ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ : ಹೊಸ ಬಾಂಬ್
ಯಡಿಯೂರಪ್ಪ ಭೂಗತ ಆಗಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ ಇದೆ ಆ ಯುವತಿ ನನಗೆ ಜೀವಬೆದರಿಕೆ ಇದೆ ಅಂತ ಲಿಖಿತವಾಗಿ ದೂರು ಕೊಟ್ಟಿದ್ದಾಳೆ. ನನ್ನನ್ನ ಲೈಗಿಂಕವಾಗಿ ಬಳಸಿಕೊಂಡಿದ್ದಾರೆ ಅಂತ ಆರೋಪಿದ್ದಾಳೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೈ ನಾಯಕರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರು (ಮಾ.28): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೂಗತರಾಗಿದ್ದಾರೆ. ಯಡಿಯೂರಪ್ಪ ಭೂಗತ ಆಗಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್ ಗ್ರೇಟ್ ಬಿ.ಎಲ್.ಸಂತೋಷ್ ಎಲ್ಲಿದ್ದೀರಾ, ಎಲ್ಲಿ ನಿಮ್ಮ ಟ್ವಿಟ್. ಆ ಯುವತಿ ನನಗೆ ಜೀವಬೆದರಿಕೆ ಇದೆ ಅಂತ ಲಿಖಿತವಾಗಿ ದೂರು ಕೊಟ್ಟಿದ್ದಾಳೆ. ನನ್ನನ್ನ ಲೈಗಿಂಕವಾಗಿ ಬಳಸಿಕೊಂಡಿದ್ದಾರೆ ಅಂತ ಆರೋಪಿದ್ದಾಳೆ. ಆದರೂ 376(c) ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದೀರ. ಅಧಿಕಾರ ಇದೆ ಅಂತ ಹೆಂಡತಿ ಜೊತೆಗೂ ವ್ಯಕ್ತಿಯೊಬ್ಬ ಒತ್ತಾಯವಾಗಿ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ. ಈ ಕೇಸ್‌ನಲ್ಲಿ ರಮೇಶ್ ಜಾರಕಿಹೊಳಿಗೆ ಆ ಯುವತಿ ಮೇಲೆ ಅಧಿಕಾರ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಐಪಿಎಸ್ ಆಫಿಸರ್‌ಗಳೆ ನೀವು ಹಾಕಿರುವ ಕೇಸ್‌ಗಳಿಗೆ ಬೆಲೆ ಕಟ್ಟಬೇಕಾಗುತ್ತದೆ. ನಿರ್ಭಯ ಆಕ್ಟ್ ಅಡಿಯಲ್ಲಿ ದೂರು ದಾಖಲಾದ 8 ಗಂಟೆಯ ಒಳಗೆ ಬಂಧಿಸಬೇಕು. ಆದರೆ ನೀವು ಯಾಕಾಗಿ ಜಾರಕಿಹೊಳಿ ಬಂಧಿಸಿಲ್ಲ. ಜಾರಕಿಹೊಳಿ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಹಳೆ ಸರ್ಕಾರವನ್ನ ಬಿಳಿಸಿದವನಿಗೆ ಇದ್ಯಾವ ಲೆಕ್ಕ ಅಂತಾರೆ. ಆದರೂ ಅವರನ್ನ ಬಂಧಿಸಿಲ್ಲವೇಕೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಹೇಳಿದ್ದಾರೆ.
ಸೀಡಿ ಕೇಸ್ : ಈಗ ತಿರುಗಿ ಬಿದ್ರು ಡಿ.ಕೆ ಸುರೇಶ್
ನೀವು ಮಾಡಿರೋ ಕೆಲಸ ಮುಚ್ಚಿಕೊಳ್ಳಲು ಜಾತಿ ತರುತ್ತಿದ್ದೀರಾ. ಆ ಕೆಲಸ ಮಾಡುವಾಗ ಜಾತಿ ನೆನಪಾಗಿಲ್ಲ ಈಗ ಆಗಿದೆ. ಆ ಯುವತಿ ಪೋಷಕರಿಂದ ಜಾತಿ ಬಗ್ಗೆ ಹೇಳಿಕೆ ಕೊಡಿಸುತ್ತಿರಲ್ಲ ನಾಚಿಕೆ ಆಗುವುದಿಲ್ಲವೆ. ಜಾತಿ ಬಳಸಿಕೊಂಡು ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿದ್ದೀರಾ? ಸರ್ಕಾರ ಇಂತವ ಬಹಿರಂಗ ಹೇಳಿಕೆಗಳನ್ನ ಯಾಕೇ ಸಹಿಸಿಕೊಳ್ಳುತ್ತಿದೆ. ಯಡಿಯೂರಪ್ಪನವರೆ ನಿಮ್ಮ ಸೀಡಿ ಇದ್ದರೂ ಪರವಾಗಿಲ್ಲ ಕ್ರಮ ಕೈಗೊಳ್ಳಿ ಎಂದರು. ಬೇರೆ ಸಮಯದಲ್ಲಿ ಮಾತನಾಡುವ ಬಿಜೆಪಿಗರು ಈಗೆಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಅವಾಚ್ಯ ಪದ ಬಳಕೆ : ಕೆಪಿಸಿಸಿ ಅಧ್ಯಕ್ಷರ ವಿರುದ್ದ ರಮೇಶ್ ಜಾರಕಿಹೊಳಿ ಅವಾಚ್ಯ ಪದ ಬಳಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಲಕ್ಷ್ಮಣ್ ಮೈಸೂರಿನ ಕಾಂಗ್ರೆಸ್ ಪಕ್ಷದಿಂದ ಜಾರಕಿಹೊಳಿ ವಿರುದ್ದ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಹೇಳಿದರು.
ಜಾರಕಿಹೊಳಿ ವಿರುದ್ಧ ಮೈಸೂರಿನಲ್ಲಿ ದೂರು ಕೊಡುತ್ತೇವೆ. ನಂತರ ನ್ಯಾಯಾಲಯಕ್ಕೆ ಹೋಗಿ ಕೇಸು ದಾಖಲಿಸುತ್ತೇವೆ. ಸಾಧ್ಯವಾದರೆ ಹೈಕೋರ್ಟ್‌ನಲ್ಲೂ ಅರ್ಜಿ ಹಾಕುತ್ತೇವೆ ಎಂದರು.