ ವಿಚಾರ ಬರುಯವುದೇ ಇಲ್ಲ
* ಮೇಕೆದಾಟು ಯಾತ್ರೆ ಹಿಂದೆ ಕಾಂಗ್ರೆಸ್ ರಾಜಕಾರಣ
ಮಂಡ್ಯ(ಫೆ. 26) ಮಂಡ್ಯದ (Mandya) ಮೈಶುಗರ್ ಕಾರ್ಖಾನೆ ಪುನರ್ ಆರಂಭಕ್ಕೆ (Karnataka Govt) ಸರ್ಕಾರ ಬದ್ಧವಾಗಿದೆ ಎಂದು ಮಂಡ್ಯದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K Gopalaiah ) ಹೇಳಿಕೆ ನೀಡಿದ್ದಾರೆ.
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ. 4 ನೇ ತಾರೀಖು ಬಜೆಟ್ ನಲ್ಲಿ ಎಲ್ಲಮ ಘೋಷಣೆಯಾಗಿದೆ. ಸಂಸದರು, ಶಾಸಕರು, ರೈತರೊಂದಿಗೆ ನಡೆದ ಸಭೆಯ ಮಾತುಕತೆಯಂತೆ ನಮ್ಮ ಸರ್ಕಾರ ನಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ (Congress) ಮೇಕೆದಾಟು (Mekedatu) ಪಾದಯಾತ್ರೆ ಹಿಂದಿನ ಉದ್ದೇಶ ಚುನಾವಣೆ. ಚುನಾವಣೆಗೋಸ್ಕರ ಪಾದಯಾತ್ರೆ ಮಾಡ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್ ಗೆ ಐದು ವರ್ಷಗಳ ಕಾಲ ಅಧಿಕಾರ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಮೇಕೆದಾಟು ಯೋಜನೆಯನ್ನು ಕಾರ್ಯಗತ ಗೊಳಿಸಬಹುದಿತ್ತು. ಏಕೆ ಮಾಡಲಿಲ್ಲ.? ಮೇಕೆದಾಟು ಯೋಜನೆಯನ್ನ ನಮ್ಮಸರ್ಕಾರ ಸಾಕಾರಗೊಳಿಸಲಿದೆ ಎಂದು ಸಚಿವರು ಹೇಳಿದರು.
ಖಾಸಗೀಕರಣ ವಿಚಾರ: ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಒಂದು ಹಂತದಲ್ಲಿ ಯೋಜನೆ ಸಿದ್ಧಮಾಡಿತ್ತು. ಆದರೆ ವಿರೋಧಾಭಾಸ ಎದುರಾದ ನಂತರ ಹಿಂದಕ್ಕೆ ಸರಿದಿತ್ತು.
ಮಂಡ್ಯ ಜಿಲ್ಲೆ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆ ಭಾಗದ ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆದು ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದೆರು.
ಸದನದಲ್ಲಿ ಭಾವುಕರಾದ ನಿರಾಣಿ, ನಾನು ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಭೋಗ್ಯಕ್ಕೆ ಪಡೆದು ಪುನಾರಂಭ ಮಾಡಿದೆವು. ಇದರಲ್ಲೂ ನನಗೆ 'ಕಹಿಅನುಭವ' ಆಗಿದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.
ನಾನು ನೂರಕ್ಕೆ ನೂರರಷ್ಟು ಈ ಸದನದಿಂದಲೇ ಸ್ಪಷ್ಟಪಡಿಸುವುದು ಏನೆಂದರೆ, ಯಾವುದೇ ಕಾರಣಕ್ಕೂ ಮೈ ಶುಗರ್ ಫ್ಯಾಕ್ಟರಿ ಬಿಡ್ ಮಾಡುವುದಿಲ್ಲ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದರು.
ಮೈ ಶುಗರ್ ಕಾರ್ಖಾನೆಯನ್ನು ನಾನು ಪಡೆಯುವ ಸಲುವಾಗಿ ಇಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರೂ ಹೊರಗೆ ಹೋಗದ ಕಾಲದಲ್ಲಿ ನಾನು ಪಾಂಡವಪುರ ಕಾರ್ಖಾನೆಯನ್ನು ಪ್ರಾರಂಭ ಮಾಡಿದೆವು. ಆದರೂ ನಮಗೆ ಆಪಾದನೆಗಳು ನಿಂತಿಲ್ಲ ಎಂದಿದ್ದರು.
ಎಂ.ಕೆ.ಹುಬ್ಬಳ್ಳಿ, ಸಂಕೇಶ್ವರ, ರನ್ನ, ಸೇರಿದಂತೆ ಮತ್ತಿತರ ಕಾರ್ಖಾನೆಗಳು 'ಕೋಮಾ' ಸ್ಥಿತಿಗೆ ಬಂದಿವೆ. ಹಿಂದಿನ ಸರ್ಕಾರಗಳ ನೀತಿ ಈ ಸ್ಥಿತೆ ತಂದು ನಿಲ್ಲಿಸಿದೆ ಎಂದು ನಿರಾಣಿ ಅಂಕಿ ಅಂಶಗಳ ಸಮೇತ ಉತ್ತರ ನೀಡಿದ್ದರು. ಸಹಜವಾಗಿಯೇ ಕರ್ನಾಟಕ ಬಜೆಟ್ ಮೇಲೆ ನಿರೀಕ್ಷೆ ಭಾರ ಹೆಚ್ಚಾಗಿದ್ದು ಮೈಶುಗರ್ ವಿಚಾರದಲ್ಲಿ ಯಾವ ತೀರ್ಮಾನ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.