ಮದ್ದೂರು (ಮಾ.30):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಾಕತ್ತಿದ್ದರೆ ಮಂಡ್ಯ ನೆಲದಲ್ಲಿ ಬಂದು ತಮ್ಮ ಧೈರ್ಯ ಪ್ರದರ್ಶಿಸಲಿ ಎಂದು ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌ ಸವಾಲು ಹಾಕಿದರು.

ಮಂಡ್ಯದ ಮದ್ದೂರಿನಲ್ಲಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ಡಿಕೆಶಿ ಅವರ ಕಾರಿಗೆ ಚಪ್ಪಲಿ ತೂರಿ, ಕಪ್ಪು ಬಾವುಟ ಪ್ರದರ್ಶನ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. 

ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ : ಹೊಸ ಬಾಂಬ್ ...

ಡಿ.ಕೆ.ಶಿವಕುಮಾರ್‌ ರಾಜಕೀಯವಾಗಿ ಧೈರ್ಯವಾಗಿದ್ದ ಕಾರಣ ಬೆಳಗಾವಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಜಾರಕಿ ಹೊಳಿ ಬೆಂಬಲಿಗರು ಕಾರಿಗೆ ಚಪ್ಪಲಿ ತೂರಿ ತಮ್ಮ ದರ್ಪತೋರಿದ್ದಾರೆ. ರಮೇಶ್‌ ಜಾರಕಿ ಹೊಳಿ ಮತ್ತು ಬೆಂಬಲಿಗರಿಗೆ ಧೈರ್ಯವಿದ್ದರೆ ಮಂಡ್ಯಕ್ಕೆ ಬರಲಿ ಎಂದು ಸವಾಲು ಹಾಕಿದರು.