ಮಂಡ್ಯ: ಮನ್ ಮುಲ್ ಯಡವಟ್ಟಿನಿಂದ ಮೆಗಾ ಡೈರಿಗೆ ಬೆಂಕಿ ಬಿತ್ತಾ?
ಈಗಾಗಲೇ ಅಗ್ನಿಶಾಮಕ ದಳಕ್ಕೆ ವರದಿ ನೀಡಲು ಸೂಚನೆ ನೀಡಲಾಗಿದೆ. ಮೇಲ್ನೋಟಕ್ಕೆ ಮನ್ ಮುಲ್ ಲೋಪ ಎದ್ದು ಕಾಣುತ್ತಿದೆ. ಕಾನೂನು ಉಲ್ಲಂಘನೆಯಾಗಿದ್ರೆ ತನಿಖಾ ವರದಿ ಬಳಿಕ ಕ್ರಮ ತೆಗೆಕೊಳ್ಳಲಾಗುವುದು. ಸರ್ಕಾರಕ್ಕೆ ಘಟನೆ ಬಗ್ಗೆ ವರದಿ ಸಲ್ಲಿಸಲಾಗಿದೆ: ಜಿಲ್ಲಾಧಿಕಾರಿ ಡಾ.ಕುಮಾರ್

ಮಂಡ್ಯ(ಅ.10): ಮನ್ ಮುಲ್ ಮೆಗಾ ಡೈರಿಗೆ ಬೆಂಕಿ ಪ್ರಕರಣವನ್ನ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ತನಿಖೆಗೆ ಸೂಚಿಸಿದ್ದಾರೆ. ಮನ್ ಮುಲ್ ಯಡವಟ್ಟಿನಿಂದ ಅವಘಡ ಆಯ್ತಾ?, ಅಗ್ನಿಶಾಮಕ ದಳದಿಂದ ಎನ್ಒಸಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ವರದಿ ಬೆನ್ನಲ್ಲೇ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಎಚ್ಚೆತ್ತುಕೊಂಡಿದ್ದು ಪ್ರಕರಣವನ್ನ ತನಿಖೆಗೆ ಸೂಚಿಸಿದ್ದಾರೆ.
ಮೊನ್ನೆ ಮನ್ ಮುಲ್‌ಗೆ ಬೆಂಕಿ ಬಿದ್ದಿತ್ತು, ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನ ತಪ್ಪಿಸಿದ್ದರು. ಬಳಿಕ ನಾನು, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ವಿದ್ಯುತ್ ಅವಘಡಕ್ಕೆ ಕಾರಣ ಏನು ಎಂಬುದನ್ನ ತಿಳಿಯಲು ತನಿಖೆಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಬೆಂಕಿ ಭಾನುವಾರ: ಮಂಡ್ಯದ ಮನ್‌ಮುಲ್, ಶಿವಮೊಗ್ಗ ಮನೆ, ಕೊಡಗು ಶಾಲಾ ಬಸ್‌ನಲ್ಲಿ ಬೆಂಕಿ- ನಾಲ್ವರ ಸಾವು
ಸದ್ಯ ಘಟನೆಯಿಂದ 90 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಗ್ನಿಶಾಮಕ ದಳಕ್ಕೆ ವರದಿ ನೀಡಲು ಸೂಚನೆ ನೀಡಲಾಗಿದೆ. ಮೇಲ್ನೋಟಕ್ಕೆ ಮನ್ ಮುಲ್ ಲೋಪ ಎದ್ದು ಕಾಣುತ್ತಿದೆ. ಕಾನೂನು ಉಲ್ಲಂಘನೆಯಾಗಿದ್ರೆ ತನಿಖಾ ವರದಿ ಬಳಿಕ ಕ್ರಮ ತೆಗೆಕೊಳ್ಳಲಾಗುವುದು. ಸರ್ಕಾರಕ್ಕೆ ಘಟನೆ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಮಾಹಿತಿ ನೀಡಿದ್ದಾರೆ.