ಮಂಡ್ಯ ರೈತರ ಕಾವೇರಿ ಹೋರಾಟದ ಮಾದರಿಯಲ್ಲಿ, ತುಂಗಭದ್ರಾ ನೀರಿಗೆ ಬಳ್ಳಾರಿ ರೈತರ ಹೋರಾಟ ಆರಂಭ
ಕಾವೇರಿ ನೀರಿಗಾಗಿ ಮಂಡ್ಯ ರೈತರು ಹೋರಾಟ ಆರಂಭಿಸಿದ ಮಾದರಿಯಲ್ಲಿಯೇ ತುಂಗಭದ್ರಾ ನದಿ ನೀರಿಗಾಗಿ ಬಳ್ಳಾರಿ ರೈತರು ಹೋರಾಟ ಆರಂಭಿಸಿದ್ದಾರೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ಅ.30): ಅದು ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ.. ರಾಜ್ಯ ಸೇರಿದಂತೆ ಆಂಧ್ರ ಮತ್ತು ತೆಲಂಗಾಣದ ಕೆಲ ಜಿಲ್ಲೆಯ ರೈತರಿಗೆ ಇದೇ ಜಲಾಶಯದ ನೀರು ಹೋಗಬೇಕು.. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಜಲಾಶಯ ತುಂಬದ ಕಾರಣ ರೈತರಿಗೆ ಬೇಕಾದಷ್ಟು ನೀರು ಕಾಲೂವೆಯಲ್ಲಿ ಹರಿಯುತ್ತಿಲ್ಲ. ಆದ್ರೇ, ರೈತರು ಮಾತ್ರ ನೀರು ಕಾಲೂವೆಯಲ್ಲಿ ಹರಿಸದೇ ಇದ್ರೇ, ಬೆಳೆ ಹಾಳಾಗುತ್ತದೆ ಎಂದು ಬಳ್ಳಾರಿಯಿಂದ ಬೈಕ್ ರ್ಯಾಲಿ ಮೂಲಕ ತುಂಗಭದ್ರಾ ಆಡಳಿತ ಮಂಡಳಿ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿಯಿಂದ ತುಂಗಭದ್ರಾ ಜಲಾಶಯದತ್ತ ಬೈಕ್ ರ್ಯಾಲಿ ಮಾಡಿಕೊಂಡು ಹೋಗ್ತಿರೋ ಅನ್ನದಾತರು.. ಹೊಲದಲ್ಲಿ ಕೆಲಸ ಮಾಡೋದು ಬಿಟ್ಟು ಜಲಾಶಯ ಮುತ್ತಿಗೆ ಹಾಕಲು ಬೈಕ್ ಹತ್ತಿದ ರೈತರು. ದೀಪದ ಕೆಳಗೆ ಕತ್ತಲು ಎನ್ನುವಂತೆ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿಯೇ ರಾಜ್ಯದ ಎರಡನೇ ಅತಿದೊಡ್ಡ ತುಂಗಭದ್ರಾ ಜಲಾಶಯವಿದ್ರೂ ರೈತರಿಗೆ ನೀರು ಸಿಕ್ತಿಲ್ಲ. ಈ ಬಾರಿ ನಿರೀಕ್ಷೆಯಷ್ಟು ತುಂಬದ ಕಾರಣ ಮತ್ತು ಬಳ್ಳಾರಿ ಸೇರಿದಂತೆ ರಾಯಚೂರು, ಕೊಪ್ಪಳ, ವಿಜಯನಗರದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ.
ಬೆಂಗಳೂರು ಮಾಲ್‌ನಲ್ಲಿ ಲೈಂಗಿಕ ಕಿರುಕುಳ ವಿಡಿಯೋ ವೈರಲ್: ಪೊಲೀಸರ ಕೈಗೂ ಸಿಗದ ಕಾಮುಕ ಎಲ್ಲಿದ್ದಾನೆ?
ಮಲೆನಾಡಿನಲ್ಲೂ ಮಳೆ ಕೈಕೊಟ್ಟ ಕಾರಣ 100 ಟಿಎಂಸಿ ಸಾಮಾರ್ಥ್ಯದ ಜಲಾಶಯ ಈ ಬಾರಿ ಕೇವಲ 75 ಟಿಎಂಸಿ ಮಾತ್ರ ತುಂಬಿತ್ತು. ಹೀಗಾಗಿ ಜಲಾಶಯದಲ್ಲಿನ ನೀರಿನ ಲಭ್ಯತೆ ನೋಡಿಕೊಂಡು ಹೆಚ್ಎಲ್ಸಿ ಕಾಲುವೆಯಲ್ಲಿ ನವೆಂಬರ್ 10ರವರೆಗೆ ನೀರು ಬಿಡೋದಾಗಿ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ, ಡಿಸೆಂಬರ್ ಅಂತ್ಯದವರೆಗೂ ನೀರು ನೀಡದಿದ್ದರೆ ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ ಎಂದು ರೈತರು ಗೋಳಾಡುತ್ತಿದ್ದಾರೆ. ಹೀಗಾಗಿ ನೀರು ಬಿಡುಗಡೆಗೆ ಆಗ್ರಹಿಸಿ ಬಳ್ಳಾರಿಯಿಂದ ಟಿಬಿಡ್ಯಾಂ ವರೆಗೂ ಬೈಕ್ ರ್ಯಾಲಿ ಮೂಲಕ ತೆರಳಿ ಜಲಾಶಯದ ಮಂಡಳಿ ಕಚೇರಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಗಾರು ಕೈ ಕೊಟ್ಟ ಪರಿಣಾಮ ಸಂಕಷ್ಟ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಬಳ್ಳಾರಿ ಭಾಗದಲ್ಲಿಯೂ ಉತ್ತಮವಾಗಿ ಸುರಿದಿದ್ರೇ, ಮೊದಲು ಮಳೆ ನೀರು ನಂತರದಲ್ಲಿ ಕಾಲುವೆ ನೀರು ಬಳಸಲು ಅನುಕೂಲವಾಗುತ್ತಿತ್ತು. ಆದ್ರೇ, ಈ ಬಾರಿ ಕನಿಷ್ಠ ಮಳೆಯೂ ಆಗದ ಹಿನ್ನೆಲೆ ಸಂಪೂರ್ಣವಾಗಿ ಕಾಲೂವೆ ನೀರಿನ ಮೇಲೆ ಅವಲಂಬನೆ ಯಾಗುವಂತಾಗಿದೆ. ಅಲ್ಲದೇ ಬಳ್ಳಾರಿ, ಕೊಪ್ಪಳ ರಾಯಚೂರು ಮತ್ತು ವಿಜಯನಗರ ಜಿಲ್ಲೆ ಸೇರಿದಂತೆ ಆಂಧ್ರದ ಕರ್ನೂಲು ಅನಂತರಪುರ ಜಿಲ್ಲೆಗೆ ಕುಡಿಯುವ ನೀರು ಸೇರಿದಂತೆ ಲಕ್ಷಾಂತರ ಎಕರೆ ಬೆಳೆಗೆ ತುಂಗಭದ್ರ ಜಲಾಶಯದ ನೀರು ಬೇಕು. ಆದ್ರೇ, ಡಿಸೆಂಬರ್ ಅಂತ್ಯದವರೆಗೂ ಬೆಳೆಗಾಗಿ ನೀರು ಹರಿಯದೇ ಇದ್ರೇ,ಮೆಣಸಿನಕಾಯಿ, ಹತ್ತಿ ಸೇರಿದಂತೆ ಭತ್ತದ ಬೆಳೆ ಸಂಪೂರ್ಣವಾಗಿ ಹಾಳಾಗಲಿದೆ ಎನ್ನುವುದು ರೈತರಾದ ಪುರುಷೋತ್ತಮ ಗೌಡ, ವೀರೇಶ್, ಎರಿಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸಿಹಿಸುದ್ದಿ ಕೊಟ್ಟ ಕೆಎಸ್‌ಆರ್‌ಟಿಸಿ
ಹಿಂಗಾರು ಮಳೆಯಾದ್ರೂ ರೈತರ ಕೈಹಿಡಿಯುತ್ತದೆಯೇ?: ಎಕರೆಗೆ 25,000 ರೂ. ಖರ್ಚು ಮಾಡಿರೋ ರೈತರಿಗೆ ಇದೀಗ ಡಿಸೆಂಬರ್ ವರೆಗೂ ನೀರು ನೀಡದಿದ್ದರೆ ನಷ್ಟವಾಗೋದು ಖಚಿತ. ಹಾಗಂತ ಜಲಾಶಯದಲ್ಲಿರೋ ನೀರು ಎಲ್ಲವನ್ನು ಬಿಟ್ಟರೇ, ಬೇಸಿಗೆ ಕಾಲದವರೆಗೂ ಕುಡಿಯುವ ನೀರಿನ್ನು ನೀಡೋದು ಕಷ್ಟವಾಗುತ್ತದೆ. ಹೀಗಾಗಿ ಇದೀಗ ಹಿಂಗಾರು ಮಳೆಗಾಗಿ ದೇವರಲ್ಲಿ ಪ್ರಾಥನೆ ಮಾಡೋದು ಬಿಟ್ಟರೇ ಬೇರೆನು ದಾರಿಯಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.