Asianet Suvarna News Asianet Suvarna News

Mandyaದಲ್ಲಿ ಜೆಡಿಎಸ್‌ಗೆ ಶಾಕ್ ಮೇಲೆ ಶಾಕ್!

  • ಮಂಡ್ಯದ ಮತ್ತೊಬ್ಬ ನಾಯಕ ಜೆಡಿಎಸ್‌ಗೆ ಗುಡ್ ಬೈ.?
  • ಅಶೋಕ್ ಜಯರಾಂ, ಲಕ್ಷ್ಮೀ ಅಶ್ವಿನ್ ಬಳಿಕ ಮರಿತಿಬ್ಬೇಗೌಡ ಸರದಿ.
  • ದಳಪತಿಗಳ ವಿರುದ್ಧವೇ ತಿರುಗಿಬಿದ್ದ ಮರಿತಿಬ್ಬೇಗೌಡ.
  • ದುಡ್ಡಿದ್ದವರಿಗಷ್ಟೇ ಜೆಡಿಎಸ್ ಟಿಕೆಟ್ ಎಂದು ಮರಿತಿಬ್ಬೇಗೌಡ ಆರೋಪ.
Mandya  MLC Maritibbe Gowda Planning to quit JDS gow
Author
Bengaluru, First Published May 9, 2022, 4:39 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, 

ಮಂಡ್ಯ(ಮೇ9): ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಸಾರ್ವತ್ರಿಕ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಜೆಡಿಎಸ್ ನಾಯಕರು ಪಕ್ಷ ತ್ಯಜಿಸುತ್ತಿದ್ದಾರೆ. ಮಾಜಿ ಸಚಿವ ಎಸ್‌ಡಿ ಜಯರಾಂ ಪುತ್ರ ಅಶೋಕ್ ಜಯರಾಂ ಹಾಗೂ ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಕೂಡ ಪಕ್ಷದ ವಿರುದ್ಧವೇ ಸಿಡಿದೆದ್ದಿದ್ದಾರೆ.

ಆಪ್ತನಿಗೆ ಕೈತಪ್ಪಿದ ಜೆಡಿಎಸ್ ಟಿಕೆಟ್, ವರಿಷ್ಠರ ವಿರುದ್ಧ ಹಣದ ಆರೋಪ: ಹಾಲಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮುಂಬರುವ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಆಪ್ತ ಜಯರಾಂಗೆ ಜೆಡಿಎಸ್ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಾಲಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಈ ಬಾರಿ ಸ್ಪರ್ಧೆ ನಿರಾಕರಿಸಿದ್ದರಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತ ಹಾಗೂ ತಮ್ಮ ಬೆಂಬಲ ಜಯರಾಂ ಅವರನ್ನು ಅಭ್ಯರ್ಥಿ ಮಾಡುವಂತೆ ಮರಿತಿಬ್ಬೇಗೌಡ ಪಟ್ಟು ಹಿಡಿದಿದ್ದರು. ಆದ್ರೆ ಜೆಡಿಎಸ್ ವರಿಷ್ಠರು ಕೆ‌.ಟಿ ಶ್ರೀಕಂಠೇಗೌಡರ ಆಪ್ತ ಹೆಚ್‌.ಕೆ ರಾಮು ಅವರನ್ನ ಅಭ್ಯರ್ಥಿ ಮಾಡುವ ಮೂಲಕ ಮರಿತಿಬ್ಬೇಗೌಡರಿಗೆ ಶಾಕ್ ನೀಡಿದ್ರು. ವರಿಷ್ಠರು ಈ ನಿರ್ಧಾರ ಈಗ ಮರಿತಿಬ್ಬೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. 

ಬೆಂಬಲಿಗನಿಗೆ ಟಿಕೆಟ್ ಸಿಗದ ಹಿನ್ನೆಲೆ ಪಕ್ಷ ಬಿಡುವ ತೀರ್ಮಾನಕ್ಕೆ ಮರಿತಿಬ್ಬೇಗೌಡ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಡ್ಯದಲ್ಲಿ ಹಿತೈಷಿಗಳು, ಬೆಂಬಲಿಗರ ಸಭೆ ಕರೆದಿದ್ದ ಮರಿತಿಬ್ಬೇಗೌಡ ಎಲ್ಲರ ಅಭಿಪ್ರಾಯ ಕೇಳಿದ್ರು. ಮತ್ತೊಮ್ಮೆ ಸಭೆ ಕರೆದು ಪಕ್ಷ ಬಿಡುವ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ರು.

MALAI MAHADESHWARA SANCTUARY ಹುಲಿಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರದ ಮೀನಾಮೇಷ?

ಜೆಡಿಎಸ್‌ ಅಭ್ಯರ್ಥಿಗೆ ಮತಹಾಕಬೇಡಿ, ಇಲ್ಲಿ ದುಡ್ಡಿದ್ದವರಿಗಷ್ಟೇ ಟಿಕೆಟ್: ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತ ಭಾವುಕರಾದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ವರಿಷ್ಠರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ ರಾಮುಗೆ ಮತ ಹಾಕದಂತೆ ಬೆಂಬಲಿಗರಲ್ಲಿ ಮನವಿ ಮಾಡಿದರು.

ಜೆಡಿಎಸ್ ನಲ್ಲಿ ದುಡ್ಡು ಇದ್ದವರಿಗೆ ಮಾತ್ರ ಬಿ.ಫಾಂ ನೀಡ್ತಾರೆ. ನಮ್ಮ ಪಕ್ಷದ ನಾಯಕರ ನಡೆ ಬಗ್ಗೆ ನನಗೆ ಬೇಸರವಾಗಿದೆ. ನಾಲ್ಕೈದು ವರ್ಷಗಳಿಂದ ನೋವು ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷದ ಕಾರ್ಯಕರ್ತರ ಬಗ್ಗೆ ನಮ್ಮ ನಾಯಕರಿಗೆ ಕಿಂಚಿತ್ತು ಕಳಕಳಿ ಇಲ್ಲಾ. ಜಯರಾಂ ಅವರ ಬಳಿ ಹಣ ಇಲ್ಲ ಎಂದು ಟಿಕೆಟ್ ಕೊಡಲ್ಲ ಅಂದ್ರು. ದೇವೇಗೌಡರು, ಕುಮಾರಸ್ವಾಮಿ ಅವರೆ ಜಯರಾಂ ಬಳಿ ಹಣ ಇಲ್ಲಾ ಟಿಕೆಟ್ ಕೊಡಲ್ಲ ಎಂದ್ರು. ಒಂದು ದಿನ ಬಾವುಟ ಹಿಡಿಲಿಲ್ಲ, ಪಕ್ಷ ಕಟ್ಟಲಿಲ್ಲ. ಯಾರು ಅಂತಾನೇ ಗೊತ್ತಿಲ್ಲದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಷದ ಸದಸ್ಯತ್ವವೇ ಇಲ್ಲದವರಿಗೆ ಯಾವ ಮಾನದಂಡದ ಮೇಲೆ ಟಿಕೆಟ್ ನೀಡಿದ್ರು ಎಂದು ಪ್ರಶ್ನಿಸಿದ್ರು.

Ballari ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ

ನಿಖಿಲ್ ಸೋಲಿಗೆ ಕಾರಣ ದೇವೇಗೌಡರ ಕುಟುಂಬ ರಾಜಕಾರಣ: ಬೆಂಬಲಿಗರ ಸಭೆಯಲ್ಲಿ ದೇವೇಗೌಡ ಮತ್ತು ನಿಖಿಲ್ ಸೋಲಿನ ಸತ್ಯ ಬಿಚ್ಚಿಟ್ಟಿರುವ ಮರಿತಿಬ್ಬೇಗೌಡ. ಇಬ್ಬರ ಸೋಲಿಗೆ ಯಾವ ಶಾಸಕರು, ಕಾರ್ಯಕರ್ತರು ಕಾರಣ ಅಲ್ಲ. ಕುಟುಂಬದ ತೀರ್ಮಾನವೇ ದೇವೇಗೌಡ, ನಿಖಿಲ್ ಸೋಲಿಗೆ ಕಾರಣ ಎಂದಿದ್ದಾರೆ.

ಹಾಸನದಲ್ಲಿ ಮೊಮ್ಮಗನಿಗೆ ಟಿಕೆಟ್ ಕೊಟ್ಟು, ತುಮಕೂರಿನಲ್ಲಿ ಎಚ್‌ಡಿಡಿ ಸ್ಪರ್ಧೆ ಮಾಡಬಾರದಿತ್ತು. ಮಂಡ್ಯದಲ್ಲಿ ಇನ್ನೊಬ್ಬ‌ ಮೊಮ್ಮಗನನ್ನ ಯಾಕೆ ನಿಲ್ಲಸಬೇಕಿತ್ತು. ಈ ಎರಡು ಕಡೆ ಸೋಲಿಗೆ ಶಾಸಕರು, ಕಾರ್ಯಕರ್ತರು, ನಾಡಿನ ಜನರು ಕಾರಣವಲ್ಲ. ಎರಡು ಕಡೆ ಸೋಲಿಗೆ ಕುಟುಂಬ ರಾಜಕಾರಣವೇ ಕಾರಣ. ನಿಖಿಲ್ ಸೋಲಿಗೆ ಮಂಡ್ಯ ಜಿಲ್ಲೆ ಶಾಸಕರು ಕಾರಣ ಎಂಬುದು ಸುಳ್ಳು. ಮಂಡ್ಯ ಶಾಸಕರು ಕೈಕೊಟ್ಟಿದ್ರೆ 5 ಲಕ್ಷಕ್ಕು ಅಧಿಕ ಮತ ಬರುತ್ತಿರಲ್ಲ. ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನ ತೆಗೆದುಕೊಂಡ ನಿರ್ಧಾರ. ನಿಖಿಲ್ ಸ್ಪರ್ಧೆ ಬೇಡ ಅಂತ ಆರಂಭದಲ್ಲೆ ಹೇಳಿದ್ದೆ. ಸಾಮಾನ್ಯ ಕಾರ್ಯಕರ್ತನನ್ನ ಸ್ಪರ್ಧೆ ಮಾಡಿಸುವಂತೆ ಹೇಳಿದ್ದೆ ಎಂದಿದ್ದಾರೆ.

Follow Us:
Download App:
  • android
  • ios