ಮಂಡ್ಯ(ಮೇ 01)   ನಕಲಿ ದಾಖಲೆ ಸೃಷ್ಟಿ ಮಾಡಿ ಮಂಡ್ಯಕ್ಕೆ ಶವ ತರಲಾಗಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆರೋಪ ಮಾಡಿದ ನಂತರ ಜಿಲ್ಲಾಡಳಿತ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ.

ನಕಲಿ ದಾಖಲೆಗಳನ್ನ ಸೃಷ್ಟಿಸಿ ಶವ ತರಲಾಗಿದೆ ಎಂಬ ಎಚ್ಡಿಕೆ ಆರೋಪದ ಕಾರಣಕ್ಕೆ  ಮಹಾರಾಷ್ಟ್ರದ ದೇಸಾಯಿ ಆಸ್ಪತ್ರೆಯಿಂದ ಮಂಡ್ಯ ಜಿಲ್ಲಾಡಳಿತ ವರದಿ ಕೇಳಿದೆ.  ಮೃತ ವ್ಯಕ್ತಿಯ ಸಾವಿನ‌ ಕುರಿತಂತೆ ವಿಸ್ತೃತ ವರದಿ ನೀಡಲು ಡಿಸಿ ಡಾ.ವೆಂಕಟೇಶ್ ಸೂಚನೆ ನೀಡಿದ್ದಾರೆ. 

ಬೆಚ್ಚಿಬಿದ್ದ ಮಂಡ್ಯ; ಒಂದೇ ದಿನ 8 ಪಾಸಿಟಿವ್ ಕೇಸ್

ಮೃತ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಒರಿಜಿನಲ್‌ ಇದೆಯಾ?  ಮೃತ ವ್ಯಕ್ತಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತೆ?  ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿ ವರದಿ ಕಳುಹಿಸುವಂತೆ ಸೂಚನೆ ನೀಡಲಾಗಿದೆ. 

ಏ.23ರಂದು ಮುಂಬೈನ ದೇಸಾಯಿ ಆಸ್ಪತ್ರೆಯಲ್ಲಿ ಮಂಡ್ಯ ಮೂಲದ ವ್ಯಕ್ತಿ ಮೃತಪಟ್ಟಿದ್ದರು.  ಹಾರ್ಟ್ ಅಟ್ಯಾಕ್ ಎಂದು ಡೆತ್ ಸರ್ಟಿಫಿಕೇಟ್ ನೀಡಿ ಮೃತದೇಹವನ್ನ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಲಾಗಿತ್ತು.  ಏ.24ರಂದು ಸ್ವಗ್ರಾಮ ಕೊಡಗಳ್ಳಿಗೆ ಶವ ತಂದು ಅಂತ್ಯಕ್ರಿಯೆ ಮನಡೆಸಲಾಗಿತ್ತು. ಆದರೆ ಅಂತ್ಯಕ್ರಿಯೆ ಬಳಿಕ ಶವದ ಜೊತೆ ಬಂದಿದ್ದ ನಾಲ್ವರಲ್ಲಿ ಕೊರೊನಾ ಸೋಂಕು ಧೃಡಪಟ್ಟಿತ್ತು.