ಎಚ್‌ಡಿಕೆಗೆ ಜನ ಉಗಿಯುತ್ತಿದ್ದಾರೆ : ಕಾಂಗ್ರೆಸ್ ಮುಖಂಡನ ವಿವಾದಿತ ಹೇಳಿಕೆ

First Published 18, Jul 2018, 11:09 AM IST
Mandya Congress Leader Slam CM Kumaraswamy
Highlights

ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಈಗ ಉಗಿಯುತ್ತಿದ್ದಾರೆ ಎಂದು ಮಂಡ್ಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಂಡ್ಯ  :  ಸಿಎಂ ಕುಮಾರಸ್ವಾಮಿಗೆ ಮತ ಹಾಕಿದ ಜನ ಈಗ ಉಗಿಯುತ್ತಿದ್ದಾರೆ ಎಂದು ಮಂಡ್ಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದ ಚಂದ್ರಶೇಖರ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸಭೆಯಲ್ಲಿ ಏಕವಚನದಲ್ಲಿಯೇ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

"

ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ನಂಬಿದ ಜನ ಅವರಿಗೆ ಮತ ಹಾಕಿದರು. ಆದರೆ ಸಿಎಂ ಆದ ಮೇಲೆ ಕುಮಾರಸ್ವಾಮು ಏನು ಮಾಡಿದರು ಎನ್ನುವುದು ಇದೀಗ ಜನರಿಗೆ ಅರ್ಥವಾಗಿದೆ.  ಅನೇಕ ಮಹಿಳೆಯರೂ ಕೂಡ ಸಾಲ ಮನ್ನಾ ಮಾಡುತ್ತಾರೆ ಎಂದೇ ಮತ ಹಾಕಿದರು. ಇದೀಗ ಕುಮಾರಸ್ವಾಮಿ ವಿರುದ್ದ ತಿರುಗಿ ಬಿದ್ದಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಕೆಲ ಬೂತ್ ನಲ್ಲಿ ಜೆಡಿಎಸ್ ಏಜೆಂಟ್ ಗಳೇ ಇರಲಿಲ್ಲ. ಪ್ರತಿ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು 50ರಿಂದ ನೂರು ಜನ ಇರುತ್ತಿದ್ದರು. ಆದರೆ ಜೆಡಿಎಸ್ ನವರು ಇಬ್ಬರಿಂದ ಮೂರು ಮಂದಿ ಮಾತ್ರವೇ ಇರುತ್ತಿದ್ದರು ಎಂದಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಹೇಳಿಕೆ ವಿವಾದಕ್ಕೀಡಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದೆ. 

loader